

ಬೆಂಗಳೂರು: ಐದು ದಿನಗಳಿಂದ ಹೋಂ ಕ್ವಾರಂಟೈನ್ನಲ್ಲಿದ್ದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರಿಗೆ ಕರೊನಾ ನೆಗೆಟಿವ್ ಬಂದಿದೆ.
ಜು.17ರಂದು ಭಾಸ್ಕರ್ರಾವ್ ಅವರ ಕಾರು ಚಾಲಕನಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಆಯುಕ್ತರು ಅಂದಿನಿಂದ ಹೋಂ ಕ್ವಾರಂಟೈನ್ಗೆ ಒಳಪಟ್ಟಿದ್ದರು. ನಿನ್ನೆ(ಸೋಮವಾರ) ಕರೊನಾ ಟೆಸ್ಟ್ ಮಾಡಿಸಿಕೊಂಡಿದ್ದು, ಇಂದು ಬೆಳಗ್ಗೆ ಬಂದ ವರದಿಯಲ್ಲಿ ನೆಗೆಟಿವ್ ಎಂದಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಕೆಲಸಕ್ಕೆ ಹಾಜರಾಗುವುದಾಗಿ ಟ್ವೀಟ್ ಮೂಲಕ ಆಯುಕ್ತರು ತಿಳಿಸಿದ್ದಾರೆ.
ಕರೊನಾ ಪರೀಕ್ಷೆಗೆ ಒಳಗಾಗಿರುವ ಚಿತ್ರವೊಂದನ್ನು ಟ್ವಿಟರ್ನಲ್ಲಿ ಇಂದು ಬೆಳಗ್ಗೆ ಅಪ್ಲೋಡ್ ಮಾಡಿರುವ ಭಾಸ್ಕರ್ ರಾವ್, “ನನ್ನ ಕೋವಿಡ್ ಟೆಸ್ಟ್ ನೆಗೆಟಿವ್ ಬಂದಿದೆ. ಇಂದಿನಿಂದ ಕೆಲಸಕ್ಕೆ ಹಾಜರಾಗುವೆ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದಗಳಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.
ಹೋಂ ಕ್ವಾರಂಟೈನ್ನಲ್ಲಿದ್ದರೂ ಭಾಸ್ಕರ್ ರಾವ್ ಮನೆಯಿಂದಲೇ ಬೆಂಗಳೂರು ನಗರದ ಕಾನೂನು ಸುವ್ಯವಸ್ಥೆ ಕಾಪಾಡಲು ಸಿಬ್ಬಂದಿಗೆ ಅಗತ್ಯ ನಿದರ್ಶನ ನೀಡಿದ್ದರು. ಕಳೆದ ತಿಂಗಳಲ್ಲಿ ಒಟ್ಟು ಐದು ಬಾರಿ ಕರೊನಾ ಪರೀಕ್ಷೆಗೆ ಭಾಸ್ಕರ್ ರಾವ್ ಒಳಗಾಗಿದ್ದು, ಎಲ್ಲ ವರದಿಯೂ ನೆಗೆಟೆವ್ ಬಂದಿದೆ.