ಕರ್ನಾಟಕಕ್ಕೆ ಕೊವಿಡ್​-19 ಕಂಟಕ, ಸೋಂಕಿತರ ಸಂಖ್ಯೆ 2282ಕ್ಕೆ ಏರಿಕೆ; ಚಿತ್ರದುರ್ಗಕ್ಕೆ ಶಾಕ್​

coronavirus-new
Published on

ಬೆಂಗಳೂರು: ಕರ್ನಾಟಕದಲ್ಲಿ ಕರೊನಾ ಮಹಾಮಾರಿಯ ವ್ಯಾಪ್ತಿ ಹೆಚ್ಚುತ್ತಲೇ ಇದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಆತಂಕಕಾರಿಯಾಗಿ ಏರುತ್ತಿದೆ.

ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12ಗಂಟೆವರೆಗೆ ಅಂದರೆ ಬರೀ ಅರ್ಧದಿನಗಳಲ್ಲಿ 100 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ 100 ಮಂದಿಯಲ್ಲಿ 80 ಜನರು ಹೊರರಾಜ್ಯದಿಂದ ಬಂದವರೇ ಆಗಿದ್ದಾರೆ. 46 ಮಂದಿ ಮಹಾರಾಷ್ಟ್ರದಿಂದ ಬಂದವರು, 20 ಜನ ತಮಿಳುನಾಡಿನಿಂದ, 13 ಮಂದಿ ಜಾರ್ಖಂಡ ಹಾಗೂ ಓರ್ವ ಗುಜರಾತ್​ನಿಂದ ಆಗಮಿಸಿದವನಲ್ಲಿ ಕರೊನಾ ದೃಢಪಟ್ಟಿದೆ. ಹಾಗೇ ಕತಾರ್​ನಿಂದ ಬಂದು ಕ್ವಾರಂಟೈನ್​ನಲ್ಲಿದ್ದ ನಾಲ್ವರಲ್ಲಿ ಕರೊನಾ ಪಾಸಿಟಿವ್ ಆಗಿದೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2282ಕ್ಕೆ ಏರಿದ್ದು ಅದರಲ್ಲಿ ಸಕ್ರಿಯ ಪ್ರಕರಣಗಳು 1514. ಆರೋಗ್ಯದಲ್ಲಿ ಚೇತರಿಕೆ ಆಗಿ ಆಸ್ಪತ್ರೆಯಿಂದ ಬಿಡುಗಡೆಯಾದವರು 722 ಮಂದಿ. ಮರಣ ಹೊಂದಿದವರು 44 ಜನರು.

ಈಗೀಗ ಮಕ್ಕಳಲ್ಲಿ ಅತಿಹೆಚ್ಚಾಗಿ ಕರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಹಾಗೇ ಒಂದೇ ದಿನದಲ್ಲಿ 17 ಮಂದಿ ಕರೊನಾದಿಂದ ಗುಣಮುಖರಾಗಿ ಡಿಸ್​ಚಾರ್ಜ್​ ಆಗಿರುವುದು ಸ್ವಲ್ಪ ಸಮಾಧಾನವನ್ನೂ ತಂದಿದೆ.

ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ ಅತಿ ಹೆಚ್ಚು ಕರೊನಾ ದಾಖಲಾಗಿದ್ದು ಚಿತ್ರದುರ್ಗದಲ್ಲಿ. ಅಲ್ಲಿ ಬರೋಬ್ಬರಿ 20 ಮಂದಿಯಲ್ಲಿ ಕೊವಿಡ್​-19 ದೃಢಪಟ್ಟಿದೆ.

ಯಾವ ಜಿಲ್ಲೆಗಳಲ್ಲಿ ಎಷ್ಟು?

ಕೋಲಾರ 2

ಯಾದಗಿರಿ-14

ಚಿತ್ರದುರ್ಗ-20

ದಕ್ಷಿಣ ಕನ್ನಡ-3

ಉದುಪಿ-3

ಬಾಗಲಕೋಟೆ-1

ವಿಜಯಪುರ -5

ಚಿಕ್ಕಬಳ್ಳಾಪುರ-1

ಬೀದರ್​-10

ದಾವಣಗೆರೆ-11

ಹಾಸನ-13

ಕೊಪ್ಪಳ-1

ಬಳ್ಳಾರಿ-1

ಬೆಂಗಳೂರು ನಗರ-2

ಬೆಳಗಾವಿ-13

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net