

ಬೆಂಗಳೂರು: ರಾಜ್ಯದಲ್ಲೇ ಕರೊನಾ ಸಂಕಷ್ಟ ದಿನೇದಿನೆ ಕಗ್ಗಂಟಾಗುತ್ತಿದ್ದು, ವರ್ಷಾರಂಭದ ಮೊದಲ ದಿನವಾದ ಇವತ್ತೂ ಹೊಸದಾಗಿ 8778 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಆ ಮೂಲಕ ರಾಜ್ಯದಲ್ಲಿನ ಸೋಂಕಿತರ ಸಂಖ್ಯೆ 10,83,647ಕ್ಕೆ ತಲುಪಿದೆ.
ಮತ್ತೊಂದೆಡೆ ಮಂಗಳವಾರವೊಂದೇ ದಿನ 6,079 ಮಂದಿ ಸೋಂಕುಮುಕ್ತರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಈ ಮೂಲಕ ಇದುವರೆಗೆ ಸೋಂಕುಮುಕ್ತರಾಗಿ ಬಿಡುಗಡೆಗೊಂಡವರ ಸಂಖ್ಯೆ 9,92,003ಕ್ಕೆ ತಲುಪಿದೆ. ಅದಾಗ್ಯೂ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇನ್ನೂ 78,617 ಇದೆ.
ಸದ್ಯ ರಾಜ್ಯದ ವಿವಿಧೆಡೆ ಒಟ್ಟು 474 ಮಂದಿ ಗಂಭೀರ ರೋಗಲಕ್ಷಣಗಳಿಂದಾಗಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾತ್ರವಲ್ಲ ಮಂಗಳವಾರ ಒಂದೇ ದಿನ ರಾಜ್ಯದಲ್ಲಿ 67 ಮಂದಿ ಕರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದು, ಕರೊನಾಗೆ ಬಲಿಯಾದವರು ಒಟ್ಟು ಸಂಖ್ಯೆ 13,008ಕ್ಕೆ ಏರಿದೆ.