More

    ಜಮೀನಿಗೆ ಹೋಗುತ್ತಿದ್ದ ರೈತನ ಮೇಲೆರಗಿದವು ಕರಡಿಗಳು: ಇಂದು ಬೆಳ್ಳಂಬೆಳಗ್ಗೆ ನಡೆದ ದಾಳಿ!

    ದಾವಣಗೆರೆ: ಜಿಲ್ಲೆಯ ವಿವಿಧ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕರಡಿ ಉಪಟಳ ಹೆಚ್ಚಾಗಿದ್ದು, ಪದೇಪದೆ ಕರಡಿ ದಾಳಿ ಘಟನೆಗಳು ಸುದ್ದಿಯಾಗುತ್ತಲೇ ಇವೆ. ಶುಕ್ರವಾರ ಬೆಳ್ಳಂಬೆಳಗ್ಗೆಯೇ ಇಂಥದ್ದೇ ಘಟನೆ ಮರುಕಳಿಸಿದ್ದು ರೈತನ ಮೇಲೆ ಹಿಂಬದಿಯಿಂದ ದಾಳಿ ಎಸಗಿರುವುದು ಕಂಡುಬಂದಿದೆ.

    ಈ ಕರಡಿ ದಾಳಿ ಘಟನೆ ಜಗಳೂರು ತಾಲೂಕಿನ ಬಸವನ ಕೋಟೆ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ಮುಂಜಾನೆ ರೈತ ದುರುಗಪ್ಪ ತಮ್ಮ ಜಮೀನಿಗೆ ಹೋಗುವ ದಾರಿಯ ಮಧ್ಯೆ ಕರಡಿಗಳು ದಾಳಿ ನಡೆಸಿವೆ. ಕರಡಿಗಳು ಹಿಂಬದಿಯಿಂದ ಬರುತ್ತಿದ್ದುದು ದುರುಗಪ್ಪ ಅವರ ಅರಿವಿಗೆ ಬಂದಿರಲಿಲ್ಲ. ದಾಳಿ ನಡೆಸಿದ ಮೇಲೆ ತಿರುಗಿ ನೋಡಿದಾಗ ಎರಡು ಕರಡಿಗಳಿರುವುದನ್ನು ಅವರು ಗಮನಿಸಿದ್ದರು. ಈ ದಾಳಿಯ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು ಹೀಗೆ-
    “ಬೆಳಗ್ಗೆ ಜಮೀನಿಗೆ ಹೊರಟಿದ್ದೆ. ದಾರಿ ಮಧ್ಯೆ ಹಿಂಬದಿಯಿಂದ ಕರಡಿಗಳು ಬರುತ್ತಿರುವುದು ಗಮನಕ್ಕೆ ಬಂದಿರಲಿಲ್ಲ. ಅವುಗಳು ದಿಢೀರ್ ದಾಳಿ ನಡೆಸಿದಾಗ ಭಯಭೀತನಾಗಿ ಹಿಂದಕ್ಕೆ ತಿರುಗಿ ನೋಡಿದ್ದೆ. ಅವು ದಾಳಿ ಎಸಗುವಷ್ಟರಲ್ಲಿ ಸತ್ತವನಂತೆ ಮಲಗಿ ಬಿಟ್ಟೆ. ಉಸಿರು ಬಿಗಿ ಹಿಡಿದಿದ್ದೆ. ಕಾಲಿನ ಮೇಲೆ ಪರಚಿ ಗಾಯ ಮಾಡಿದ ಅವುಗಳು ಬಳಿಕ ಹಿಂದಿರುಗಿದವು. ರಕ್ತ ಸೋರುತ್ತಿದ್ದ ಕಾಲುಗಳೊಂದಿಗೆ ಹಾಗೇ ಊರಿಗೆ ಮತ್ತೆ ಓಡೋಡಿ ಬಂದೆ” ಎಂದು ಅವರು ಘಟನೆಯನ್ನು ವಿವರಿಸಿದ್ದಾರೆ.

    ಗ್ರಾಮಸ್ಥರು ಕೂಡಲೇ ಆ್ಯಂಬುಲೆನ್ಸ್​ಗೆ ಕರೆ ಮಾಡಿ, ದಾವಣಗೆರೆ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲಿ ಅವರೀಗ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಗೋವಾದಲ್ಲಿ ಕರೊನಾಕ್ಕೆ ಆಯುರ್ವೇದದ ಚಿಕಿತ್ಸೆ- ಆಧಾರ ಏನಿದೆ ಎಂದು ಪ್ರಶ್ನಿಸಿದ ಗೋವಾ ಫಾರ್ವಡ್​ ಪಾರ್ಟಿ

    ಅಸಹ್ಯ! ಲಾಕ್​ಡೌನ್ ನಿಯಮ ಗಾಳಿಗೆ ತೂರಿ ಬಯಲಿಗೆ ಬಂತು ಜೋಡಿ- ಅವರ ಕಾಮದಾಟ ನೋಡಿ ಸುತ್ತಮುತ್ತಲಿನವರು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts