ರಾಜ್ಯದಲ್ಲಿ 97 ಹೊಸ ಪ್ರಕರಣ- ಮುಂದುವರೆದ ಮಹಾರಾಷ್ಟ್ರ ಕಂಟಕ

China Corona
Published on

ಬೆಂಗಳೂರು: ರಾಜ್ಯದಲ್ಲಿ ನಿನ್ನೆ ಸಂಜೆ 5 ಗಂಟೆಯಿಂದ ಇಲ್ಲಿಯವರೆಗೆ 97 ಹೊಸ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಹೆಚ್ಚಿನವು ಮಹಾರಾಷ್ಟ್ರ ಸಂಪರ್ಕಿತರು.

ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2056ಕ್ಕೆ ಏರಿದೆ. ಆಸ್ಪತ್ರೆಯಿಂದ ಒಟ್ಟು 634 ಮಂದಿ ಬಿಡುಗಡೆಯಾಗಿದ್ದು, 42 ಮಂದಿ ಮೃತಪಟ್ಟಿದ್ದಾರೆ. 1378 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಸ ಸೋಂಕು ಪ್ರಕರಣ ಈ ರೀತಿ ಇದೆ:
ಚಿಕ್ಕಬಳ್ಳಾಪುರ 35, ಉಡುಪಿ 18, ಮಂಡ್ಯ 15, ಹಾಸನ 14, ಕಲಬುರಗಿ 6, ಯಾದಗಿರಿ 5, ದಾವಣಗೆರೆ 4, ಉತ್ತರ ಕನ್ನಡ 3, ತುಮಕೂರು 2, ಧಾರವಾಡ 1, ಕೊಡಗು 1, ಯಾದಗಿರಿ 1, ವಿಜಯಪುರ 1.

ನಿಜಾಮುದ್ದೀನ್‌ ಮರ್ಕಜ್‌ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಉಚಿತ ಆರೋಗ್ಯ ಸಹಾಯವಾಣಿ 080-29711171 ಸಂಪರ್ಕಿಸುವಂತೆ ಸರ್ಕಾರ ಸೂಚಿಸಿದೆ.

ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.

ಸಂಪೂರ್ಣ ವಿವರ ಇಲ್ಲಿದೆ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net