ದೇಶಿಯವಾಗಿ ಸಿದ್ಧವಾಗುತ್ತಿರುವ ಕೋವಿಡ್​ ಔಷಧ ಫ್ಯಾಬಿಫ್ಲೂ ಮಾತ್ರೆಯ ಬಗ್ಗೆ ಒಂದಷ್ಟು ಮಾಹಿತಿ...

fabiflu
Published on

ನವದೆಹಲಿ: ಈಗಾಗಲೆ ಬಹಿರಂಗವಾಗಿರುವಂತೆ ಮುಂಬೈ ಮೂಲದ ಗ್ಲೆನ್​ಮಾರ್ಕ್​ ಫಾರ್ಮಸ್ಯುಟಿಕಲ್ಸ್​ ಕಂಪನಿಯು ಕೋವಿಡ್​ ಔಷಧ ಫಾವಿಪಿರಾವಿರ್​ ಔಷಧವನ್ನು ಫ್ಯಾಬಿಫ್ಲೂ ಎಂಬ ಬ್ರ್ಯಾಂಡ್​ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇದಕ್ಕಾಗಿ ಅದು ಭಾರತೀಯ ಔಷಧ ಪ್ರಧಾನ ನಿಯಂತ್ರಕರಿಂದ (ಡಿಸಿಜಿಐ) ಅನುಮತಿಯನ್ನೂ ಪಡೆದುಕೊಂಡಿದೆ. ಆರಂಭಿಕ ಹಂತದಿಂದ ತೀವ್ರ ಗಂಭೀರವಲ್ಲದ ಹಂತದ ಕರೊನಾ ಸೋಂಕಿತರ ಚಿಕಿತ್ಸೆಗೆ ಬಳಸಬಹುದಾದ ಫ್ಯಾಬಿಫ್ಲೂ ಮಾತ್ರೆ ಕೆಲವೇ ದಿನಗಳಲ್ಲಿ ಮಾರುಕಟ್ಟೆ ಬಿಡುಗಡೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಫ್ಲಾಬಿಫ್ಲೂ ಬಗೆಗಿನ ಮಾಹಿತಿಯನ್ನು ಇಲ್ಲಿ ಕೊಡಲಾಗುತ್ತಿದೆ.

ಫ್ಯಾಬಿಫ್ಲೂ ಮಾತ್ರೆ ತಲಾ 200 ಎಂಜಿಯ 34 ಮಾತ್ರೆಗಳ ಒಂದು ಬಾಕ್ಸ್​ನಲ್ಲಿ ಲಭ್ಯವಾಗಲಿದೆ. ಇದರ ದರ 3,500 ರೂ. ಆಗಿದೆ. ಅಂದರೆ ಒಂದು ಮಾತ್ರೆಗೆ 103 ರೂ. ಆಗಲಿದೆ. ಆರಂಭಿಕ ಹಂತದ ಸೋಂಕಿತರಿಗೆ ಮೊದಲ ದಿನ ದಿನಕ್ಕೆ ಎರಡು ಬಾರಿಯಂತೆ 9 ಮಾತ್ರೆಗಳನ್ನು (1800 ಎಂಜಿ) ಕೊಡಬೇಕಾಗುತ್ತದೆ. 14ನೇ ದಿನದ ಚಿಕಿತ್ಸೆಯಲ್ಲಿ ದಿನಕ್ಕೆ ಎರಡು ಬಾರಿಯಂತೆ 4 ಮಾತ್ರೆಗಳು (800 ಎಂಜಿ) ಕೊಡಬೇಕಾಗುತ್ತದೆ.

ಭಾರತದ 11 ಸ್ಥಳಗಳಲ್ಲಿ 90 ಆರಂಭಿಕ ಮತ್ತು ತೀವ್ರ ಗಂಭೀರವಲ್ಲದ ಕರೊನಾ ಸೋಂಕಿತರಿಗೆ ಈ ಮಾತ್ರೆಗಳನ್ನು ಕೊಟ್ಟು ಪರೀಕ್ಷಿಸಲಾಗಿದೆ. ಇವರಲ್ಲಿ ಶೇ.80 ಸೋಂಕಿತರು ತುಂಬಾ ಬೇಗನೆ ಚೇತರಿಸಿಕೊಂಡಿದ್ದಾಗಿ ಹೇಳಲಾಗಿದೆ.

ಬೆಂಗಳೂರು ಮೂಲದ ಸ್ಟ್ರೈಡ್ಸ್​ ಫಾರ್ಮ, ಹೈದರಾಬಾದ್​ ಮೂಲದ ಆಪ್ಟಿಮಸ್​ ಫಾರ್ಮ, ಮುಂಬೈ ಮೂಲದ ಲಾಸಾ ಸೂಪರ್​ಜೆರ್ನಿಕ್ಸ್​ ಮತ್ತು ದೆಹಲಿ ಮೂಲದ ಬ್ರಿಂಟನ್​ ಫಾರ್ಮಸ್ಯೂಟಿಕಲ್ಸ್​ ಕಂಪನಿಗಳು ಕೂಡ ಇದೀಗ ಫ್ಲಾಬಿಫ್ಲೂ ಮಾತ್ರೆಗಳನ್ನು ತಮ್ಮದೇ ಬ್ರ್ಯಾಂಡ್​ ನೇಮ್​ಗಳಲ್ಲಿ ಬಿಡುಗಡೆ ಮಾಡಲು ಡಿಸಿಜಿಐಗೆ ಅನುಮತಿ ಕೋರಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಫಾವಿಪಿರಾವಿರ್​ ಔಷಧ ಭಾರತದ ಮಾರುಕಟ್ಟೆಯಲ್ಲಿ ಯಥೇಚ್ಚವಾಗಿ ಸಿಗುವುದು ನಿಶ್ಚಿತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net