ವಿಕ್ಟೋರಿಯಾ ಆಸ್ಪತ್ರೆಯ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಕರೊನಾ ಸೋಂಕಿತ; ಸ್ಥಳದಲ್ಲಿ ಬಿಗಿ ಭದ್ರತೆ

Suicide 26 april 20
Published on

ಬೆಂಗಳೂರು: ಕರೊನಾ ಸೋಂಕಿತ (ರೋಗಿ ನಂ.466)ನೋರ್ವ ವಿಕ್ಟೋರಿಯಾ ಆಸ್ಪತ್ರೆಯ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ರೋಗಿಗೆ ಕಿಡ್ನಿ ಸಮಸ್ಯೆಯೂ ಇತ್ತು ಮತ್ತು ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇವರು ಟ್ರೋಮಾ ಸೆಂಟರ್​ನ ತುರ್ತು ನಿರ್ಗಮನ ಬಾಗಿಲಿನಿಂದ ತೆರಳಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಬ್ಯಾರಿಕೇಡ್​​ಗಳನ್ನು ಹಾಕಿ ಜನರನ್ನು ಕಂಟ್ರೋಲ್​ ಮಾಡುತ್ತಿದ್ದಾರೆ. ಸುತ್ತಮುತ್ತ ಸುಳಿಯಲೂ ಬಿಡುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net