

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 7000ಕ್ಕೆ ಏರಿದೆ. ಕಳೆದ 24 ಗಂಟೆಯಲ್ಲಿ 176 ಹೊಸ ಕೊವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, 312 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ.
ಒಂದು ದಿನದಲ್ಲಿ ಪತ್ತೆಯಾಗುವ ಹೊಸ ಪ್ರಕರಣಗಳಿಗಿಂತ, ಗುಣಮುಖರಾಗುತ್ತಿರುವವರ ಪ್ರಮಾಣ ಹೆಚ್ಚುತ್ತಿರುವುದು ತುಸು ಸಮಾಧಾನಕರ ಸಂಗತಿಯಾಗಿದೆ. ಇದನ್ನೂ ಓದಿ: ಮಾಜಿ ಮ್ಯಾನೇಜರ್ ದಿಶಾ ಆತ್ಮಹತ್ಯೆ ಸುದ್ದಿ ಕೇಳಿ ತೀವ್ರ ದುಃಖಿತರಾಗಿದ್ದ ಸುಶಾಂತ್; ಇಂದು ತಾವೂ ಅದೇ ಹಾದಿ ತುಳಿದರು
ರಾಜ್ಯದಲ್ಲಿ ಕೊವಿಡ್-19ನಿಂದ ಇಂದು ಒಟ್ಟು 5ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 86ಕ್ಕೆ ಏರಿದೆ. ಒಟ್ಟು ಬಿಡುಗಡೆಯಾದವರ ಸಂಖ್ಯೆ 3955 ಆಗಿದ್ದು, ರಾಜ್ಯದಲ್ಲಿ ಸಕ್ರಿಯ ಕರೊನಾ ಪ್ರಕರಣಘಲು 2956ಕ್ಕೆ ಇಳಿದಿದೆ. ಇಂದು ಪತ್ತೆಯಾದ ಕರೊನಾ ಸೋಂಕಿತರಲ್ಲಿ 6 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರು, 88 ಮಂದಿ ಅಂತಾರಾಜ್ಯ ಪ್ರಯಾಣಿಕರು ಎಂದು ಗುರುತಿಸಲಾಗಿದೆ.
ಬೆಂಗಳೂರು ನಗರ-42ಯಾದಗಿರಿ-22ಉಡುಪಿ-21ಬೀದರ್-20ಕಲಬುರಗಿ-13ಧಾರವಾಡ-10ಬಳ್ಳಾರಿ-8ಕೋಲಾರ-7ಉತ್ತರ ಕನ್ನಡ-6ಮಂಡ್ಯ-5ದಕ್ಷಿಣ ಕನ್ನಡ-5ಬಾಗಲಕೋಟೆ-4ರಾಮನಗರ-3ರಾಯಚೂರು-2ಶಿವಮೊಗ್ಗ-2ಬೆಳಗಾವಿ-1ಹಾಸನ-1ವಿಜಯಪುರ-1ಬೆಂಗಳೂರು ಗ್ರಾಮಂತರ-1ಹಾವೇರಿ-1