

ಬೆಂಗಳೂರು: ರಾಜ್ಯದಲ್ಲಿ ಸೋಮವಾರವೂ ಸೋಂಕಿತರಿಗಿಂತ ಗುಣಮುಖರ ಸಂಖ್ಯೆ ಹೆಚ್ಚಿದ್ದು, ಒಂದೇ ದಿನ 8,015 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ ಚೇತರಿಸಿಕೊಂಡವರ ಸಂಖ್ಯೆ 3 ಲಕ್ಷ ಗಡಿ ದಾಟಿದೆ. ಮತ್ತೊಂದೆಡೆ ಹಲವು ದಿನಗಳ ಬಳಿಕ ಅತೀ ಕಡಿಮೆ ಸಂಖ್ಯೆಯಲ್ಲಿ 5,773 ಸೋಂಕು ಪ್ರಕರಣಗಳು ವರದಿಯೊಂದಿಗೆ ಸೋಂಕಿತರ ಸಂಖ್ಯೆ 4 ಲಕ್ಷ ಗಡಿ ದಾಟಿದೆ.
ಕಳೆದ ಕೆಲ ದಿನಗಳಿಂದ ನಿತ್ಯ 70 ಸಾವಿರಕ್ಕೂ ಹೆಚ್ಚು ಪರೀಕ್ಷೆಗಳ ನಡೆಯುತ್ತಿದ್ದು, 8 -9 ಸಾವಿರಕ್ಕೂ ಹೆಚ್ಚು ಸೊಂಕು ಪ್ರಕರಣಗಳು ವರದಿಯಾಗುತ್ತಿತ್ತು. ಆದರೆ ಸೋಮವಾರ 45,421 ಪರೀಕ್ಷೆ ನಡೆಸಿದ್ದು, ಸೋಂಕು ಪ್ರಕರಣಗಳ ಸಂಖ್ಯೆಯೂ ಇಳಿದಿದೆ. ಆದಾಗಿಯೂ ಸೋಂಕಿತರ ಸಂಖ್ಯೆ 4.04,324ಕ್ಕೆ ಏರಿದೆ. ಈವರೆಗೂ 6,534 ಮಂದಿ ಸಾವನ್ನಪ್ಪಿದ್ದು, 97,001 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 794 ಮಂದಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಲ್ಲೆಲ್ಲಿ ಹೊಸ ಪ್ರಕರಣಗಳು?: ಬೆಂಗಳೂರು ನಗರ 2,942 (48), ಬಳ್ಳಾರಿ 266 (7), ಮೈಸೂರು 212 (9),ದಾವಣಗೆರೆ 199 (3), ಮಂಡ್ಯ 169 (1), ದಕ್ಷಿಣ ಕನ್ನಡ 152 (8), ಶಿವಮೊಗ್ಗ 150, ಕಲಬುರಗಿ 141 (4), ಕೊಪ್ಪಳ 139 (10), ಯಾದಗಿರಿ 137, ಬಾಗಲಕೋಟೆ 126 (1), ಹಾಸನ 128 (4), ಉಡುಪಿ 113 (2), ವಿಜಯಪುರ 112 (2), ಚಿಕ್ಕಮಗಳೂರು 101 (2), ಗದಗ 87 (2), ಚಿಕ್ಕಬಳ್ಳಾಪುರ 82 (1), ಬೆಂಗಳೂರು ಗ್ರಾಮಾಂತರ 77 (1), ಉತ್ತರ ಕನ್ನಡ 77 (3), ಬೆಳಗಾವಿ 75 (8), ಹಾವೇರಿ 53, ಚಿತ್ರದುರ್ಗ 50, ಬೀದರ್ 32, ಧಾರವಾಡ 29 (10), ಕೋಲಾರ 26, ತುಮಕೂರು 25 (2), ರಾಯಚೂರು 22 (2), ಚಾಮರಾಜನಗರ 20 (1), ಕೊಡಗು 11 (1), ರಾಮನಗರ 11 (1).