video/ ಕರೊನಾ ಸೋಂಕಿತನನ್ನು ಆಸ್ಪತ್ರೆಗೆ ಬೈಕ್​ನಲ್ಲೇ ಕರೆದೊಯ್ದ ಸಿಬ್ಬಂದಿ

Corona 1
Published on

ಚಿಕ್ಕಬಳ್ಳಾಪುರ: ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಪ್ರತಿನಿಧಿಸುವ ಕ್ಷೇತ್ರದಲ್ಲೇ ಇಂದೆಂಥಾ ಅವ್ಯವಸ್ಥೆ?

ಆಂಬುಲೆನ್ಸ್‌ ವಾಹನವಿಲ್ಲದೆ ಕರೊನಾ ಸೋಂಕಿತನನ್ನು ದ್ವಿಚಕ್ರ ವಾಹನದಲ್ಲೇ ಆಸ್ಪತ್ರೆಗೆ ಸಿಬ್ಬಂದಿ ಕರೆತಂದಿದ್ದಾರೆ. ಸಮರ್ಪಕ ಪಿಪಿಇ ಕಿಟ್ ಇಲ್ಲದೆ, ಸುರಕ್ಷತೆಯೂ ಇಲ್ಲದೆ ಸಿಬ್ಬಂದಿಯು ಸೋಂಕಿತನನ್ನು ಜನರ ನಡುವೆ ಕರೆದೊಯ್ಯುವ ಆಘಾತಕಾರಿ ದೃಶ್ಯ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಶಿಡ್ಲಘಟ್ಟ ತಾಲೂಕಿನ ನಾಗಮಂಗಲ ಗ್ರಾಮದಲ್ಲಿ ಮಂಗಳವಾರ 35 ವರ್ಷದ ವ್ಯಕ್ತಿಗೆ ಕರೊನಾ ಸೋಂಕು ದೃಢಪಟ್ಟಿದೆ. ಸೋಂಕಿತ ವ್ಯಕ್ತಿಯನ್ನು ಕರೊನಾ ಕೇರ್ ಸೆಂಟರ್​ಗೆ ದ್ವಿಚಕ್ರವಾಹನದಲ್ಲೇ ಕರೆದೊಯ್ಯಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಇಂತಹ ಅವ್ಯವಸ್ಥೆಯಾದರೆ ಇನ್ನು ರಾಜ್ಯದ ಗತಿಯೇನು? ಎಂಬ ಆತಂಕ ಶುರುವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net