

ಉಡುಪಿ: ಲಾಕ್ಡೌನ್ನಿಂದಾಗಿ ಸಲೂನ್ಗಳೆಲ್ಲ ಬಂದ್ ಆಗಿದ್ದವು. ಹಾಗಾಗಿ ಅದೆಷ್ಟೋ ಜನರು ಸರಿಯಾಗಿ ಹೇರ್ ಕಟಿಂಗ್ ಮಾಡಿಸಲಾಗದೆ ಕಷ್ಟಪಟ್ಟಿದ್ದುಂಟು. ಈಗ ಲಾಕ್ಡೌನ್ ಸಡಿಲಿಕೆಯಾಗಿದ್ದು, ಕೆಲವೆಡೆ ಕ್ಷೌರದ ಅಂಗಡಿಗಳು ಬಾಗಿಲು ತೆರೆದು ಕಾರ್ಯ ಆರಂಭಿಸಿವೆ. ಜನರೂ ಸಹ ತಲೆ ಭಾರ ಕಡಿಮೆ ಮಾಡಿಕೊಳ್ಳಲು ಅಲ್ಲಿಗೆ ಓಡುತ್ತಿದ್ದಾರೆ.
ಆದರೆ, ಹೀಗೆ ಸಲೂನ್ಗಳಿಗೆ ಹೋಗುವ ಮುನ್ನ ಎಚ್ಚರ ಇರಲಿ. ಯಾಕೆಂದರೆ ಇಲ್ಲೊಂದು ಸಲೂನ್ನಲ್ಲಿ ಕರೊನಾ ಸೋಂಕಿತ ಹೇರ್ ಕಟಿಂಗ್ ಮಾಡಿಸಿದ ಪರಿಣಾಮ ಅದೀಗ ಬಂದ್ ಆಗಿದೆ.
ಉಡುಪಿಯ ಕಾಪು ತಾಲೂಕಿನಲ್ಲಿ ಘಟನೆ ನಡೆದಿದೆ. ಜಿಲ್ಲಾ ಪಂಚಾಯಿತಿಯ ಹೊರಗುತ್ತಿಗೆ ನೌಕರನೋರ್ವ ವಾರದ ಹಿಂದೆ ಸರಕಾರಿ ಗುಡ್ಡೆಯಲ್ಲಿ ಕ್ಷೌರ ಮಾಡಿಸಿದ್ದ. ಆದರೆ ಈ ಯುವಕನಿಗೆ ಕರೊನಾ ಇರುವುದು ನಿನ್ನೆ (ಸೋಮವಾರ) ದೃಢಪಟ್ಟಿದೆ. ಇದೀಗ ಕ್ಷೌರದ ಅಂಗಡಿ ಬಂದ್ ಆಗಿದ್ದು, ಆ ಯುವಕ ಬಂದು ಹೋದ ಮೇಲೆ ಯಾರ್ಯಾರು ಬಂದಿದ್ದರೋ ಅವರನ್ನೆಲ್ಲ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಸಲೂನ್ ಮಾಲೀಕರು ಸಹ ಆತಂಕದಲ್ಲಿದ್ದಾರೆ. (ದಿಗ್ವಿಜಯ ನ್ಯೂಸ್)