ಮುಂಬೈ, ಅಹಮದಾಬಾದ್​ನಿಂದ ರಾಜ್ಯದಲ್ಲಿ ಹೆಚ್ಚುತ್ತಿದೆ ಕರೊನಾ ಸೋಂಕು!

Covid india 2 May 20
Published on

ಬೆಂಗಳೂರು: ನಿನ್ನೆ ಸಂಜೆ 5 ಗಂಟೆಯಿಂದ ಇಂದಿನವರೆಗೆ ರಾಜ್ಯದಲ್ಲಿ 14 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಮುಂಬೈ ಮತ್ತು ಅಹಮದಾಬಾದ್​ನಿಂದ ಬಂದವರೇ ಹೆಚ್ಚು.

ಮುಂಬೈನಿಂದ ಪ್ರಯಾಣ ಬೆಳೆಸಿದ್ದ ಹಾವೇರಿ ಜಿಲ್ಲೆ ಶಿಗ್ಗಾವಿಯ 26 ವರ್ಷದ ಯುವಕ, ಹಾಸನದ 30 ವರ್ಷದ ಮಹಿಳೆ ಹಾಗೂ ಮಂಡ್ಯದ 38 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ. ಗುಜರಾತ್​ನ ಅಹಮದಾಬಾದ್​ನಿಂದ ಬಂದಿರುವ ಬಾಗಲಕೋಟೆ ಬನಹಟ್ಟಿಯ 20 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ.

ಇದನ್ನು ಹೊರತುಪಡಿಸಿದರೆ, ಈಗಾಗಲೇ ಸೋಂಕಿತರ ಸಂಪರ್ಕದಲ್ಲಿದ್ದ ಕಲಬುರಗಿಯ 1, ದಾವಣಗೆರೆಯ 3, ಬಾಗಲಕೋಟೆ ಜಿಲ್ಲೆ ಬಾದಾಮಿಯ 1, ವಿಜಯಪುರದ 1, ಬೀದರ್​ನ 2, ಬೆಂಗಳೂರು ನಗರದ 1, ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಂಧ್ರ ಪ್ರದೇಶ ಅನಂತಪುರದ 1 ಪ್ರಕರಣ ಬೆಳಕಿಗೆ ಬಂದಿದೆ. 31 ಮಂದಿ ಸೋಂಕಿನಿಂದ ಇಲ್ಲಿಯವರೆಗೆ ಮೃತಪಟ್ಟಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಕಂಡುಬಂದಿರುವ ಹೊಸ ಸೋಂಕು ಪ್ರಕರಣಗಳಲ್ಲಿ 40 ವರ್ಷಕ್ಕಿಂತ ಕಡಿಮೆ ವಯೋಮಾನದವರೇ ಎನ್ನುವುದು ಆತಂಕಕ್ಕೆ ಕಾರಣವಾಗಿದೆ.

ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟು ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂಬ ವಿವರ ಇಲ್ಲಿದೆ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net