

ಬೆಂಗಳೂರು: ಮೊದಲೇ ಆರ್ಥಿಕ ಹಿಂಜರಿತದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ವ್ಯಾಪಾರ ಉದ್ಯಮಕ್ಕೀಗ ಚೀನಾದ್ಯಂತ ವ್ಯಾಪಿಸುತ್ತಿರುವ ಕರೊನಾ ಗಾಯದ ಮೇಲೆ ಬರೆ ಎಳೆದಿದೆ. ಈ ಮಹಾಮಾರಿಯ ಆರ್ಭಟದಿಂದಾಗಿ ಭಾರತ ಹಾಗೂ ಚೀನಾ ನಡುವಿನ ಆಮದು, ರಫ್ತು ಸ್ಥಗಿತಗೊಂಡಿರುವ ಪರಿಣಾಮ ಕರ್ನಾಟಕದ ವ್ಯಾಪಾರ ಕ್ಷೇತ್ರಕ್ಕೆ ಆಘಾತ ಎದುರಾಗಿದೆ. ರಾಜ್ಯದ ಎಲೆಕ್ಟ್ರಾನಿಕ್ಸ್, ಕೃಷಿ, ಕೈಗಾರಿಕೆ ಇನ್ನಿತರ ವ್ಯಾಪಾರ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಕಂಡು ಬಂದಿದ್ದು, ಚೀನಾ ಉತ್ಪನ್ನಗಳ ಸಗಟು ಹಾಗೂ ಅಂಗಡಿ ವ್ಯಾಪಾರಕ್ಕೂ ಪೆಟ್ಟು ಬಿದ್ದಿದೆ.
ರಾಜ್ಯದಿಂದ ಒಣದ್ರಾಕ್ಷಿ, ಒಣಮೆಣಸಿನ ಕಾಯಿ, ರೇಷ್ಮೆ, ಗುಲಾಬಿ ಹೂ ಸೇರಿದಂತೆ ಚೀನಾಕ್ಕೆ ರಫ್ತಾಗುತ್ತಿದ್ದ ಬಹುತೇಕ ಕೃಷಿ ಉತ್ನನಗಳು ಹಾಗೂ ಆಟೋಮೊಬೈಲ್ಸ್ ಬಿಡಿಭಾಗಗಳ ರಫ್ತು ಸ್ಥಗಿತಗೊಂಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಶೇ.60ಕ್ಕೂ ಹೆಚ್ಚು ವ್ಯಾಪಾರಿಗಳು ಚೀನಾ ಉತ್ಪನ್ನಗಳ ಮಾರಾಟ ಅವಲಂಬಿಸಿದ್ದಾರೆ.
ವಾಸ್ತವದಲ್ಲಿ ಚೀನಾ ವಸ್ತುಗಳ ಕೊರತೆಯಾದರೆ ಆ ಜಾಗದಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಬೇಕು. ಆದರೆ, ವ್ಯಾಪಾರಿಗಳಿಗೆ ಹಾಗೂ ಚೀನಾಕ್ಕೆ ರಫ್ತಾಗುವ ಕೃಷಿ ಉತ್ಪನ್ನಗಳ ಮೇಲೆ ಪರಿಣಾಮ ಬೀರಲಿದೆ ಎಂಬುದು ತಜ್ಞರ ಅಭಿಮತ.
ಹಣ್ಣುಗಳು ಸಿಗುತ್ತಿಲ್ಲ
ಚೀನಾದ ಯಾವ ಹಣ್ಣುಗಳೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಮಾರ್ಬಲ್ ಆರೆಂಜ್, ಮಿನಿ ಆರೆಂಜ್, ಸಿಜಿ ಆಪಲ್, ಗೋಲ್ಡನ್ ಪರ್ಲ್, ಡ್ರಾ್ಯಗನ್ ಫ್ರೂಟ್, ಚೀನಾ ದ್ರಾಕ್ಷಿ, ಮರಸೇಬು ಬರುತ್ತಿಲ್ಲ. ಈ ಹಣ್ಣುಗಳಿಗೇನು ಹೆಚ್ಚಿನ ಬೇಡಿಕೆ ಇಲ್ಲ. ಆದರೆ ಹಣ್ಣುಗಳು ಇದ್ದಾಗ ಕೊಂಡು ಹೋಗುತ್ತಾರೆ. ಡ್ರಾ್ಯಗನ್ ಫ್ರೂಟ್ ತಿಂದರೆ ಕ್ಯಾನ್ಸರ್ ರೋಗ ನಿಯಂತ್ರಣಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಬೇಡಿಕೆ ಇದೆ. ಆದರೆ ಈಗ ಮಹಾರಾಷ್ಟ್ರದಿಂದಲೂ ಡ್ರಾ್ಯಗನ್ ಫ್ರೂಟ್ ಬರುವುದರಿಂದ ಸಮಸ್ಯೆ ಇಲ್ಲ ಎನ್ನುತ್ತಾರೆ ಶಿವಾಜಿನಗರದ ರಸಲ್ ಮಾರುಕಟ್ಟೆ ಹಣ್ಣಿನ ವ್ಯಾಪಾರಿಗಳು.
ಏನು ಪರಿಣಾಮ?
ಮೊಬೈಲ್ ವ್ಯಾಪಾರಕ್ಕೆ ಹಿನ್ನಡೆ
ಚೀನಾದಿಂದ ವಿವೋ, ಒಪ್ಪೋ ಸೇರಿ ವಿವಿಧ ಕಂಪನಿಯ ಮೊಬೈಲ್ಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಮುಂದಿನ ತಿಂಗಳವರೆಗೆ ಮೊಬೈಲ್ ಹಾಗೂ ಇತರ ಸಾಮಗ್ರಿ ತಲುಪದೆ ಇರುವುದರಿಂದ ವ್ಯಾಪಾರದ ಮೇಲೆ ಹೊಡೆತ ಬಿದ್ದಿದೆ ಎಂದು ಹಾಸನ ಜಿಲ್ಲೆ ಮೊಬೈಲ್ ಮಾರಾಟ ಪ್ರತಿನಿಧಿಗಳು ಹೇಳುತ್ತಾರೆ. ಕರೊನಾ ವೈರಸ್ ನೂರಾರು ಮೊಬೈಲ್ ಡೀಲರ್ಗಳ ಮೇಲೆ ದುಷ್ಪರಿಣಾಮ ಬೀರಿದೆ. ಮಂಡ್ಯ ಜಿಲ್ಲೆಗೆ ಬರುತ್ತಿದ್ದ ಮೊಬೈಲ್ ಸಾಮಗ್ರಿಗಳ ಪ್ರಮಾಣ ತೀರಾ ಕಡಿಮೆಯಾಗಿದೆ. ಪರಿಣಾಮ ಮೊಬೈಲ್ ಅಂಗಡಿ ಮಾಲೀಕರು ಇರುವ ವಸ್ತುಗಳ ಬೆಲೆಯನ್ನು ಶೇ.10ರಿಂದ 20ರಷ್ಟು ಹೆಚ್ಚಿಸಿ ಮಾರಾಟ ಮಾಡುತ್ತಿದ್ದಾರೆ. ಬ್ಯಾಟರಿ, ಬ್ಲೂಟೂಥ್, ಗ್ಲಾಸ್, ಪೌಚ್ ಸೇರಿ ಬಹುತೇಕ ಮೊಬೈಲ್ ಸಾಮಗ್ರಿಗಳು ಚೀನಾದಿಂದಲೇ ಆಮದು ಆಗುತ್ತವೆ. ಇನ್ನೂ 15ರಿಂದ 20 ದಿನ ಆಮದು ಪ್ರಮಾಣ ಕಡಿಮೆ ಎನ್ನಲಾಗುತ್ತಿದೆ.
ಚೀನಾ ವಸ್ತುಗಳ್ಯಾವುವು?
ರಾಜ್ಯದಲ್ಲಿ ಪ್ರಮುಖವಾಗಿ ಮೊಬೈಲ್ ಸೆಟ್ಗಳು, ಗೊಂಬೆ, ಮಕ್ಕಳ ಆಟಿಕೆಗಳು, ಪ್ಲಾಸ್ಟಿಕ್ ವಸ್ತುಗಳು, ಅಲಂಕಾರಿಕ ವಸ್ತುಗಳು, ಪ್ಲಾಸ್ಟಿಕ್ ಹೂಗಳು, ಹೂ ಕುಂಡಗಳು, ಆಕರ್ಷಕ ಪ್ಲಾಸ್ಟಿಕ್ ತೋರಣಗಳು, ಗಿಫ್ಟ್ ಐಟಮ್್ಸ, ಎಲೆಕ್ಟ್ರಾನಿಕ್ಸ್ ಉಪಕರಣಗಳು, ಫ್ಯಾನ್ಸಿ ಐಟಮ್್ಸ, ಸ್ಮೈಲಿಂಗ್ ಬುದ್ಧ ಸೇರಿದಂತೆ ನಾನಾ ಪ್ರತಿಮೆಗಳು, ಕಾಸ್ಮಟಿಕ್ಸ್, ಗಾಗಲ್ಸ್, ಕನ್ನಡಕ ಫ್ರೇಮ್ಳು, ಸ್ವೆಟರ್ಗಳು, ಬ್ಯಾಗ್ಗಳು, ಚಪ್ಪಲಿಗಳು, ರೇಷ್ಮೆ ವಸ್ತ್ರಗಳು ಇತ್ಯಾದಿ ದಿನಬಳಕೆ ವಸ್ತುಗಳು ಬಹುತೇಕ ಚೀನಾ ಉತ್ಪನ್ನಗಳೇ ಆಗಿವೆ. ಈ ವಸ್ತುಗಳು ಗುಣಮಟ್ಟವಿಲ್ಲದಿದ್ದರೂ ಕಡಿಮೆ ದರ ಎಂಬ ಕಾರಣಕ್ಕೆ ಜನರು ಹೆಚ್ಚು ಅವಲಂಬಿತರಾಗಿದ್ದಾರೆ.