

ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ಗೆ ಕರೊನಾ ಸೋಂಕು ದೃಢಪಟ್ಟಿದೆ.
ಈ ಬಗ್ಗೆ ಟ್ವೀಟ್ ಮೂಲಕ ತಿಳಿಸಿರುವ ಅಕ್ಷಯ್ ಕುಮಾರ್, ನನಗೆ ಕರೊನಾ ಪಾಸಿಟಿವ್ ಇದೆ ಎಂಬುದು ಇಂದು ಬೆಳಗ್ಗೆ ಬಂದ ವರದಿಯಲ್ಲಿ ತಿಳಿಯಿತು. ನಿಯಮದ ಪ್ರಕಾರ ಕ್ವಾರಂಟೈನ್ಗೆ ಒಳಗಾಗಿದ್ದು, ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.
ನನ್ನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರೆಲ್ಲರೂ ದಯವಿಟ್ಟು ಕರೊನಾ ಟೆಸ್ಟ್ ಮಾಡಿಸಿಕೊಂಡು, ಜಾಗ್ರತೆವಹಿಸಿ. ಶೀಘ್ರದಲ್ಲೇ ಶೂಟಿಂಗ್ಗೆ ಹಾಜರಾಗ್ತೀನಿ ಎಂದು ಟ್ವೀಟ್ ಮೂಲಕ ಅಭಿಮಾನಿಗಳಿಗೆ ಅಕ್ಕಿ ತಿಳಿಸಿದ್ದಾರೆ. 'ರಾಮ್ ಸೇತು' ಶೂಟಿಂಗ್ನಲ್ಲಿ ಬಿಜಿಯಾಗಿದ್ದ ಅಕ್ಷಯ್ ಕುಮಾರ್, ಇದೀಗ ಹೋಂ ಕ್ವಾರಂಟೈನ್ಗೆ ಒಳಪಟ್ಟಿದ್ದಾರೆ.