ಕರೊನಾ ವಿಷಕಲೆ ಮಾವೋವಾದದ ಯುದ್ಧ ಕಲೆ

edt 1
Published on

ಚೀನಾದಲ್ಲಿ ಏನಾಗುತ್ತಿದೆ ಎಂಬುದು ಜಗತ್ತಿನ ಯಾವ ಮಾಧ್ಯಮಗಳಲ್ಲೂ ಸುದ್ದಿಯಾಗದು, ತಾನಾಗೇ ವಿಷಯವನ್ನು ಬಿಟ್ಟುಕೊಡದ ಹೊರತು ಚೀನಾದ ಆಂತರಿಕ ವಿಷಯ ಎಂದು ಎಲ್ಲಿಯೂ ಚರ್ಚೆಯಾಗುವುದಿಲ್ಲ. ಚೀನಾದ ಪ್ರವಾಸಕ್ಕೆ ಹೋದರೆ ಅಲ್ಲಿನ ಸರ್ಕಾರ ನಿಮಗೆ ಏನನ್ನು ತೋರಿಸಬಯಸುತ್ತದೆಯೋ ಅದನ್ನಷ್ಟೇ ನೀವಲ್ಲಿ ನೋಡಲು ಸಾಧ್ಯ.

‘ಮರೆತೇನೆಂದರ ಮರೆಯಲಿ ಹ್ಯಾಂಗ್ ಮಾವೋತ್ಸೆ ತುಂಗಾ-’

ಡಾ. ಚಂದ್ರಶೇಖರ ಕಂಬಾರರ ಈ ಸಾಲಿನಿಂದಲೇ ಈ ಲೇಖನ ಆರಂಭಿಸಬೇಕು. ಪ್ರಪಂಚದಲ್ಲಿ ತಲೆದೋರಿರುವ ಈ ವಿಷಮ ಪರಿಸ್ಥಿತಿಗೆ ಯಾರು ಕಾರಣ? ಯಾರನ್ನು ದೂರಬೇಕು? ಯಾರ ಮೇಲೆ ಗೂಬೆ ಕೂರಿಸುವುದು? ಈ ಪ್ರಶ್ನೆಗಳಿಗೆ ಉತ್ತರ ಇರುವುದು ಕಂಬಾರರ ಆ ಸಾಲಿನಲ್ಲೇ!

ಗೂಗಲ್ ಸರ್ಚ್ ಇಂಜಿನ್​ನಲ್ಲಿ ’world's ruthless leaders’ ಅಂತ ಹುಡುಕಿ ನೋಡಿ, ನಿಮ್ಮ ಕಣ್ಣೆದುರಿಗಿರುವ ಎರಡನೇ ಚಿತ್ರ ಆತನದ್ದೇ. ಮಾವೋ ಝೆಡಾಂಗ್. ಕರೊನಾಕ್ಕೂ ಮಾವೋಗೂ ಏನು ಸಂಬಂಧ ಅಂತ ಯೋಚಿಸುತ್ತಿದ್ದರೆ-ಅದಕ್ಕೆ ಉತ್ತರವಿಲ್ಲಿದೆ. ಚೀನಾ ಈಗ ಏನು ಮಾಡಹೊರಟಿದೆ? ಅಲ್ಲಿನ ಕಮ್ಯುನಿಷ್ಟ್ ಸರ್ಕಾರ ಯೋಚಿಸುವ ರೀತಿ ಹೇಗೆ? ಎಂಬುದನ್ನು ತಿಳಿಯಬೇಕಾದರೆ ಮೊದಲು ಮಾವೋನನ್ನು ತಿಳಿಯಬೇಕು. ವಿಶ್ವಕ್ಕೆ ವಿಪತ್ತು ಸೃಷ್ಟಿಸುವ ಮನಸ್ಥಿತಿಗೆ ಹಲವು ಉದಾಹರಣೆಗಳು ಆತನ ಜೀವನದಲ್ಲಿ ಇವೆ. ಅವನೆಂದೂ ಜೀವನದಲ್ಲಿ ಹಲ್ಲುಜ್ಜಲಿಲ್ಲ, ವಿಶೇಷ ಸಂದರ್ಭಗಳಿದ್ದಾಗ ಒಮ್ಮೊಮ್ಮೆ ಸ್ನಾನ ಮಾಡುತ್ತಿದ್ದ ಎಂಬ ಅವನ ಖಾಸಗಿ ಜೀವನದ ಮಾಹಿತಿಗಳು ವಿಚಿತ್ರವೆನಿಸಿದರೆ, ಆತನ ಸಾರ್ವಜನಿಕ ಬದುಕು, ಆಡಳಿತಾತ್ಮಕವಾಗಿ ಅವನು ಕೈಗೊಂಡ ಕೆಲ ನಿರ್ಧಾರಗಳು ಭಯಂಕರವೆನಿಸುತ್ತವೆ. ಕಮ್ಯುನಿಷ್ಟ್ ವಿಚಾರವನ್ನು ತಲೆಗೇರಿಸಿಕೊಂಡು, ಅಲ್ಲಿನ ಜನರನ್ನು ಭಾವನಾರಹಿತರನ್ನಾಗಿ ಮಾಡಿ ಯಂತ್ರ ಗಳಂತಾಗಿಸಿ, ಸರ್ಕಾರಗಳನ್ನು ನಿರ್ದಯಿಯಾಗಿಸಿದ ಕುಖ್ಯಾತಿ ಆತನಿಗೆ ಸಲ್ಲಬೇಕು.

1958ರಲ್ಲಿ ಮಾವೋ ಚೀನಾದ ಅಧ್ಯಕ್ಷನಾಗಿದ್ದಾಗ ತೆಗೆದುಕೊಂಡ ಒಂದು ಹುಚ್ಚು ನಿರ್ಧಾರ, ಪೈಶಾಚಿಕವಾದುದೆಂದು ಇತಿಹಾಸದಲ್ಲಿ ದಾಖಲಾಗಿದೆ. ಚೀನಾದಲ್ಲಿ ಇರುವ ಎಲ್ಲ ಗುಬ್ಬಚ್ಚಿಗಳನ್ನು ಕೊಲ್ಲುವಂತೆ ಆತ ಆದೇಶಿಸಿದ. ಅದಕ್ಕೆ ಅವನು ಕೊಡುವ ಕಾರಣ-‘ಗುಬ್ಬಚ್ಚಿಗಳು ಕ್ಯಾಪಿಟಲಿಸಂನ ಸಂಕೇತ, ಅವು ಸದಾ ಆಹಾರ ತಿನ್ನುವುದರಲ್ಲೇ ನಿರತವಾಗಿ ಇರುತ್ತವೆ’. ಆದ್ದರಿಂದ ಅವುಗಳನ್ನು ನಿರ್ವಂಶ ಮಾಡಬೇಕೆಂದು ಅಕ್ಷರಶಃ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ. ಗುಬ್ಬಿಯ ವಿರುದ್ಧ ತನ್ನ ಸೈನ್ಯವನ್ನು ಛೂ ಬಿಡುವುದು ಅಲ್ಲದೆ, ದೇಶದ ಸಾಮಾನ್ಯ ಜನರನ್ನು ಗುಬ್ಬಚ್ಚಿ ಎದುರು ಸಮರಕ್ಕೆ ಇಳಿಸಿದ. ಗುಬ್ಬಿಯನ್ನು ಕೊಂದವರಿಗೆ ಬಹುಮಾನ ಘೋಷಿಸಿದ. ಪರಿಣಾಮವಾಗಿ ಜನರು ಕಂಡ ಕಂಡ ಗುಬ್ಬಿ ಗೂಡುಗಳನ್ನು ಧ್ವಂಸಗೊಳಿಸಿದರು, ಪುಟ್ಟ ಮರಿಗುಬ್ಬಿಗಳನ್ನು ಕಾಲಿನಿಂದ ಹೊಸಕಿ ಹಾಕಿದರು, ಗುಬ್ಬಿಯ ಮೊಟ್ಟೆಗಳನ್ನು ನೆಲಕ್ಕೆ ಎಸೆದರು. ಕ್ರಮೇಣ ಗುಬ್ಬಚ್ಚಿಗಳ ಸಂಕಷ್ಟವನ್ನು ಕಂಡು ಆನಂದಿಸುವ ವಿಲಕ್ಷಣ, ವಿಕೃತ ಮನಸ್ಥಿತಿ ಜನರಲ್ಲಿ ಬೆಳೆಯಿತು.

ಚೀನಾದಲ್ಲಿ ಗುಬ್ಬಿಗಳು ನಿರ್ನಾಮವಾದಂತೆ ಪ್ರಾಕೃತಿಕ ಅಸಮತೋಲನ ಉಂಟಾಗಿ 1958ರಿಂದ 1961ರವರೆಗೆ ಚೀನಾ ಕಂಡು ಕೇಳರಿಯದ ಕ್ಷಾಮ ಎದುರಿಸಿತು, ನಾಲ್ಕೂವರೆ ಕೋಟಿ ಜನ ಪ್ರಾಣ ಕಳೆದುಕೊಂಡರು; ತಿನ್ನಲು ಆಹಾರ ಇಲ್ಲದೆ ಸಿಕ್ಕ ಸಿಕ್ಕ ಪ್ರಾಣಿಗಳನ್ನು ಕೊಂದು ತಿನ್ನಲಾರಂಭಿಸಿದರು. ಇಲ್ಲಿಂದ ಚೀನಿಯರ ಆಹಾರಕ್ರಮದಲ್ಲಿ ಬಹುದೊಡ್ಡ ಬದಲಾವಣೆ ಆಯ್ತು. ಎಲ್ಲೆಡೆ ಬೇಡಿಕೆಗೆ ತಕ್ಕಂತೆ ‘ವೈಲ್ಡ್ ಅನಿಮಲ್ ಮಾರ್ಕೆಟ್’ಗಳು ಆರಂಭವಾದವು. ಇಂದು ಜಗತ್ತನ್ನು ಕಾಡುತ್ತಿರುವ ಕರೊನಾ ವೈರಾಣು ಕೂಡ ವುಹಾನ್ ನಗರದ ‘ವೈಲ್ಡ್ ಅನಿಮಲ್ ಮಾರ್ಕೆಟ್’ನಿಂದಲೇ ಹರಡಿರುವುದು ಎಂಬ ಸುದ್ದಿಗಳಿವೆ.

ಇಲ್ಲಿ ಗಮನಿಸಬೇಕಾಗಿರುವ ಸೂಕ್ಷ್ಮವೆಂದರೆ ಒಬ್ಬ ಮಾವೋ ತನ್ನ ಹುಚ್ಚಾಟದಿಂದಾಗಿ ಹೇಗೆ ಇಡೀ ಸಮಾಜವನ್ನು ಬಲಿಪಶು ಮಾಡಿದ, ನಾಲ್ಕೂವರೆಕೋಟಿ ಜನರು ಸಂಕಷ್ಟದಲ್ಲಿ ಸಾಯುವಂತೆ ಮಾಡಿದ್ದಲ್ಲದೆ ಇಡೀ ಸಮಾಜ ಭಾವನಾರಹಿತವಾಗಿ ಯಾಂತ್ರಿಕವಾಗಿ ವರ್ತಿಸುವಂತೆ ನಿರ್ವಿುತವಾಯಿತು.

ಇಲ್ಲಿ ಇನ್ನೊಂದು ಮುಖ್ಯ ವಿಷಯ ಹೇಳಬೇಕು. ಈ ವರ್ತನೆ ಮಾವೋ ಕಲಿತದ್ದು ಎಲ್ಲಿ? ಮಾವೋ ನಿಷ್ಕರುಣಿ ರಾಜಕಾರಣಿಯಾಗಿದ್ದು ಏಕೆ? ಅವನ ಯುದ್ಧಕಲೆಗಳು ಬಲಿತಿದ್ದು ಯಾರಿಂದ? ಇದೆಲ್ಲದಕ್ಕೂ ಉತ್ತರ-‘ಆರ್ಟ್ ಆಫ್ ವಾರ್’. 2000 ವರ್ಷಗಳ ಹಿಂದೆ ಸುನ್ ಝುು ಎಂಬ ಚೀನಾದ ದಾರ್ಶನಿಕ ಮಾವೋವನ್ನು ಬಹುವಾಗಿ ಪ್ರಭಾವಿಸಿದ್ದಾನೆ. ‘ಆರ್ಟ್ ಆಫ್ ವಾರ್’ನಲ್ಲಿ ಸುನ್ ಝುು ರ್ಚಚಿಸಿರುವ ಯುದ್ಧತಂತ್ರಗಳನ್ನು ಮಾವೋ ಗಂಭೀರವಾಗಿ ಸ್ವೀಕರಿಸಿರುವುದು ಮುಂದೆ ಆತ ತೆಗೆದುಕೊಳ್ಳುವ ಪ್ರತಿ ನಿರ್ಧಾರಗಳಲ್ಲೂ ಕಣ್ಣಿಗೆ ರಾಚುವಂತಿದೆ. ಆತನಷ್ಟೇ ಅಲ್ಲದೆ ಮುಂಬರುವ ಚೀನಾದ ಎಲ್ಲ ಸರ್ಕಾರಗಳು ಇಲ್ಲಿಯವರೆಗೂ ಅನುಸರಿಸುತ್ತಿರುವ ಸೂತ್ರಗಳ ಬಹುಪಾಲು ‘ಆರ್ಟ್ ಆಫ್ ವಾರ್’ನಲ್ಲಿ ಸುನ್ ಝುು ಹೇಳಿರುವಂತಹವೇ ಆಗಿದೆ.

* ನ್ಯಾಯಕತ್ವಕ್ಕಾಗಿ  ಹಪಹಪಿಸಬೇಡ! ಯಾರು ಬೇಕಾದರೂ ನಾಯಕತ್ವ ವಹಿಸಲಿ ಆದರೆ ನೀನು ಆ ನಾಯಕನನ್ನು ನಿನ್ನ ಅಧೀನದಲ್ಲಿ ಇರುವಂತೆ ಎಚ್ಚರವಹಿಸು.

* ಯುದ್ಧವೆಂದರೆ ಮೋಸ! ಮೋಸಮಾಡದೆ ಯಾವುದೇ ಯುದ್ಧವನ್ನು ಗೆಲ್ಲಲಾಗದು

* ನಿನ್ನ ಶಕ್ತಿ ಎಷ್ಟು ಎಂದು ಯಾರಿಗೂ ತಿಳಿಯಪಡಿಸಬೇಡ. ನೀನು ಯಾವಾಗ ಕೆಲಸ ಮಾಡುತಿ್ತೕಯೆಂದು, ಏನು ಮಾಡುತ್ತೀಯೆಂದು  ವೈರಿಗೆ ತಿಳಿಯಲೇಕೂಡದು.

ಇವು ಮೂರು ಸುನ್ ಝುು ‘ಆರ್ಟ್ ಆಫ್ ವಾರ್’ನಲ್ಲಿ ಹೇಳಿರುವ ಪ್ರಮುಖ ಅಂಶಗಳು. ಇವುಗಳನ್ನು ಒಮ್ಮೆ ವಿಶ್ಲೇಷಿಸಿ ನೋಡಿ, ಚೀನಾ ಈ ಅಂಶಗಳನ್ನು ಯಾವ ಮಟ್ಟಕ್ಕೆ ಅನುಷ್ಠಾನಗೊಳಿಸಿದೆ ಎಂಬುದು ತಿಳಿಯುತ್ತದೆ. ಜೆಯೋ ಪಾಲಿಟಿಕ್ಸ್​ನಲ್ಲಿ ‘ದೊಡ್ಡಣ್ಣ’ನೆನ್ನಿಸಿಕೊಳ್ಳುವ ಪ್ರಲೋಭನೆ ಅಮೆರಿಕ, ಇಂಗ್ಲೆಂಡ್, ರಷ್ಯಾಗಳಿಗಿವೆ. ಆದರೆ ಚೀನಾ ಈ ಧಾವಂತವನ್ನು ಎಂದೂ ತೋರ್ಪಡಿಸಿಲ್ಲ. ಆದರೆ ಸ್ವತಃ ಅಮೆರಿಕದ ಜುಟ್ಟು ಚೀನಾದ ಕೈಯಲ್ಲಿದೆ ಎಂಬುದು ‘ಜೆಯೋ ಪಾಲಿಟಿಕ್ಸ್’ ಅನ್ನು ಗಮನಿಸುತ್ತಿರುವ ಎಲ್ಲರಿಗೂ ಗೊತ್ತು. ಇಟಲಿಯಲ್ಲಿ ಕರೊನಾ ಸೋಂಕಿನಿಂದ ಸತ್ತವರ ಸಂಖ್ಯೆ ಎಲ್ಲೇ ಮೀರಿದೆ. ಆ ದೇಶ ಕೂಡ ಚೀನಾದ ಹಿಡಿತದಲ್ಲೇ ಇದೆ ಎಂಬುದು ವಾಸ್ತವ. ಅಲ್ಲಿನ ಜಗತ್ಪ್ರಸಿದ್ದ ಗಾರ್ವೆಂಟ್ಸ್ಗಳಲ್ಲಿ ಕೆಲಸ ಮಾಡುತ್ತಿರುವ ಬಹುಪಾಲು ಮಂದಿ ಚೀನಿಯರು. ಇದು ಆ ದೇಶದ ಮೇಲೆ ಚೀನಾ ಸಾಧಿಸಿರುವ ಹಿಡಿತ. ಹಾಗೆ ಚೀನಾದಲ್ಲಿ ಏನಾಗುತ್ತಿದೆ ಎಂಬುದು ಜಗತ್ತಿನ ಯಾವ ಮಾಧ್ಯಮಗಳಲ್ಲೂ ಸುದ್ದಿಯಾಗದು, ತಾನಾಗೇ ವಿಷಯವನ್ನು ಬಿಟ್ಟುಕೊಡದ ಹೊರತು ಚೀನಾದ ಆಂತರಿಕ ವಿಷಯ ಎಂದು ಎಲ್ಲಿಯೂ ಚರ್ಚೆಯಾಗುವುದಿಲ್ಲ. ನೀವು ಚೀನಾದ ಪ್ರವಾಸಕ್ಕೆ ಹೋದರೆ ಅಲ್ಲಿನ ಸರ್ಕಾರ ನಿಮಗೆ ಏನನ್ನು ತೋರಿಸಬಯಸುತ್ತದೆಯೋ ಅದನ್ನಷ್ಟೇ ನೀವಲ್ಲಿ ನೋಡಲು ಸಾಧ್ಯ, ಆ ದೇಶದ ಕುರಿತ ನಿಮ್ಮ ಕುತೂಹಲಗಳನ್ನು ತೋರ್ಪಡಿಸಲು ಸಾಧ್ಯವಿಲ್ಲ.

ಈ ಮೂರು ಉದಾಹರಣೆಗಳು ಸುನ್ ಝುು ಅಪೇಕ್ಷೆ ಪಟ್ಟಂತೆಯೇ ಇವೆ ಎಂಬುದು ಇಷ್ಟಕ್ಕೆ ಅರ್ಥವಾಗಬೇಕು. ಮಾವೋನನ್ನು ಅರಿಯದೆ, ‘ಆರ್ಟ್ ಆಫ್ ವಾರ್’ ಓದದೇ ಚೀನಾವನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಚೀನಾದ ಪಟ್ಟು ಹೇಗಿರುತ್ತದೆ ಎಂದು ತಿಳಿಯದೆ ಕರೊನಾದ ಕಾನ್ಸಿ್ಪೇಸಿ ತಲೆಗೆ ಇಳಿಯೋಲ್ಲ. ಏಕೆಂದರೆ ಅದರ ಅಧ್ಯಕ್ಷ ಕ್ಸಿ ಜೀನ್​ಪಿಂಗ್ ಮಾವೋನ ಪ್ರತಿರೂಪವೆಂದೇ ಹೇಳಲಾಗುತ್ತದೆ.

ಅಲ್ಲಿ ನಡೆದಿರಬಹುದಾದ ರಾಜಕೀಯ ಪಿತೂರಿಯ ಕುರಿತು THE UFO SPOTLIGHT ಜಾಲತಾಣವೇದಿಕೆಯಲ್ಲಿ ಇತ್ತೀಚೆಗೆ CORONA UNMASKED ಎಂಬ ಲೇಖನವೊಂದು ಪ್ರಕಟವಾಗಿತ್ತು. ಅದು ಅನೇಕರ ವಾಟ್ಸಾಪ್​ನಲ್ಲಿ ಹರಿದಾಡಿತ್ತು. ರಾಬರ್ಟ್ ಮಾರ್ನಿಂಗ್​ಸ್ಟಾರ್ ಎಂಬಾತ ಇದನ್ನು ಆಂಗ್ಲದಲ್ಲಿ ಪ್ರಕಟಿಸಿ ಇದರ ಲೇಖಕರು ಚೀನಾದ ಮಿಲಿಟರಿ ಇಂಟೆಲಿಜೆನ್ಸ್​ನ ಅಧಿಕಾರಿಯೊಬ್ಬರು ಎಂಬುದಾಗಿ ಹೇಳಿದ್ದಾನೆ. ಅದನ್ನು ಆ ಅಧಿಕಾರಿ ಬರೆದಿರುವ ಸಾಧ್ಯಾಸಾಧ್ಯತೆಯನ್ನು ಬದಿಗಿರಿಸಿ, ಆ ಲೇಖನದ ಹೂರಣವನ್ನೊಮ್ಮೆ ರ್ಚಚಿಸಲು ಅಡ್ಡಿಯಿಲ್ಲ. ನಂತರ ಅದರಲ್ಲಿರುವ ಸತ್ಯಾಸತ್ಯತೆಯನ್ನು ನಿರ್ಧರಿಸುವುದು ಓದುಗನ ವಿವೇಚನೆಗೆ ಬಿಟ್ಟ ಸಂಗತಿ.

ಆತ ಹೇಳುವಂತೆ ಕರೊನಾ ವೈರಸ್ ಎಂಬುದು ಬಹುತೇಕರು ತಿಳಿದಿರುವಂತೆ ವೈಲ್ಡ್ ಅನಿಮಲ್ ಮಾರ್ಕೆಟ್​ನಿಂದ ಹೊರಬಂದ ವೈರಸ್ ಅಲ್ಲ. ಇದನ್ನು ಜೈವಿಕಯುದ್ಧದ ಸಿದ್ಧತೆಗಾಗಿಯೇ ಲ್ಯಾಬ್​ನಲ್ಲಿ ಸಿದ್ಧಪಡಿಸಿದ್ದು. ಇದು ಇತಿ್ತೕಚಿನ ಸೃಷ್ಟಿಯೂ ಅಲ್ಲ, ಇದನ್ನು 2013 ಮೇ 4ರಂದು ಕೆನಡಾದ ನ್ಯಾಷನಲ್ ಮೈಕ್ರೋ ಬಯೋಲ್ಯಾಬ್​ನಲ್ಲಿ ಸೃಷ್ಟಿಸಲಾಗಿತ್ತು. 2019ರ ಮಾರ್ಚ್​ನಲ್ಲಿ ಕರೊನಾ ವೈರಸ್ ಏಜೆಂಟ್ ಅನ್ನು ಚೀನಾಕ್ಕೆ ತರಲಾಯಿತು. ಈ ಮಾಹಿತಿ ಕುರಿತು ಇಸ್ರೇಲ್​ನ ವಿಜ್ಞಾನಿ ಡಾ.ಡ್ಯಾನಿ ಷೋಹ್ಯಾಮ್ ಚೀನಾ ಈ ರೀತಿಯ ಜೈವಿಕ ಯುದ್ಧಕ್ಕೆ ಸಿದ್ಧವಾಗುತ್ತಿರುವ ಬಗ್ಗೆ ಹಲವು ಅನುಮಾನಗಳಿದ್ದುದಾಗಿ ಮತ್ತು ಈ ನಿಟ್ಟಿನಲ್ಲಿ ಚೀನಾದ ಹಲವು ಚಟುವಟಿಕೆಗಳನ್ನು ಅವರು ಗಮನಿಸಿರುವುದಾಗಿ ಅಭಿಪ್ರಾಯ ಪಟ್ಟಿದ್ದಾರೆ.

IDSAನ ಹಿರಿಯ ಸಂಶೋಧಕ ರಾಜೀವ್ ನಯನ್ ಕೂಡ ಚೀನಾ ಸೇರಿ ಕೆಲ ರಾಷ್ಟ್ರಗಳು ಜೈವಿಕ ಯುದ್ಧದ ತಯಾರಿ ನಡೆಸಿರುವುದು ಸತ್ಯವೆಂದೇ ಹೇಳಿದ್ದಾರೆ. ಇನ್ನು ಈ CORONA UNMASKED ಈ ಲೇಖನದ ಬಹುಮುಖ್ಯ ಭಾಗ ಚೀನಾ ಸರ್ಕಾರವು ತನ್ನ ಸೋಷಿಯಲ್ ಕ್ರೆಡಿಟ್ ಸಿಸ್ಟಂನ ವಿರುದ್ಧ ದನಿಯೆತ್ತಿದ್ದ, ಹಾಂಗ್​ಕಾಂಗ್ ಪ್ರತಿಭಟನೆಯನ್ನು ಹತ್ತಿಕ್ಕುವ ಕುತಂತ್ರದ ಭಾಗವಾಗಿ ಅಲ್ಲಿನ ಮಾನವಹಕ್ಕು ಹೋರಾಟಗಾರರು, ಸಲಿಂಗಕಾಮಿಗಳು, ಸರ್ಕಾರಕ್ಕೆ ತಲೆನೋವಾಗಿದ್ದ ಕೆಲ ಹೋರಾಟಗಾರರನ್ನು ಅದರಲ್ಲೂ ವಿಶೇಷವಾಗಿ ಅನ್ಯ ದೇಶೀಯ ಭಾಷೆ ಬಲ್ಲವರನ್ನು ಬಂಧಿಸಿ ವುಹಾನ್ ನಗರದಲ್ಲಿ ಇರಿಸಿದ್ದರು, ಅವರ ಮೇಲೆ ಮಾತ್ರ ಪ್ರಯೋಗಾತ್ಮಕವಾಗಿ ಕರೊನಾ ವೈರಸ್ ಅನ್ನು ಉಪಯೋಗಿಸುವುದು ಅವರ ಉದ್ದೇಶವಾಗಿತ್ತು. ಆದರೆ ಅದೇ ಸಮಯಕ್ಕೆ ಚೀನಾದ ಹೊಸವರ್ಷದ ಆಚರಣೆಗೆಂದು ಬೇರೆ ಬೇರೆ ದೇಶಗಳಲ್ಲಿ ನೆಲೆಸಿರುವ ಎಲ್ಲ ಚೀನಾ ಮೂಲವಾಸಿಗಳು ಚೀನಾಕ್ಕೆ ಬಂದಿದ್ದರು, ಈ ಸಂದರ್ಭ ಸೋಂಕು ಹೀಗೆ ಎಲ್ಲದೇಶಗಳಿಗೂ ಹಬ್ಬಿರಬಹುದೆಂಬ ವಾದಗಳು ಇದ್ದೇ ಇವೆ. ಇದೇ ರೀತಿ ಇಟಲಿಯಿಂದ ಬಂದಿದ್ದ ಎಲ್ಲ ಚೀನಿಯರು ಇಟಲಿಗೆ ಮರಳಿದ್ದರು. ಚೀನಾ ಸರ್ಕಾರದ ಕೈ ಮೀರಿ ಹೋದ ಈ ಸ್ಥಿತಿಯನ್ನು ಚೀನಾ ಬಾಯಿಬಿಡದೆ ಮುಚ್ಚಿಟ್ಟಿತು. ಡಿಸೆಂಬರ್​ನಲ್ಲಿ ನಡೆದ ಈ ಘಟನೆ ಪ್ರಪಂಚಕ್ಕೆ ತಿಳಿಯುವುದರೊಳಗೆ ಕಾಲ ಮಿಂಚಿಹೋಗಿತ್ತು.

ಈ ಒಟ್ಟು ಘಟನೆ ವಿವರಿಸುವ ತಥ್ಯವೆಂದರೆ ಈ ಕರೊನಾ ಎಂಬ ವೈರಿ ಆಕಸ್ಮಿಕವಲ್ಲ, ಅದರ ಹಿಂದೆ ದುರುದ್ದೇಶವಿದೆ. ಚೀನಾ ಯೋಚಿಸುವ ಧಾಟಿ ಅರ್ಥವಾಗದೆ ನಾವೀದಾಳಕ್ಕೆ ಬಲಿಯಾಗಿದ್ದೇವೆ. ಕೊನೆಯಲ್ಲಿ, ಡಾ. ಚಂದ್ರಶೇಖರ ಕಂಬಾರರ ಸಾಲುಗಳೇ ಸೂಕ್ತವಾಗಿವೆ- ‘ಗೊ್ಲೕಬಿನರ್ಧಕೆ ಸಾಯೋದ ಕಲಿಸಿ, ಸ್ವಥಾ ಸಾಯಲಿಕೆ ಬಾರದೆ ಹೋದಿ’, ಹೌದು ಇಡೀ ಅರ್ಧ ಜಗತ್ತನ್ನು ಸೋಲಿಸಿ ಸಾಯಿಸಿ ತಾನು ಅಟ್ಟಹಾಸಗೈಯುವ ಮನೋಭಾವ ಮಾವೋವಾದದ್ದು.

(ಲೇಖಕರು ಉಪನ್ಯಾಸಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net