ಅವಳಿ ಮಕ್ಕಳಿಗೆ ಜನ್ಮ ನೀಡಿದ ಕರೊನಾ ಸೋಂಕಿತೆ!

twins-corona
Published on

ವಿಜಯಪುರ: ಕರೊನಾ ಸೋಂಕಿತೆಯು ಅವಳಿ-ಜವಳಿಗೆ ಜನ್ಮ ನೀಡುವ ಮೂಲಕ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದಾರೆ!

ಇಲ್ಲಿನ ಕೋವಿಡ್ ಆಸ್ಪತ್ರೆಯಲ್ಲಿ 20 ವರ್ಷದ ರೋಗಿ ಸಂಖ್ಯೆ 8789 ಅವಳಿ-ಜವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಸಹಜ ಹೆರಿಗೆ ಮಾಡಿಸುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ. ಅವಳಿ-ಜವಳಿ ಹೆಣ್ಣುಮಕ್ಕಳು ಅನುಕ್ರಮವಾಗಿ 2 ಮತ್ತು 2.1 ಕೆಜಿ ತೂಕವಿದ್ದು ಆರೋಗ್ಯವಾಗಿ ಇದ್ದಾರೆಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶರಣಪ್ಪ ಕಟ್ಟಿ ತಿಳಿಸಿದ್ದಾರೆ. ಇದನ್ನೂ ಓದಿರಿ 40 ವರ್ಷದ ಬಳಿಕ ಗ್ರಹಣ ದಿನದಂದು ಕಾವೇರಿ ನದಿಯಲ್ಲಿ ಡಿಕೆಶಿ ಮಾಡಿದ್ದೇನು?

ಡಾ.ಮನ್‌ಪ್ರೀತ್ ಕೌರ್ ತಹರೀಯಾ, ಸಿಸ್ಟರ್ ಕಾಶೀಬಾಯಿ, ಡಾ.ಉಪಾಸೆ, ರವಿ ಕೂಚಬಾಳ, ಮೊಹಸೀನ್ ಮಮದಾಪೂರ, ಕ್ಲಾಸ್ ಡಿ ಸಿಬ್ಬಂದಿ ಮಲ್ಲಿಕಾರ್ಜುನ ಅವರನ್ನು ಒಳಗೊಂಡ ವೈದ್ಯರ ತಂಡ ಹೆರಿಗೆ ಮಾಡಿದ್ದು, ತಂಡದ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಡಾ.ಮನ್‌ಪ್ರೀತ್ ಕೌರ್ ತಹರೀಯಾ ಅವರು ಇದು ಇಂತಹ ಎರಡನೇ ಪ್ರಕರಣವಾಗಿದ್ದು, ಅನೇಮಿಯಾದಿಂದ ಬಳಲುತ್ತಿದ್ದ ಈ ಮಹಿಳೆಗೆ ಬೆಳಗ್ಗೆಯೇ ಬೇನೆ ಕಾಣಿಸಿಕೊಂಡಿತ್ತು. ನಂತರ ಎಲ್ಲ ಸಿಬ್ಬಂದಿ ಸಹಕಾರದೊಂದಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಯಿತು. ಅವಳಿ ಮಕ್ಕಳು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಮಹಿಳೆಗೆ ನಿನ್ನೆಯಷ್ಟೇ ಕೊರನಾ ಪಾಸಿಟಿವ್ ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net