

ನವದೆಹಲಿ: ಕರೊನಾ ವೈರಸ್ನ್ನು ಮನೆಗಳಿಗೆ ಹೊತ್ತು ತರಬಲ್ಲಂತಹ ವಸ್ತುಗಳಿಂದ ಸೋಂಕನ್ನು ತೆಗೆದುಹಾಕಲು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಟ್ರಂಕ್ ರೂಪದಲ್ಲಿರುವ ಯಂತ್ರವೊಂದನ್ನು ಆವಿಷ್ಕರಿಸಿದೆ. ಇದನ್ನು ನೆರಳಾತೀತ (ಅಲ್ಟ್ರಾ ವೈಲೆಟ್) ಜೀವಾಣು ವಿಕಿರಣ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿದೆ. ದಿನಸಿ, ಬಟ್ಟೆ, ನೋಟುಗಳು ಸೇರಿದಂತೆ ಎಲ್ಲಾ ರೀತಿಯ ವಸ್ತುಗಳನ್ನು ಈ ಮಷಿನ್ ಸೋಂಕು ಮುಕ್ತವನ್ನಾಗಿ ಮಾಡುತ್ತದೆ.
ಪಂಜಾಪ್ನ ರೋಪರ್ ಐಐಟಿ ಆವಿಷ್ಕರಿಸಿರುವ ಈ ಮಷಿನ್ಗೆ ಮಾರುಕಟ್ಟೆಯಲ್ಲಿ -ಠಿ;500 ಬೆಲೆ ಇರಬಹುದು ಎನ್ನಲಾಗಿದೆ. ಹೊರಗಿನಿಂದ ಬಂದವರು ಧರಿಸಿರುವ ಬಟ್ಟೆ, ತಂದ ದಿನಸಿ, ಅಂಗಡಿಯಲ್ಲಿ ತೆಗೆದುಕೊಂಡ ನೋಟು ಮತ್ತು ಮೊಬೈಲ್ನಲ್ಲಿ ಸೋಂಕು ಬರುವ ಸಾಧ್ಯತೆ ಇದೆ. ಅನೇಕರು ತರಕಾರಿಯನ್ನು ಬಿಸಿ ನೀರಿನಲ್ಲಿ ತೊಳೆದು ಉಪಯೋಗಿಸುತ್ತಾರೆ. ಆದರೆ ನೋಟು, ವ್ಯಾಲೆಟ್ಗಳನ್ನು ಹಾಗೆ ಮಾಡಲಾಗುವುದಿಲ್ಲ. ಹಾಗಾಗಿ ಈ ಮಷಿನನ್ನು ಮನೆಯ ಬಾಗಿಲ ಬಳಿ ಇರಿಸಿದರೆ ಇದರಲ್ಲಿ ಆ ವಸ್ತುಗಳನ್ನು ಇಡಬಹುದು.
30 ನಿಮಿಷಗಳಲ್ಲಿ ಈ ಮಷಿನ್ ಅಲ್ಟ್ರಾವೈಲೆಟ್ ಕಿರಣಗಳ ಸಹಾಯದಿಂದ ಸೋಂಕನ್ನು ಸಾಯಿಸುತ್ತದೆ. ಅದಾದ ನಂತರ 10 ನಿಮಿಷಗಳ ಕಾಲ ವಸ್ತುವನ್ನು ತಣ್ಣಗಾಗಲು ಬಿಟ್ಟು ನಂತರ ಮಾಮೂಲಿಯಂತೆ ಉಪಯೋಗಿಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. ಕರೊನಾ ವೈರಸ್ ತಡೆಯುವುದಕ್ಕೆ ಸಾಮಾಜಿಕ ಅಂತರ ಕಾಯ್ದುಕೊಂಡರೆ ಸಾಕಾಗುವುದಿಲ್ಲ. ಮುಂದಿನ ದಿನಗಳಲ್ಲಿ ಸೋಂಕಿನ ಪರಿಣಾಮ ಹೆಚ್ಚಾಗಲಿದೆ. ನಾವು ಟ್ರಂಕ್ನಂತೆ ತಯಾರಿಸಿರುವ ಈ ಮಷಿನ್ನಿಂದ ಸೋಂಕು ಹರಡುವಿಕೆಯನ್ನು ತಡೆಯಬಹುದು ಎಂದು ಐಐಟಿ ರೋಪರ್ನ ಹಿರಿಯ ವೈಜ್ಞಾನಿಕ ಅಧಿಕಾರಿ ನರೇಶ್ ರಾಖಾ ತಿಳಿಸಿದ್ದಾರೆ.
ಡಿಎಚ್ಎಫ್ಎಲ್ ಪ್ರವರ್ತಕರ ವಿರುದ್ಧ ದೂರು
ಲಾಕ್ಡೌನ್ ನಿಯಮ ಮೀರಿ ಮುಂಬೈನಿಂದ ಮಹಾಬಲೇಶ್ವರಕ್ಕೆ ತೆರಳುತ್ತಿದ್ದ ಡಿಎಚ್ಎಫ್ಎಲ್ ಪ್ರವರ್ತಕರಾದ ಕಪಿಲ್ ವಾಧ್ವಾನ್ ಮತ್ತು ಧೀರಜ್ ವಾಧ್ವಾನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕುಟುಂಬಸ್ಥರು ಸೇರಿದಂತೆ ಒಟ್ಟು 21 ಜನರೊಂದಿಗೆ ಇವರಿಬ್ಬರು ಎಸ್ ಬ್ಯಾಂಕ್ನ ತನಿಖೆಯಿಂದ ತಪ್ಪಿಸಿಕೊಳ್ಳಲು ಮುಂಬೈನಿಂದ ಕಾಲ್ಕಿತ್ತಿರುವ ಆರೋಪದ ಮೇರೆಗೆ ಎಫ್ಐಆರ್ ದಾಖಲಾಗಿದೆ. ಕುಟುಂಬದಲ್ಲಿ ತುರ್ತು ಸಮಸ್ಯೆಯಿದೆ ಎಂದು ಇವರಿಗೆ ಪ್ರಯಾಣಕ್ಕೆ ಪಾಸ್ ಒದಗಿಸಿಕೊಟ್ಟ ಐಪಿಎಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಕಳ್ಳನಿಂದ ಹರಡಿದ ಸೋಂಕು
ಪಂಜಾಬ್ನಲ್ಲಿ ವಾಹನ ಕಳ್ಳತನದ ಆರೋಪದಲ್ಲಿ ಬಂಧಿಸಲಾಗಿದ್ದ ವ್ಯಕ್ತಿಯಲ್ಲಿ ಕರೊನಾ ಸೋಂಕು ಪತ್ತೆಯಾದ ಹಿನ್ನೆಲೆ ಆತನನ್ನು ಬಂಧಿಸಿದ್ದ 17 ಪೊಲೀಸರು ಹಾಗೂ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರನ್ನೂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.