ಕರೊನಾ ಸೋಂಕಿತರ ಪ್ರಯಾಣದ ಹಿನ್ನೆಲೆ, ಸಂಪರ್ಕ ವಿವರ ನೀಡುವುದನ್ನು ನಿಲ್ಲಿಸಿತೇ ಸರ್ಕಾರ?

corona page
Published on

 ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿತರ ಪ್ರಮಾಣ, ಪ್ರಯಾಣದ ಹಿನ್ನೆಲೆ, ಸೋಂಕು ತಗುಲಿರುವ ಬಗೆ, ಅವರು ಯಾರ ಸಂಪರ್ಕಕ್ಕೆ ಬಂದಿದ್ದರು ಇತ್ಯಾದಿಯಾಗಿ ಸವಿವರವಾದ ವರದಿಯನ್ನು ಪ್ರತಿದಿನವೂ ರಾಜ್ಯ ಸರ್ಕಾರ ಬೆಳಗ್ಗೆ ಮತ್ತು ಸಂಜೆ ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತ ಬಂದಿದೆ.

ಆದರೆ ಇಂದು ಅಚ್ಚರಿಯ ಬೆಳವಣಿಗೆಯಲ್ಲಿ, ಸೋಂಕಿತರ ಪ್ರಮಾಣದ ಕುರಿತು ಮಾತ್ರ ವಿವರಣೆ ನೀಡಿರುವ ಸರ್ಕಾರ, ಪ್ರಯಾಣದ ಹಿನ್ನೆಲೆ ಹಾಗೂ ಸೋಂಕು ತಗುಲಿದ ವಿವರಗಳನ್ನು ನೀಡಿಲ್ಲ.

ಇದನ್ನೂ ಓದಿ: ಕಾಶ್ಮೀರದ ವಿಚಾರದಲ್ಲಿ ಪಾಕ್​ ಜತೆ ನಾವಿಲ್ಲ, ಇತ್ತ ತಲೆನೇ ಹಾಕಲ್ಲ ಎಂದ ತಾಲೀಬಾನ್​: ಪಾಕಿಸ್ತಾನಕ್ಕಾಯ್ತು ಭಾರಿ ಮುಖಭಂಗ!

ಸರ್ಕಾರದ ಈ ಕ್ರಮ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಳೆದ ಒಂದು ವಾರದ ಸೋಂಕಿನ ಪ್ರಮಾಣ ಗಮನಿಸಿದರೆ, ರಾಜ್ಯಕ್ಕೆ ಅತಿ ದುಬಾರಿಯಾಗಿ ಪರಿಣಮಿಸಿದ್ದು ಮಹಾರಾಷ್ಟ್ರ, ಗುಜರಾತ್​ ಹಾಗೂ ತಮಿಳುನಾಡಿನಿಂದ ಬಂದವರು. ಅದರಲ್ಲಿಯೂ ಕೆಲವು ಜಿಲ್ಲೆಗಳು ಕರೊನಾದ ಹಾಟ್​ಸ್ಪಾಟ್​ ಆಗಲು ಕಾರಣ, ಮುಂಬೈನಿಂದ ವಾಪಸ್​ ಆದ ಜನರು. ಈ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಯನ್ನು ಗಮನಿಸಿ ಸರ್ಕಾರ ಸೋಂಕಿನ ಹಿನ್ನೆಲೆ ಕೊಡಲು ಹಿಂದೇಟು ಹಾಕಿದೆಯೇ ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ.

ಇಂದು ಸರ್ಕಾರ ಬಿಡುಗಡೆ ಮಾಡಿರುವ ವರದಿಯ ಅನ್ವಯ, ರಾಜ್ಯದಲ್ಲಿ ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆಯವರೆಗೆ 63 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,458ಕ್ಕೆ ಏರಿದೆ.

ಇದನ್ನೂ ಓದಿ: ಕೋಟಿ ಜನರ ತಲುಪಿದ ‘ಆಯುಷ್ಮಾನ್​ ಭಾರತ್​’-ಪ್ರಧಾನಿ ಟ್ವೀಟ್​: ಕಣ್ಣೀರಾದ ಯೋಧನ ಪತ್ನಿ

ಇಲ್ಲಿಯವರೆಗೆ 553 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರೆ, ಕರೊನಾ 40 ಜೀವಗಳನ್ನು ಬಲಿ ಪಡೆದಿದೆ.

ಕಳೆದ 12 ಗಂಟೆಗಳಲ್ಲಿ ಹೊಸ ಸೋಂಕು ಪತ್ತೆಯಾಗಿರುವ ವಿವರ ಇಂತಿದೆ:

ಹಾಸನ-21, ಬೀದರ್​- 10, ಮಂಡ್ಯ-8, ಕಲಬುರಗಿ- 7, ಬೆಂಗಳೂರು-4, ತುಮಕೂರು-4, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಯಾದಗಿರಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ. ಬೆಳಗಾವಿ, ದಾವಣಗೆರೆ, ಮೈಸೂರು, ಬಾಗಲಕೋಟೆ, ವಿಜಯಪುರ, ಧಾರವಾಡ ಚಿಕ್ಕಬಳ್ಳಾಪುರ, ಶಿವಮೊಗ್ಗ, ಬಳ್ಳಾರಿ, ಗದಗ, ಚಿತ್ರದುರ್ಗ, ಕೋಲಾರ, ರಾಯಚೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾವೇರಿ, ಕೊಪ್ಪಳ ಹಾಗೂ ಕೊಡಗಿನಲ್ಲಿ ಸದ್ಯ ಯಾವುದೇ ಹೊಸ ಪ್ರಕರಣ ಬೆಳಕಿಗೆ ಬರಲಿಲ್ಲ.

ಸಂಪೂರ್ಣ ವಿವರ ಇಲ್ಲಿದೆ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net