

ಕೋಲಾರ: ಮುಂದುವರಿದ ರಾಷ್ಟ್ರಗಳು ಕರೊನಾಗೆ ಲಸಿಕೆ ತಯಾರಿಸಲಾಗದೆ ತತ್ತಿರಿಸುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಜ್ಞಾನಿ, ಉದ್ದಿಮೆದಾರರ ಸಹಕಾರದೊಂದಿಗೆ ಲಸಿಕೆ ತಯಾರಾಗುವಂತೆ ನೋಡಿಕೊಂಡರು. ಅಷ್ಟೇ ಅಲ್ಲದೆ ವರ್ಷದಲ್ಲಿ ಶೇಕಡಾ 90 ಜನರಿಗೆ ಲಸಿಕೆ ನೀಡುವಂತಾಗಲು ಅವರ ಪ್ರಾವಾಣಿಕ ಪ್ರಯತ್ನವಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್. ವೇಣುಗೋಪಾಲ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಾತನಾಡಿ, ವಿರೋಧ ಪಕ್ಷಗಳ ಅಸಹಕಾರದ ನಡುವೆಯೂ ರಾಷ್ಟ್ರದಲ್ಲಿ ಕೋವಿಡ್ ಲಸಿಕೆ ಅಭಿಯಾನ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ. ಕಳೆದ ಜ.16ರಿಂದ ಈ ವರ್ಷದ ಜ. 16ರವರೆಗೆ 157 ಕೋಟಿಗೂ ಹೆಚ್ಚು ಉಚಿತ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ, 66 ಕೋಟಿ ಜನ 2 ಡೋಸ್ ಪಡೆದಿದ್ದಾರೆ. 91 ಕೋಟಿ ಜನ ಮೊದಲ ಡೋಸ್ ಪಡೆದಿದ್ದಾರೆ ಎಂದರು.
ಜಿಲ್ಲೆಯಲ್ಲಿ ಇದುವರೆವಿಗೆ 12 ಲಕ್ಷ ಜನ ಮೊದಲ ಡೋಸ್ ಪಡೆದು ಶೇ.99ರಷ್ಟು, 9 ಲಕ್ಷ ಎರಡನೇ ಡೋಸ್ ಪಡೆದು ಶೇ. 81ರಷ್ಟು ಸಾಧನೆ ವಾಡಿರುವುದಲ್ಲದೆ, ಪ್ರಸ್ತುತ 15ರಿಂದ 17 ವರ್ಷದ ಮಕ್ಕಳಿಗೂ ಲಸಿಕೆ ನೀಡಲು ಪ್ರಾರಂಭಿಸಿದ್ದು, 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ ಎಂದರು.
ಪೋಲಿಯೋ ಲಸಿಕೆ ಭಾರತಕ್ಕೆ ತಲುಪಲು 23 ವರ್ಷ ತೆಗೆದುಕೊಂಡರೆ, ಧನುರ್ವಾಯು ಲಸಿಕೆ ಜಗತ್ತಿಗೆ ಬಂದ 54 ವರ್ಷದ ನಂತರ ನಮ್ಮ ದೇಶ ತಲುಪಿತು. ಕೋವಿಡ್ ಲಸಿಕೆಯನ್ನು ಕೇವಲ ಒಂದು ವರ್ಷದಲ್ಲಿ ಕಂಡು ಹಿಡಿದು ಜನರಿಗೆ ನೀಡುವಲ್ಲಿ ಯಶಸ್ವಿಯಾಗಿರುವುದು ಹೆಮ್ಮೆಯ ವಿಷಯ ಎಂದರು.
ಕಾಂಗ್ರೆಸ್ ಅಸಹಕಾರ: ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಅಸಹಕಾರ, ಅಪಪ್ರಚಾರ, ಅಪನಂಬಿಕೆಯಿಂದ ಲಸಿಕೆ ವ್ಯರ್ಥವಾಗಿದ್ದಲ್ಲದೆ, ಕತಕ ಅಭಾವ ಸಷ್ಟಿ ವಾಡಿ ಜನರ ಸಹಾನುಭೂತಿ ಪಡೆಯುವ ಪ್ರಯತ್ನ ವಾಡಿ ವ್ಯಾಕ್ಸಿನೇಷನ್ ವೇಗವನ್ನು ನಿಧಾನ ಗೊಳಿಸಲಾಯಿತು. ಆದರೆ ಜನರು ದೇಸಿ ಲಸಿಕೆ ಮೇಲೆ ನಂಬಿಕೆ ಇಟ್ಟು ಪಡೆದಿದ್ದು, ಜನರ ಆರೋಗ್ಯ ಕಾಪಾಡುವಲ್ಲಿ ಶ್ರಮಿಸಿದ ಲಕ್ಷಾಂತರ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ, ವೈದ್ಯರಿಗೆ, ವಿಜ್ಞಾನಿಗಳಿಗೆ ಕತಜ್ಞತೆ ಸಲ್ಲಿಸುವುದು ಎಲ್ಲರ ಕರ್ತವ್ಯ ಎಂದರು. ಪಕ್ಷದ ಜಿಲ್ಲಾ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಜಿಲ್ಲಾ ಕೋರ್ ಕಮಿಟಿ ಸದಸ್ಯ ವಿಜಯಕುವಾರ್, ಗ್ರಾವಾಂತರ ಅಧ್ಯಕ್ಷ ಸಿ.ಡಿ.ರಾಮಚಂದ್ರೇಗೌಡ, ನಗರ ಟಕ ಅಧ್ಯಕ್ಷ ತಿಮ್ಮರಾಯಪ್ಪ, ವಾಧ್ಯಮ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಜಿಲ್ಲೆಯ ಅಭಿವೃದ್ಧಿ ದಷ್ಟಿಯಿಂದ ಮುಂದಿನ ಬಜೆಟ್ ವೇಳೆ ಡ್ರಿಪ್ ಇರಿಗೇಷನ್, ಕಷಿ ಹೊಂಡಗಳನ್ನು ಮರು ಮಂಜೂರು ವಾಡಬೇಕು. ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸಬೇಕು. ಜಿಲ್ಲೆಯಲ್ಲಿ ಎರಡು ಆಗ್ರೋ ಪ್ರೊಸೆಸಿಂಗ್ ಕ್ಲಸ್ಟರ್ ಪ್ರಾರಂಭಿಸಬೇಕು. ಕೆಜಿಎಫ್‌ನಲ್ಲಿ ಕೈಗಾರಿಕೆ ಪ್ರಾರಂಭಕ್ಕೆ ಆದ್ಯತೆ ನೀಡುವಂತೆ ಮುಖ್ಯ ಮಂತ್ರಿಗಳಲ್ಲಿ ಮನವಿ ವಾಡಲಾಗಿದೆ. ಡಾ.ಕೆ.ಎನ್. ವೇಣುಗೋಪಾಲ್, ಬಿಜೆಪಿ ಜಿಲ್ಲಾಧ್ಯಕ್ಷ