More

    ಕಿದ್ವಾಯಿಯಲ್ಲಿ ಕರೊನಾ ಪರೀಕ್ಷೆ: ಗಂಟಲು ದ್ರವ ಸಂಗ್ರಹ ಬೂತ್​ಗೆ ಸಚಿವ ಡಾ.ಕೆ.ಸುಧಾಕರ್ ಚಾಲನೆ

    ಬೆಂಗಳೂರು: ರಾಜ್ಯ ಸರ್ಕಾರದ ಸ್ವಾಯತ್ತ ಸಂಸ್ಥೆ ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಸಂಗ್ರಹಿಸುವ ಬೂತ್​ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಭಾನುವಾರ ಚಾಲನೆ ನೀಡಿದ್ದಾರೆ.

    ಕಿದ್ವಾಯಿಗೆ ದಾಖಲಾಗುವ ಒಳರೋಗಿಗಳ ಸುರಕ್ಷತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಕರೊನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ ರೋಗಿಗಳನ್ನು ಮಾತ್ರ ಮುಂದಿನ ಚಿಕಿತ್ಸೆಗೆ ಒಳಪಡಿಸ ಲಾಗುವುದು ಎಂದು ಸಂಸ್ಥೆಯ ನಿರ್ದೇಶಕ ಡಾ. ಸಿ. ರಾಮಚಂದ್ರ ತಿಳಿಸಿದರು.

    ಕಿದ್ವಾಯಿಯಲ್ಲಿ ಕರೊನಾ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸುವುದಕ್ಕೆ ಐಸಿಎಂಆರ್​ನ ಡಾ. ಮಂಜುನಾಥ್ ಮೌಖಿಕ ಅನುಮತಿ ನೀಡಿದ್ದಾರೆ. ಈ ಪ್ರಯೋಗಾಲಯಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಈಗಾಗಲೇ ಸಂಸ್ಥೆಗೆ ಸಲ್ಲಿಸಿದ್ದು, ಶೀಘ್ರ ದಲ್ಲೇ ಅನುಮೋದನೆ ದೊರೆಯುವ ನಿರೀಕ್ಷೆಯಿದೆ. ಇದಕ್ಕಾಗಿ ಬೆಕ್​ವ್ಯಾನ್ ಕೌಲ್ಟರ್ ಬಯೋಮೆಕ್- 4000 ಮತ್ತು ಕ್ವಾಂಟ್ ಸ್ಟುಡಿಯೋ 5 ಉಪಕರಣಗಳನ್ನು ಬಳಸಲಾಗುತ್ತಿದೆ. ಮೂರೂವರೆ ತಾಸಿನ ಅವಧಿಯೊಳಗೆ 380 ಸ್ಯಾಂಪಲ್​ಗಳ ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿವೆ. ಶೀಘ್ರದಲ್ಲೇ ಹೆಚ್ಚಿನ ಸಾಮರ್ಥ್ಯದ ಉಪಕರಣವನ್ನು ಅಳವಡಿಸಲಾಗುವುದು ಎಂದು ಹೇಳಿದರು. ಸಂಸದ ತೇಜಸ್ವಿ ಸೂರ್ಯ ಮತ್ತಿತರರಿದ್ದರು.

    VIDEO: ನಿಯಮ ಉಲ್ಲಂಘಕರ ಕ್ವಾರಂಟೈನ್ ಹೋಮ್​ ಯಾವುದೆಂದು ತಿಳಿದರೆ ಬೆಚ್ಚಿ ಬೀಳೋದು ಗ್ಯಾರೆಂಟಿ !: ಸ್ಥಳೀಯ ರಾಜಕಾರಣಿಯೊಬ್ಬರ ಕ್ರಮ ಇದೀಗ ಜಗದ ಮನೆಮಾತು..

    ಆದಾಯ ಇಲ್ಲದೆ ಜನ ಸಂಕಷ್ಟದಲ್ಲಿದ್ದಾರೆ, ಜೀವನ ವೆಚ್ಚ ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳಿ- ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts