More

    VIDEO: ಇಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ರೆ ಭೂತಬಂಗ್ಲೆ ವಾಸ ಗ್ಯಾರೆಂಟಿ !: ಸ್ಥಳೀಯ ರಾಜಕಾರಣಿಯೊಬ್ಬರ ಕ್ರಮ ಇದೀಗ ಜಗದ ಮನೆಮಾತು..

    ಜಕಾರ್ತಾ: ಕರೊನಾ COVID19 ವೈರಸ್ ಸೋಂಕು ಶಂಕಿತರು ಕ್ವಾರಂಟೈನ್​ನಲ್ಲಿ ಇರಬೇಕಾದ್ದು ಕಡ್ಡಾಯ. ಆದರೆ, ಕೆಲವರು ಈ ನಿಯಮವನ್ನು ಪಾಲಿಸುತ್ತಿಲ್ಲ. ಈ ನಿಯಮ ಉಲ್ಲಂಘಕರ ಕಾಟ ಜಗತ್ತಿನಾದ್ಯಂತ ವಿವಿಧ ದೇಶಗಳಲ್ಲೂ ಇದೆ. ಅದಕ್ಕೆ ಇಂಡೋನೇಷ್ಯಾವೂ ಹೊರತಲ್ಲ. ಆದರೆ, ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ವಿಧಿಸುತ್ತಿರುವ ಶಿಕ್ಷೆ ವಿಚಾರ ಈಗ ವಿಶ್ವದ ಮನೆಮಾತು!

    ಎಲ್ಲ ದೇಶಗಳಲ್ಲೂ ಇರುವಂತೆ ಇಲ್ಲೂ ನಿಯಮ ಉಲ್ಲಂಘಕರಿಗೆ ಕೊರತೆಯೇನೂ ಇಲ್ಲ. ಎಲ್ಲ ರೀತಿಯಲ್ಲಿ ತಿಳಿ ಹೇಳಿ, ದಂಡ ವಿಧಿಸಿದರೂ ಜಗ್ಗದ ಮೊಂಡರಿಗೆ ವಿಧಿಸಬೇಕಾದ ಶಿಕ್ಷೆ ಹೇಗಿರಬೇಕು ಎಂಬುದಕ್ಕೆ ಜಾವಾದ ಲೋಕಲ್ ರಾಜಕೀಯ ನೇತಾರ ನೀಡಿದ ಸಲಹೆಗೆ ಸ್ಥಳೀಯ ಆಡಳಿತ ಮೆಚ್ಚಿ ತಲೆದೂಗಿತು. ಈ ಸಲಹೆ ಸೆಪಾಟ್​ ಗ್ರಾಮದಲ್ಲಿ ಜಾರಿಯೂ ಆಯಿತು. ಇದೇ ರೀತಿ ಬೇರೆ ಬೇರೆ ಗ್ರಾಮಗಳಲೂ ಇದು ಚಾಲ್ತಿಗೆ ಬಂತು. ಅದೇನು ಅಂತೀರಾ?

    ಇದು ಜಾರಿಗೆ ಬರುತ್ತಲೇ ಅಲ್ಲಿ ನಿಯಮ ಉಲ್ಲಂಘಕರ ಬಂಧನ ಶುರುವಾಯಿತು. ಎಲ್ಲರನ್ನೂ ಕೂಡಿ ಹಾಕಿ ಕ್ವಾರಂಟೈನ್​ನಲ್ಲಿ ಇರಿಸಲು ಅವರು ಕಂಡುಕೊಂಡದ್ದು ಯಾವುದೋ ಕಾಲೇಜು ಕಟ್ಟಡವೋ, ಶಾಲಾ ಕಟ್ಟಡವನ್ನೋ ಅಲ್ಲ. ಬದಲಾಗಿ ಭೂತ ಬಂಗ್ಲೆಗಳನ್ನು!..

    ಸೆಪಾಟ್​ ಗ್ರಾಮದಲ್ಲಿ ಅಂತಹ ಅನೇಕ ಪುರಾತನ ಮನೆಗಳಿವೆ. ದೆವ್ವಗಳ ಕಾಟದ ಕಾರಣಕ್ಕೆ ಆ ಮನೆಗಳಲ್ಲಿ ಜನವಾಸ ಇರಲಿಲ್ಲ. ಈಗ ಆ ಮನೆಗಳನ್ನು ಸ್ವಚ್ಛಗೊಳಿಸಿ ಅಲ್ಲಿ ಈ ಕ್ವಾರಂಟೈನ್ ಉಲ್ಲಂಘಕರನ್ನು ಕರೆದೊಯ್ದು ಅಲ್ಲಿ ಕೂಡಿ ಹಾಕಿ ಹೊರಗಿಂದ ಬೀಗ ಹಾಕುವ ಕೆಲಸವನ್ನು ಅಲ್ಲಿನ ಸ್ಥಳೀಯಾಡಳಿತ ಮಾಡತೊಡಗಿದೆ. ಇದು ಪರಿಣಾಮ ಬೀರಿದ್ದು, ನಿಯಮ ಉಲ್ಲಂಘಕರ ಸಂಖ್ಯೆ ಕಡಿಮೆಯಾಗತೊಡಗಿದೆ ಎನ್ನುತ್ತಿವೆ ಮೂಲಗಳು. (ಏಜೆನ್ಸೀಸ್)

    ಲೇಸ್​ ಬ್ರಾ ಆಕಾರದ ಫೇಸ್​ಮಾಸ್ಕ್​ಗಳಿಗೆ ಜಪಾನಿನಲ್ಲಿ ಭಾರಿ ಬೇಡಿಕೆ- ಮಾರುಕಟ್ಟೆ ಬಂದ ಕೆಲವೇ ನಿಮಿಷಗಳಲ್ಲಿ ಸ್ಟಾಕ್ ಖಾಲಿ!

    ಭರ್ಜರಿ ಹನಿಮೂನ್​ ಜೋಡಿ ಕೊನೆಗೂ ಸ್ವದೇಶಕ್ಕೆ ಮರಳಿತು: ನೆರವು ನೀಡಿದವರಾರು?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts