ಮಂಡ್ಯಕ್ಕೆ ವಕ್ಕರಿಸಿದ ಮುಂಬೈ ನಂಜು

covid
Published on

ಮಂಡ್ಯ: ದೇಶಕ್ಕೆ ಮಾರಕವಾಗಿರುವ ತಬ್ಲಿಘಿಗಳ ಸಂಪರ್ಕದಿಂದ ತತ್ತರಿಸಿರುವ ಜಿಲ್ಲೆಗೆ ನಂಜನಗೂಡಿನ ಕಾರ್ಖಾನೆ ನಂಟು ಆತಂಕ ಸೃಷ್ಟಿಸಿದ್ದ ಬೆನ್ನಲ್ಲೇ ದೇಶದಲ್ಲಿ ಹೆಚ್ಚು ಸೋಂಕಿತರಿರುವ ಮುಂಬೈ ನಂಟು ಈಗ ಜಿಲ್ಲೆಗೆ ವಕ್ಕರಿಸಿದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ. ಮುಂಬೈನಲ್ಲಿ 20 ವರ್ಷಗಳಿಂದ ಹೋಟೆಲ್ ನಡೆಸಿಕೊಂಡಿದ್ದ ನಾಗಮಂಗಲ ತಾಲೂಕಿನ ಸಾತೇನಹಳ್ಳಿ ಗ್ರಾಮದ 50 ವರ್ಷದ ವ್ಯಕ್ತಿ (ಪಿ505)ಗೆ ಸೋಂಕು ದೃಢಪಟ್ಟಿದೆ.

ಮುಂಬೈನಲ್ಲಿ ಮಹಾಮಾರಿ ಡಂಗೂರು ಸಾರುತ್ತಿರುವ ನಡುವೆಯೂ ಈ ವ್ಯಕ್ತಿ, ಏ.20ರ ರಾತ್ರಿ 9 ಗಂಟೆಗೆ ಅಲ್ಲಿನ ವಾರ್ಸಿ ಮಾರುಕಟ್ಟೆಯ ರ್ಪಾಂಗ್ ಸ್ಥಳದಿಂದ ಖರ್ಜೂರ ತುಂಬಿಕೊಂಡು ಬರುತ್ತಿದ್ದ ಕ್ಯಾಂಟರ್​ನಲ್ಲಿ ರಾಜ್ಯದತ್ತ ಹೊರಟಿದ್ದಾರೆ. 21ರ ಸಂಜೆ 6 ಗಂಟೆಗೆ ಉಡುಪಿಗೆ ಬಂದು ಅಲ್ಲಿನ ಐಒಸಿ ಪೆಟ್ರೋಲ್ ಬಂಕ್​ನಲ್ಲಿ ಸ್ನಾನ ಮುಗಿಸಿ ಉಪಾಹಾರ ಸೇವಿಸಿ, ಅಲ್ಲಿಂದ ಹೊರಟು 22ರ ಮುಂಜಾನೆ 4.30ರ ವೇಳೆಗೆ ಮಂಗ ಳೂರು ತಲುಪಿ ಅಲ್ಲಿನ ಓಲ್ಡ್ ಬಂದರ್ ಮಾರುಕಟ್ಟೆಯ ಅಂಗಡಿಗಳಿಗೆ ಭೇಟಿ ನೀಡಿದ್ದಾರೆ. ಅಲ್ಲಿಂದ ಬೆಳಗ್ಗೆ 11.30ರ ವೇಳೆಗೆ ಹಾಸನ ಮಾರ್ಗವಾಗಿ ಚನ್ನರಾಯಪಟ್ಟಣಕ್ಕೆ ಆಗಮಿಸಿ, ಅಲ್ಲಿಗೆ ಕಾರ್​ನಲ್ಲಿ (ಕೆಎ 54, 2620) ಬಂದು ಕಾದಿದ್ದ ಅವರ ಬಾಮೈದುನ ಸಾತೇನಹಳ್ಳಿಗೆ ಕರೆದು ಕೊಂಡು ಬಂದಿದ್ದಾರೆ. ಸಾತೇನಹಳ್ಳಿಯಲ್ಲಿ ಮನೆಯಲ್ಲೇ ಉಳಿದಿದ್ದ ಅವರು, ಏ.24ರಂದು ನಾಗಮಂಗಲದಲ್ಲಿ ಜಿಲ್ಲಾಡಳಿತ ಏರ್ಪಡಿಸಿದ್ದ ಸೋಂಕು ಪರೀಕ್ಷಾ ಶಿಬಿರದಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಂಡಿದ್ದರು. 26ರಂದು ಬಂದ ರಕ್ತ, ಗಂಟಲು ಮಾದರಿ ಪರೀಕ್ಷೆ ಫಲಿತಾಂಶದಲ್ಲಿ ಸೋಂಕಿರುವುದು ದೃಢಪಟ್ಟಿದೆ. ಅವರನ್ನು ಈಗ ಮಿಮ್್ಸ ಐಸೋಲೇಷನ್ ವಾರ್ಡ್​ಗೆ ದಾಖಲಿಸಲಾಗಿದೆ. ಇವರಿಗೂ ಯಾವುದೇ ರೋಗ ಲಕ್ಷಣಗಳು ಕಾಣಿಸಿರಲಿಲ್ಲ.

ನಾಲ್ವರು ಐಸೋಲೇಷನ್​ಗೆ: ಮುಂಬೈನಿಂದ ಇವರನ್ನು ಕರೆತಂದ 27 ವರ್ಷದ ಕ್ಯಾಂಟರ್ ಚಾಲಕ, 36 ವರ್ಷದ ಸಹ ಪ್ರಯಾಣಿಕ, ಕಾರಿನಲ್ಲಿ ಮನೆಗೆ ಕರೆತಂದ ಬಾಮೈದುನ, ಪತ್ನಿಯನ್ನು ಪ್ರಾಥಮಿಕ ಸಂಪರ್ಕದಲ್ಲಿದ್ದವರೆಂದು ಪರಿಗಣಿಸಿ, ಐಸೋಲೇಷನ್ ಮಾಡಲಾಗಿದೆ. ಇವರ ಜತೆಗೆ ಇಬ್ಬರು ಮಕ್ಕಳು, ತಂದೆ-ತಾಯಿ, ಬಾಮೈದುನನ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ದ್ವಿತೀಯ ಸಂಪರ್ಕದಲ್ಲಿದ್ದವರೆಂದು ಪರಿಗಣಿಸಿ ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಮನೆಯ ಸುತ್ತಮುತ್ತಲ ಪ್ರದೇಶದ ಎಲ್ಲರನ್ನು ದ್ವಿತೀಯ ಸಂರ್ಪತರೆಂದು ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಲಾಕ್​ಡೌನ್ ಉಲ್ಲಂಘನೆ: ದೇಶಾದ್ಯಂತ ಲಾಕ್​ಡೌನ್ ಜಾರಿಯಾಗಿದ್ದು, ಪೂರ್ವಾನುಮತಿ ಇಲ್ಲದೆ ಯಾರೊಬ್ಬರೂ ಹೊರ ಜಿಲ್ಲೆಗಳಿಗೆ ಪ್ರವೇಶಿಸಬಾರದೆಂಬ ನಿಯಮವಿದೆ. ಜತೆಗೆ ಎಲ್ಲ ಜಿಲ್ಲೆ, ತಾಲೂಕುಗಳ ಗಡಿಗಳಲ್ಲಿ ಚೆಕ್​ಪೋಸ್ಟ್​ಗಳನ್ನು ತೆರೆದು ಪೊಲೀಸರು ಕಾವಲಿದ್ದಾರೆ. ಆದರೂ ಈ ವ್ಯಕ್ತಿ ಮುಂಬೈನಿಂದ ಹಲವು ಜಿಲ್ಲೆಗಳ ಮೂಲಕ ಮಂಡ್ಯಕ್ಕೆ ಆಗಮಿಸಿರುವುದು ಸಾಕಷ್ಟು ಅನುಮಾನ, ಆತಂಕಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net