1000 ರೂ.ಗೆ  ಕರೊನಾ ಲಸಿಕೆ?: ಸೆಪ್ಟಂಬರ್​ ವೇಳೆಗೆ ಮಾರುಕಟ್ಟೆಗೆ

corona-virus_1580141672
Published on

ನವದೆಹಲಿ: ಆಕ್ಸ್​ಫರ್ಡ್​ನ ಮಾರ್ಗದರ್ಶನದೊಂದಿಗೆ ಕರೊನಾ ವೈರಸ್ ಲಸಿಕೆ ಸಿದ್ಧಪಡಿಸುವಿಕೆಯಲ್ಲಿ ತೊಡಗಿಸಿಕೊಂಡಿರುವ ಪುಣೆಯ ಸೇರಂ ಇನ್​ಸ್ಟಿಟ್ಯೂಟ್​ (ಎಸ್​ಐಐ) ಭಾರತದಲ್ಲಿ ಸಾವಿರ ರೂಪಾಯಿಗೆ ಲಸಿಕೆಯ ಒಂದು ಡೋಸೇಜ್ ಮಾರಾಟ ಮಾಡುವುದಾಗಿ ತಿಳಿಸಿದೆ.

ಲಸಿಕೆಯನ್ನು ಸೆಪ್ಟೆಂಬರ್​ನೊಳಗೆ ಸಿದ್ಧಪಡಿಸಿ ಮಾರುಕಟ್ಟಗೆ ತರುವುದಾಗಿ ಸಂಸ್ಥೆ ಹೇಳಿದೆ. ಮೇ ತಿಂಗಳಿನಲ್ಲಿ ಭಾರತೀಯರ ಮೇಲೆ ಲಸಿಕೆ ಪ್ರಯೋಗಿಸಲಾಗುವುದು. ಸುಮಾರು 100 ರೋಗಿಗಳ ಮೇಲೆ ಪ್ರಯೋಗ ನಡೆಸುವ ಸಾಧ್ಯತೆ ಇದೆ. ಸೆಪ್ಟೆಂಬರ್​ನಲ್ಲಿ ಲಸಿಕೆಯ ಕೊನೆಯ ಪ್ರಯೋಗ ಬ್ರಿಟನ್​ನಲ್ಲಿ ನಡೆಯಲಿದ್ದು ಅದು ಯಶಸ್ವಿಯಾದೊಡನೆ ಮಾರುಕಟ್ಟೆಗೆ ಬಿಡಲಾಗುವುದು. ಭಾರತದಲ್ಲಿ ಒಂದು ಡೋಸೇಜ್​ಗೆ 1,000 ರೂ. ನಿಗದಿ ಮಾಡುವ ಯೋಚನೆಯಿದೆ ಎಂದು ಇನ್​ಸ್ಟಿ್ಟ್ಯೂಟ್​ನ ಮುಖ್ಯಸ್ಥ ಅದಾರ್ ಪೂನಾವಾಲಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net