

ಬೆಂಗಳೂರು: ರಾಜ್ಯ ರಾಜಧಾನಿ ಈಗ ಕರೊನಾ ರಾಜಧಾನಿಯಾಗುವತ್ತ ದಾಪುಗಾಲು ಇಟ್ಟಿದೆ. ಇದುವರೆಗೆ ಬೆಂಗಳೂರು ನಗರ ಪೊಲೀಸ್, ಬಿಎಂಟಿಸಿ, ವಿಕಾಸಸೌಧದಲ್ಲಿ ಕಾಣಿಸಿಕೊಂಡಿದ್ದ ಕರೊನಾ ಸೋಂಕು ಈಗ ಅಗ್ನಿಶಾಮಕದಳಕ್ಕೂ ಹಬ್ಬಿದೆ.
ಬೆಂಗಳೂರು ನಗರದ ಅಗ್ನಿಶಾಮಕದಳದ ನಿಯಂತ್ರಣ ಕೊಠಡಿಯಲ್ಲಿ ಕೆಲಸ ಮಾಡುವ ನೌಕರರೊಬ್ಬರಿಗೆ ಕರೊನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಆ ನೌಕರರನ್ನು ಅಗ್ನಿಶಾಮಕದಳದ ಕ್ವಾರ್ಟರ್ಸ್ನಲ್ಲೇ ಕ್ವಾರಂಟೈನ್ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಇದೀಗ ಕಂಟ್ರೋಲ್ ರೂಂ ಅನ್ನು ಸೀಲ್ ಡೌನ್ ಮಾಡದಿರಲು ನಿರ್ಧರಿಸಲಾಗಿದೆ. ಸದ್ಯ ಅಲ್ಲಿ ಸ್ಯಾನಿಟೈಸಿಂಗ್ ಕಾರ್ಯ ಕೈಗೊಳ್ಳಲಾಗಿದೆ. ಅಲ್ಲಿ ನಿಯೋಜನೆಗೊಂಡಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್ಗೆ ಒಳಪಡಿಸಲು ನಿರ್ಧರಿಸಲಾಗಿದ್ದು, ಅನ್ಯ ಸಿಬ್ಬಂದಿಯ ನೆರವಿನಿಂದ ಕಂಟ್ರೋಲ್ ರೂಂನ ಕಾರ್ಯಾಚರಣೆ ಮುಂದುವರಿಸುವುದಾಗಿ ಅಗ್ನಿಶಾಮಕದಳದ ಎಡಿಜಿಪಿ ಸುನಿಲ್ ಅಗರ್ವಾಲ್ ತಿಳಿಸಿದ್ದಾರೆ.