

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಹೊಸದಾಗಿ 8,191 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗಿನ ಸೋಂಕಿತರ ಒಟ್ಟು ಸಂಖ್ಯೆ 7,26,106ಗೆ ತಲುಪಿದೆ. ಆದಾಗ್ಯೂ ಕಳೆದ ಮೂರು ದಿನಗಳಿಂದ ಹೊಸದಾಗಿ ಪತ್ತೆಯಾಗುವ ಸೋಂಕಿತರಿಗಿಂತ ಆಸ್ಪತ್ರೆಯಿಂದ ಬಿಡುಗಡೆ ಆಗುತ್ತಿರುವವರ ಸಂಖ್ಯೆ ಅಧಿಕವಾಗಿರುವುದು ಸಾರ್ವಜನಿಕರ ಆತಂಕವನ್ನು ತಗ್ಗಿಸಿದೆ.
ಗುಣಮುಖರ ಪೈಕಿ ಮಂಗಳವಾರ ಒಂದೇ ದಿನ 10,421 ಮಂದಿ ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದು, ಇದುವರೆಗೆ ಗುಣವಾಗಿರುವವರ ಸಂಖ್ಯೆ 6,02,505ಕ್ಕೆ ಏರಿಕೆಯಾಗಿದೆ. ಆದರೆ ರಾಜ್ಯದಲ್ಲಿ ಇನ್ನೂ 1,13,459 ಸಕ್ರಿಯ ಪ್ರಕರಣಗಳಿದ್ದು, ಅವರಲ್ಲಿ ಗಂಭೀರ ಲಕ್ಷಣಗಳಿರುವ 919 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಕರೊನಾ ಬುಲೆಟಿನ್: ನಿನ್ನೆಗಿಂತ ಇಂದು ಚೆನ್ನ…
ಮತ್ತೊಂದೆಡೆ ಇವತ್ತೊಂದೇ ದಿನ 87 ಮಂದಿ ಕರೊನಾಗೆ ಬಲಿಯಾಗಿರುವುದು ವರದಿಯಾಗಿದ್ದು, ಈ ವರೆಗೆ ಕೋವಿಡ್-19 ಸೋಂಕಿನಿಂದಾಗಿ 10,123 ಮಂದಿ ಮೃತಪಟ್ಟಿದ್ದಾರೆ.