ರಾಷ್ಟ್ರದಲ್ಲಿ 24 ತಾಸಿನಲ್ಲಿ 46 ಮಂದಿ ಕರೊನಾ ವೈರಸ್​ ಸೋಂಕಿಗೆ ಬಲಿ: 809 ಹೊಸ ಸೋಂಕಿತರು ಪತ್ತೆ

carona logo
Published on

ನವದೆಹಲಿ: ರಾಷ್ಟ್ರದಲ್ಲಿ ಕಳೆದ 24 ತಾಸಿನಲ್ಲಿ 46 ಮಂದಿ ಕರೊನಾ ವೈರಸ್​ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ರಾಷ್ಟ್ರದಲ್ಲಿ ಕರೊನಾ ವೈರಸ್​ ಹರಡುವಿಕೆ ತೀವ್ರವಾಗಿದ್ದು ಒಂದೇ ದಿನ 809 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ 25 ಮಂದಿ, ದೆಹಲಿಯಲ್ಲಿ 3, ಗುಜರಾತ್​ ಹಾಗೂ ಜಾರ್ಖಂಡ್​ ರಾಜ್ಯಲ್ಲಿ ತಲಾ ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.

ರಾಷ್ಟ್ರದಲ್ಲಿ ಕರೊನಾ ವೈರಸ್​ಗೆ ಒಟ್ಟು 199 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 6,412ಕ್ಕೆ ಏರಿಕೆಯಾಗಿದೆ. ಇವರಲ್ಲಿ 503 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರಾಷ್ಟ್ರದಲ್ಲಿ ಲಾಕ್​ಡೌನ್​ ಅವಧಿ ಏ.14ಕ್ಕೆ ಅಂತ್ಯಗೊಳ್ಳಲಿದ್ದು, ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ತಿಂಗಳ ಅಂತ್ಯದವರೆಗೂ ಲಾಕ್​ಡೌನ್​ ಮುಂದುವರೆಸಬಹುದು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net