

ಬೆಂಗಳೂರು: ನಗರದ ಪೊಲೀಸ್ ಪೇದೆಯೋರ್ವರಿಗೆ ಕರೊನಾ ಸೋಂಕು ತಗುಲಿದೆ. ಈ ಪೊಲೀಸ್ ಪೇದೆ ಏಪ್ರಿಲ್ 14ರಿಂದ ಕರ್ತವ್ಯಕ್ಕೆ ಹೋಗಿರಲಿಲ್ಲ. ಕಾಲಿಗೆ ಗಾಯ ಆಗಿದ್ದರಿಂದ ರಜೆಯಲ್ಲಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.
ಬಿದ್ದು ಗಾಯಮಾಡಿಕೊಂಡಿದ್ದ ಪೇದೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಕರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.
ಪೊಲೀಸ್ ಪೇದೆ 14ರಿಂದ ರಜೆಯಲ್ಲಿ ಇದ್ದರೂ ಅವರಲ್ಲೀಗ ಕರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ಸಹಜವಾಗಿ ಪೊಲೀಸ್ ಇಲಾಖೆಯಲ್ಲಿ ಆತಂಕ ಶುರುವಾಗಿದೆ. ಅವರ ಟ್ರಾವೆಲ್ ಹಿಸ್ಟರಿ, ಯಾರ ಸಂಪರ್ಕಕ್ಕೆ ಹೋಗಿದ್ದರು ಎಂಬಿತ್ಯಾದಿ ವಿವರಗಳನ್ನು ಪೇದೆಯಿಂದಲೇ ತಿಳಿದುಕೊಳ್ಳಲಾಗುವುದು ಎಂದು ಪೊಲೀಸ್ ಹಿರಿಯ ಅಧಿಕಾರಿಗಳು ತಿಳಿಸಿದ್ದರು.
ಹಾಗೇ ಯಾರಾದರೂ ಸಿಬ್ಬಂದಿ ಅವರ ಸಂಪರ್ಕಕ್ಕೆ ಹೋಗಿದ್ದರೆ ಅವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗುವುದು ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್)