

ಬೆಂಗಳೂರು: ರಾಜ್ಯದಲ್ಲಿ ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ 19 ಹೊಸ ಸೋಂಕು ಪ್ರಕರಣ ಪತ್ತೆಯಾಗಿದ್ದು, ಒಂದೇ ದಿನ ಈ ಮಹಾಮಾರಿ ಎರಡು ಜೀವಗಳನ್ನು ಬಲಿ ಪಡೆದಿದೆ.
ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 279ಕ್ಕೆ ಏರಿದ್ದು, 12 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರಲ್ಲಿ ಒಬ್ಬ ಗರ್ಭಿಣಿಯೂ ಸೇರಿದ್ದಾರೆ. 80 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ.
ಮೃತಪಟ್ಟವರ ಪೈಕಿ ಕಲಬುರಗಿ ಮೂವರು, ಚಿಕ್ಕಬಳ್ಳಾಪುರ ಇಬ್ಬರು, ಬೆಂಗಳೂರು ಇಬ್ಬರು, ಬಾಗಲಕೋಟೆ, ಬೆಳಗಾವಿ, ವಿಜಯಪುರ, ತುಮಕೂರು ಹಾಗೂ ಗದಗ ತಲಾ ಒಬ್ಬರು ಸೇರಿದ್ದಾರೆ.
ಸೋಂಕಿತರ ಪ್ರಮಾಣ ಹೀಗಿದೆ:
ಬೀದರ್: 13 ಮಂದಿ, ಬೆಂಗಳೂರು ಗ್ರಾಮಾಂತರದಲ್ಲಿ 12 ಮಂದಿ, ಮಂಡ್ಯದಲ್ಲಿ 8, ಬಳ್ಳಾರಿಯಲ್ಲಿ 6 ಮಂದಿ ಸೋಂಕು ಪೀಡಿತರಾಗಿದ್ದು ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು: 71 ಮಂದಿಗೆ ಸೋಂಕು ತಗುಲಿದ್ದು, 35 ಮಂದಿ ಬಿಡುಗಡೆಯಾಗಿದ್ದಾರೆ. ಇದುವರೆಗೆ ಇಬ್ಬರು ಮೃತಪಟ್ಟಿದ್ದಾರೆ.
ಮೈಸೂರು: 58 ಮಂದಿ ಸೋಂಕಿತರಾಗಿದ್ದು 12 ಮಂದಿ ಬಿಡುಗಡೆಯಾಗಿದ್ದಾರೆ.
ಬೆಳಗಾವಿ: 19 ಮಂದಿ ಸೋಂಕಿತರಾಗಿದ್ದು ಒಬ್ಬರು ಬಿಡುಗಡೆಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ.
ಕಲಬುರಗಿ: 17 ಮಂದಿ ಸೋಂಕಿತರಾಗಿದ್ದು ಇಬ್ಬರು ಬಿಡುಗಡೆ ಹೊಂದಿದ್ದು ಮೂರು ಮಂದಿ ಮೃತಪಟ್ಟಿದ್ದಾರೆ.
ಬಾಗಲಕೋಟೆ: 14 ಸೋಂಕು ಪ್ರಕರಣವಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.
ಚಿಕ್ಕಬಳ್ಳಾಪುರ: 13 ಮಂದಿ ಸೋಂಕು ಪೀಡಿತರಾಗಿದ್ದು ಮೂರು ಮಂದಿ ಬಿಡುಗಡೆಯಾಗಿದ್ದರೆ ಇಬ್ಬರು ಮೃತಪಟ್ಟಿದ್ದಾರೆ.
ಉತ್ತರ ಕನ್ನಡ: 11 ಮಂದಿಗೆ ಸೋಂಕು ತಗುಲಿದ್ದು 8 ಮಂದಿ ಬಿಡುಗಡೆಯಾಗಿದ್ದಾರೆ.
ವಿಜಯಪುರ: 10 ಮಂದಿ ಸೋಂಕುಪೀಡಿತರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ.
ಧಾರವಾಡ: ಆರು ಮಂದಿಗೆ ಸೋಂಕು ತಗುಲಿದ್ದು ಒಬ್ಬರು ಬಿಡುಗಡೆಯಾಗಿದ್ದಾರೆ.
ಉಡುಪಿ: ಮೂವರಿಗೆ ಸೋಂಕು ತಗುಲಿದ್ದು ಇಬ್ಬರು ಬಿಡುಗಡೆಯಾಗಿದ್ದಾರೆ.
ದಾವಣಗೆರೆ: ಇಬ್ಬರು ಹಾಗೂ ಚಿತ್ರದುರ್ಗದಲ್ಲಿ ಒಬ್ಬರಿಗೆ ಸೋಂಕು ತಗುಲಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ.
ತುಮಕೂರು: ಇಬ್ಬರಿಗೆ ಸೋಂಕು ತಗುಲಿದ್ದು ಒಬ್ಬರು ಮೃತಪಟ್ಟಿದ್ದಾರೆ.
ಗದಗ: ಸೋಂಕು ಪೀಡಿತರಾಗಿದ್ದ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಸದ್ಯ ಯಾರಿಗೂ ಸೋಂಕು ಪತ್ತೆಯಾಗಿಲ್ಲ.
ಕರೊನಾ ಸೋಂಕು ತಡೆಗಟ್ಟಲು ಮಸೀದಿಯಲ್ಲಿ ಯಾವುದೇ ಸಭೆ, ಪ್ರಾರ್ಥನೆ ನಡೆಸದಂತೆ ಹಾಗೂ ಮೃತ ವ್ಯಕ್ತಿಗಳನ್ನು ದಫನ್ ಮಾಡಲು ಅನುಮತಿ ನೀಡದಂತೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ರಾಜ್ಯದ ಎಲ್ಲ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿರುತ್ತದೆ.
ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್ ಅಪ್ಲಿಕೇಷ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.