300ರ ಗಡಿ ದಾಟಿತು ಬೆಂಗಳೂರು: 11 ಜಿಲ್ಲೆಗಳಲ್ಲಿ ಶತಕ ಮೀರಿದ ಕರೊನಾ ಸೋಂಕು!

Corona Medicin 19 may 20
Published on

ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕರೊನಾ ಸೋಂಕು 248 ಹೊಸದಾಗಿ ಪತ್ತೆಯಾಗುವ ಮೂಲಕ, ಸೋಂಕಿತರ ಸಂಖ್ಯೆ 2781ಕ್ಕೆ ಏರಿದೆ. ಇವರ ಪೈಕಿ ಅಂತರರಾಜ್ಯ ಪ್ರಯಾಣಿಕರ ಸಂಖ್ಯೆ 227.

ಈ ಪೈಕಿ 894 ಮಂದಿ ಬಿಡುಗಡೆಗೊಂಡಿದ್ದು, 1837 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ 50 ವರ್ಷದ ಚಿಕ್ಕಬಳ್ಳಾಪುರದ ಮಹಿಳೆಗೆ ಕರೊನಾ ಸೋಂಕು ಪತ್ತೆಯಾಗಿದ್ದು ಅವರು ಇಂದು ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕರೊನಾ ಸಾವಿನ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 303 ಸೋಂಕಿತರು ಇಲ್ಲಿಯವರೆಗೆ ಪತ್ತೆಯಾಗಿದ್ದರೆ, ಮಂಡ್ಯದಲ್ಲಿ 257, ಕಲಬುರಗಿಯಲ್ಲಿ 251, ಯಾದಗಿರಿಯಲ್ಲಿ 223, ಉಡುಪಿಯಲ್ಲಿ 164, ದಾವಣಗೆರೆಯಲ್ಲಿ 146, ಬೆಳಗಾವಿಯಲ್ಲಿ 146, ಹಾಸನದಲ್ಲಿ 144, ಚಿಕ್ಕಬಳ್ಳಾಪುರದಲ್ಲಿ 136. ರಾಯಚೂರಿನಲ್ಲಿ 134, ಬೀದರ್​ನಲ್ಲಿ 120 ಸೋಂಕಿತರು ಇದುವರೆಗೆ ಪತ್ತೆಯಾಗುವ ಮೂಲಕ ಒಟ್ಟಾರೆ 11 ಜಿಲ್ಲೆಗಳಲ್ಲಿ ಸೋಂಕು ಶತಕ ಮೀರಿದೆ.

ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆಯವರೆಗೆ ಸೋಂಕು ಪತ್ತೆಯಾದವರ ಪಟ್ಟಿ ಇಂತಿದೆ:
ರಾಯಚೂರು 62, ಕಲಬುರ್ಗಿ 61, ಯಾದಗಿರಿ 60, ಉಡುಪಿ 15, ಬೆಂಗಳೂರು: 12; ದಾವಣಗೆರೆ 4, ಹಾಸನ 4, ಚಿಕ್ಕಬಳ್ಳಾಪುರ 5, ವಿಜಯಪುರ 4, ಮೈಸೂರು 2, ಬಳ್ಳಾರಿ 9, ತುಮಕೂರು 2, ಚಿಕ್ಕಮಗಳೂರು 2, ಧಾರವಾಡ, ಚಿತ್ರದುರ್ಗ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.

ನಿಜಾಮುದ್ದೀನ್‌ ಮರ್ಕಜ್‌ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಉಚಿತ ಆರೋಗ್ಯ ಸಹಾಯವಾಣಿ 080-29711171 ಸಂಪರ್ಕಿಸುವಂತೆ ಸರ್ಕಾರ ಸೂಚಿಸಿದೆ.
ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.

ಸಂಪೂರ್ಣ ವಿವರ ಇಲ್ಲಿದೆ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net