ಪಾಕಿಸ್ತಾನದಲ್ಲಿ ಕರೊನಾ ತೀವ್ರ: ನೈಜ ಅಂಕಿಸಂಖ್ಯೆ ಮುಚ್ಚಿಡುತ್ತಿರುವ ಆಡಳಿತ

Pakistan 26 jan 20
Published on

ಲಾಹೋರ್: ಪಾಕಿಸ್ತಾನದಲ್ಲಿ ಕರೊನಾ ವೈರಸ್‌ನ ಹಾವಳಿ ಇತ್ತೀಚೆಗೆ ತೀವ್ರ ವೇಗ ಪಡೆದಿದೆ. ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ.

ಸೋಮವಾರ 1,140 ಹೊಸ ಪ್ರಕರಣಗಳೊಂದಿಗೆ ಅಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 32 ಸಾವಿರಕ್ಕೆ ಏರಿಕೆಯಾಗಿದೆ. ಜತೆಗೆ ಈವರೆಗೆ 700ಕ್ಕೂ ಅಧಿಕ ಜನರು ಅಸುನೀಗಿದ್ದಾರೆ.

ಪಂಜಾಬ್ ಪ್ರಾಂತ್ಯದಿಂದ 11,869, ಸಿಂಧ್‌ನಿಂದ 12,017, ಬಲೂಚಿಸ್ತಾನದಿಂದ 2,061, ಇಸ್ಲಾಮಾಬಾದ್‌ನಿಂದ 716, ಗಿಲ್ಗಿಟ್ ಪಾಲ್ಟಿಸ್ತಾನದಿಂದ 457 ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಿಂದ 86 ಪ್ರರಕಣಗಳು ಈವರೆಗೆ ವರದಿಯಾಗಿವೆ.

ಆದಾಗ್ಯೂ ಈ ಸಂಖ್ಯೆ ನಿಜ ಅಂಕಿ ಅಂಶಕ್ಕಿಂತ ಭಾರಿ ವ್ಯತ್ಯಾಸ ಹೊಂದಿದೆ. ಸರಿಯಾದ ಅಂಕಿ ಅಂಶಗಳನ್ನು ಪಾಕ್ ಆಡಳಿತ ಮುಚ್ಚಿಡುತ್ತಿದೆ. ಪಾಕ್‌ನಲ್ಲಿ ಕರೊನಾದಿಂದಾಗಿ ಸಾವಿರಾರು ಜನರು ಮೃತಪಟ್ಟಿದ್ದಾರೆ ಎಂಬ ಬಗ್ಗೆ ಹಲವು ವರದಿಗಳು ಹರಿದಾಡುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net