More

    ಕರೊನಾ ಸೋಂಕು ಪ್ರಕರಣ ಉಲ್ಬಣಿಸಿದರೂ ಆತಂಕ ಬೇಡ: ಸಚಿವ ಡಾ.ಕೆ.ಸುಧಾಕರ್ ಅಭಯ

    ಬೆಂಗಳೂರು: ಕರೊನಾ ಮೂರನೇ ಅಲೆ ವೇಗ ಹೆಚ್ಚಿದೆ. ಸೋಂಕು ಪ್ರಕರಣಗಳು ಉಲ್ಬಣಿಸಿದ್ದರೂ ಆತಂಕ ಅನಗತ್ಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಭಯ ನೀಡಿದ್ದಾರೆ.

    ಸದಾಶಿವ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಸುಧಾಕರ್​, ಮೊದಲ ಮತ್ತು ಎರಡನೇ ಅಲೆಯಲ್ಲಿ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಹೆಚ್ಚಿತ್ತು. ತೀವ್ರ ಉಸಿರಾಟದ ತೊಂದರೆ, ಎರಡರಿಂದ ನಾಲ್ಕು ವಾರಗಳ ತನಕ ಚಿಕಿತ್ಸೆ ಪಡೆದ ನಿದರ್ಶನಗಳಿವೆ. ಈ ಬಾರಿ ಆಸ್ಪತ್ರೆಗಿಂತ ಮನೆಯಲ್ಲೇ ಚಿಕಿತ್ಸೆ ಪಡೆಯುವವರ ಸಂಖ್ಯೆ ಜಾಸ್ತಿಯಿದೆ. ಹೆಚ್ಚೆಂದರೆ ಐದು ದಿನಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಐಸಿಯು, ವೆಂಟಿಲೇಟರ್, ಆಮ್ಲಜನಕ ಸಹಿತ ಹಾಸಿಗೆಗಳನ್ನು ಬಳಸುತ್ತಿಲ್ಲ. ವೈರಾಣು ಮೂಗಿನ ಮೂಲಕ ಗಂಟಲುವರೆಗೆ ತಲುಪುತ್ತದೆ. ಕೆಲವು ಪ್ರಕರಣಗಳಲ್ಲಿ ಶ್ವಾಸಕೋಶದ ಮೇಲ್ಭಾಗಕ್ಕೆ ತಲುಪಿದ್ದು, ಹಿಂದಿನಂತೆ ಶ್ವಾಸಕೋಶದ ಒಳಗೆ ಪ್ರವೇಶಿಸುತ್ತಿಲ್ಲವಾದ ಕಾರಣ ತೀವ್ರತೆ ಕಡಿಮೆಯಿದೆ ಎಂದು ವಿವರಿಸಿದರು.

    ಏನು ಮಾಡಿದರೂ ವಿರೋಧ: ಸರ್ಕಾರ ಯಾವುದೇ ನಿರ್ಧಾರ, ಕ್ರಮ ಕೈಗೊಂಡರೂ ವಿರೋಧಿಸುವವರು ಹೆಚ್ಚಾಗಿದ್ದಾರೆ. ರಚನಾತ್ಮಕ ಚರ್ಚೆ, ಟೀಕೆಗೆ ಸ್ವಾಗತಾರ್ಹ. ಕಟ್ಟುನಿಟ್ಟಿನ ಕ್ರಮಗಳಿಂದ ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ ನಿರ್ಬಂಧ ಜಾರಿ ಪರಿಣಾಮ, ನಿಖರ ಅಂಕಿ-ಅಂಶಗಳನ್ನು ಹೇಳಲಾಗದಿದ್ದರೂ ಆ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಸುಧಾಕರ್ ತಿಳಿಸಿದರು.

    ರಾಜ್ಯದ ಎಲ್ಲ ಜಿಲ್ಲೆಯಲ್ಲೂ ಗ್ರಾಮ ಲೆಕ್ಕಿಗರ ಹುದ್ದೆ ಭರ್ತಿಗೆ ಹಸಿರು ನಿಶಾನೆ

    ವಿಆರ್​ಎಲ್​ ಹೆಸರಲ್ಲಿ ವಂಚನೆ: ನಕಲಿ ವೆಬ್​​ಸೈಟ್​ ಸೃಷ್ಟಿಸಿ ಗ್ರಾಹಕರಿಗೆ ಮೋಸ, ಎಫ್​ಐಆರ್​ ದಾಖಲು

    ದೂರು ನೀಡಲು ಬಂದಾಕೆಯನ್ನೇ ಮಂಚಕ್ಕೆ ಕರೆದ ಪೊಲೀಸ್​ ಇನ್​ಸ್ಪೆಕ್ಟರ್​! ಸಂತ್ರಸ್ತೆ ಬಿಚ್ಚಿಟ್ಟ ನೋವು ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts