ವಾಯುಮಾಲಿನ್ಯದಲ್ಲೂ ಕರೊನಾ ವೈರಸ್ ಪತ್ತೆ! ಬೊಲೊಗ್ಬಾ ವಿಶ್ವವಿದ್ಯಾಲಯದ ಲಿಯೋನಾರ್ಡೆ ಸೆಟಿ ಸಂಶೋಧನೆ

page 7 2
Published on

ಇಟಲಿ: ವಾಯು ಮಾಲಿನ್ಯದಲ್ಲಿ ಕರೊನಾ ವೈರಸ್ ಅನ್ನು ಇಟಲಿಯ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಬೊಲೊಗ್ಬಾ ವಿಶ್ವವಿದ್ಯಾಲಯದ ಲಿಯೋನಾರ್ಡೆ ಸೆಟಿ ಸಂಶೋಧನೆಯನ್ನು ನಡೆಸಿದ್ದು ವಾಯು ಮಾಲಿನ್ಯದಲ್ಲಿಯೂ ಕರೊನಾ ವೈರಸ್ ಇರುತ್ತದೆ ಎನ್ನುವ ವಿಚಾರವನ್ನು ತಿಳಿಸಿದ್ದಾರೆ.

ಇಟಲಿಯ ಬರ್ಗಾವೊ ಪ್ರಾಂತ್ಯದ ಕೈಗಾರಿಕಾ ವಾಸಹತುಗಳ ಗಾಳಿಯ ಕಣಗಳನ್ನು ಅಧ್ಯಯನ ಮಾಡಿರುವ ಅವರು, ಕೋವಿಡ್-19 ಹೋಲುವ ವೈರಸ್ ಪತ್ತೆಯಾಗಿದೆ. ಮಾಲಿನ್ಯ ಹೆಚ್ಚಾದಂತೆ ಈ ವೈರಸ್​ನ ಪ್ರಮಾಣ ಕೂಡ ಏರಿದೆ ಎಂದು ತಿಳಿಸಿದ್ದಾರೆ. ಈ ವೈರಸ್ ಗಾಳಿಯಲ್ಲಿ ಎಷ್ಟು ಸಮಯ ಜೀವಂತವಾಗಿರುತ್ತದೆ ಎನ್ನುವುದನ್ನು ಹೆಚ್ಚಿನ ಅಧ್ಯಯನದ ಮೂಲಕ ತಿಳಿದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಪ್ಯಾರಿಸ್​ನಲ್ಲಿ ಸಂಸ್ಕರಿತ ನೀರಿನಲ್ಲಿ ಕರೊನಾ ವೈರಸ್ ಕಂಡುಬಂದಿರುವುದಾಗಿ ಸಂಶೋಧನೆಯೊಂದರಲ್ಲಿ ತಿಳಿಸಲಾಗಿತ್ತು. ಹಾಗೆಯೇ ಅಮೆರಿಕದಲ್ಲಿ ಗಾಳಿಯ ಮೂಲಕ ಸೋಂಕು ಹರಡುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದರು. ಆದರೆ, ವಿಶ್ವ ಆರೋಗ್ಯ ಸಂಸ್ಥೆ ಇಂತಃ ಸಾಧ್ಯತೆ ಇಲ್ಲ ಎಂದು ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net