

ನವದೆಹಲಿ: ಕೊರೊನಾ ಸೋಂಕಿನಿಂದ ತತ್ತರಿಸಿರುವ ಚೀನಾದಲ್ಲಿ ವೈರಸ್ ಪತ್ತೆಯಾದ ಹಂದಿಗಳನ್ನು ಜೀವಂತವಾಗಿ ಸುಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಈ ವಿಡಿಯೋಗಳನ್ನು ಬಹುತೇಕ ಮಂದಿ ಫೇಸ್ಬುಕ್ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಕೊರೊನಾ ವೈರಸ್ ಹರಡುವುದನ್ನು ತಡೆಯಲು ಚೀನಾ ಸರ್ಕಾರ ಹಂದಿಗಳನ್ನು ನಾಶಪಡಿಸುತ್ತಿದೆ ಎಂದು ಶೀರ್ಷಿಕೆ ಬರೆದಿರುವ ವಿಡಿಯೋಗಳು ಹಂಚಿಕೆಯಾಗುತ್ತಿವೆ. ಆದರೆ ಈ ವಿಡಿಯೋ ನಕಲಿ ಎಂಬುದು ಫ್ಯಾಕ್ಟ್ ಚೆಕ್ನಿಂದ ಪತ್ತೆಯಾಗಿದೆ.
ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ವೈರಲ್ ಆಗಿರುವ ಈ ವಿಡಿಯೋ ದೃಶ್ಯ ಅಂದಾಜು ಒಂದು ವರ್ಷ ಹಳೆಯದು ಎಂದು ಕಂಡುಹಿಡಿದಿದೆ. ಚೀನಾದಲ್ಲಿ ಕೊರೊನಾ ವೈರಸ್ ಪತ್ತೆಯಾಗುವ ಮೊದಲು ಈ ವಿಡಿಯೋ ಚಿತ್ರೀಕರಿಸಲಾಗಿದೆ ಎಂಬುದನ್ನು ಪತ್ತೆ ಮಾಡಿದೆ.
ಚೀನಾದಲ್ಲಿ ವೈರಸ್ ಪತ್ತೆಯಾಗುವ ಮೊದಲು ಅಂದರೆ ಜ.11 2019ರಂದು ಚಿತ್ರೀಕರಿಸಿ ಯೂಟೂಬ್ಗೆ ಅಪ್ಲೋಡ್ ಮಾಡಲಾಗಿದೆ. ಹಂದಿಗಳನ್ನು ಜೀವಂತವಾಗಿ ಸುಡುವುದು ಹಾಗೂ ಹೂಳುವುದು ಎಂದು ಶೀರ್ಷಿಕೆ ಬರೆದು ಅಪ್ಲೋಡ್ ಮಾಡಲಾಗಿದೆ.
ಈ ಹಳೇ ವಿಡಿಯೋ ಅನ್ನು ಈಗ ಕೊರೊನಾ ವೈರಸ್ಗೆ ಸಂಪರ್ಕ ಕಲ್ಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಲಾಗುತ್ತಿದೆ. ಕೊರೊನಾ ವೈರಸ್ಗೂ ಹಂದಿಗಳನ್ನು ಜೀವಂತವಾಗಿ ಸುಡುವುದಕ್ಕೂ ಯಾವುದೇ ಸಂಬಂಧ ಎಲ್ಲ ಎಂಬುದು ಪತ್ತೆಯಾಗಿದೆ. (ಏಜೆನ್ಸೀಸ್)