

ಬೆಂಗಳೂರು: ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ 138 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಇದುವರೆಗಿನ ಸೋಂಕಿತರ ಸಂಖ್ಯೆ 1743ಕ್ಕೆ ಏರಿದೆ.
ಈಗಾಗಲೇ 597 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 1104 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಪೈಕಿ 19 ಮಂದಿ ಐಸಿಯುನಲ್ಲಿ ಇದ್ದಾರೆ. ಇಂದು ಹೊಸದಾಗಿ ಸಾವು ಸಂಭವಿಸದ ಹಿನ್ನೆಲೆಯಲ್ಲಿ ಮೃತರ ಸಂಖ್ಯೆ 41ಕ್ಕೇ ಸ್ಥಿತವಾಗಿದೆ. ಈ ಪೈಕಿ ಇದುವರೆಗೆ ಬೆಂಗಳೂರು ನಗರದಲ್ಲಿ ಒಟ್ಟು 261, ಮಂಡ್ಯದಲ್ಲಿ 209, ಕಲಬುರಗಿಯಲ್ಲಿ 134, ಬೆಳಗಾವಿ 126, ದಾವಣಗೆರೆಯಲ್ಲಿ 118 ಸೋಂಕು ಪ್ರಕರಣಗಳು ಪತ್ತೆಯಾಗಿವೆ.
ಇದನ್ನೂ ಓದಿ: ನಿಮ್ಮ ಫೋನ್ನಲ್ಲಿ ಗೂಗಲ್ ಮ್ಯಾಪ್ ಇದ್ಯಾ? ಹಾಗಿದ್ರೆ ಈ ಅಮಾಯಕ ಗಂಡನ ಕಥೆ ಕೇಳಿ..!
ಹೊಸ ಸೋಂಕು ಪತ್ತೆಯಾಗಿರುವ ಜಿಲ್ಲೆಗಳ ವಿವರ ಹೀಗಿದೆ:
ಚಿಕ್ಕಬಳ್ಳಾಪುರ- 47, ಹಾಸನ- 14, ವಿಜಯಪುರ-7, ರಾಯಚೂರು-10, ಬೀದರ್-9, ತುಮಕೂರು-8, ಮಂಡ್ಯ-8, ಬೆಂಗಳೂರು ಗ್ರಾಮಾಂತರ-5, ಚಿಕ್ಕಮಗಳೂರು-5, ಬೆಂಗಳೂರು-5, ದಾವಣಗೆರೆ 3, ಉಡುಪಿ-3, ಹಾವೇರಿ-3, ಧಾರವಾಡ- 2, ಶಿವಮೊಗ್ಗ-2, ಯಾದಗಿರಿ-2, ಬೆಳಗಾವಿ-1, ಚಿತ್ರದುರ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಾಗಲಕೋಟೆ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.
ಕೊಡಗು, ಕೊಪ್ಪಳ, ಕೋಲಾರ, ಗದಗ, ಬಳ್ಳಾರಿ, ಮೈಸೂರು, ಕಲಬುರಗಿಯಲ್ಲಿ ಯಾವುದೇ ಹೊಸ ಕೇಸ್ ಕಳೆದ 24 ಗಂಟೆಗಳಲ್ಲಿ ಪತ್ತೆಯಾಗಿಲ್ಲ.
ಇದನ್ನೂ ಓದಿ: ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಸ್ಥಾನ ಅಲಂಕರಿಸಿದ ಡಾ. ಹರ್ಷ್ ವರ್ಧನ್
ನಿಜಾಮುದ್ದೀನ್ ಮರ್ಕಜ್ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಉಚಿತ ಆರೋಗ್ಯ ಸಹಾಯವಾಣಿ 080-29711171 ಸಂಪರ್ಕಿಸುವಂತೆ ಸರ್ಕಾರ ಸೂಚಿಸಿದೆ.
ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್ ಅಪ್ಲಿಕೇಷ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.
ಸಂಪೂರ್ಣ ವಿವರ ಇಲ್ಲಿದೆ: