

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಹೊಸದಾಗಿ 6,297 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 7,76,901ಕ್ಕೆ ತಲುಪಿದೆ.
ಮತ್ತೊಂದೆಡೆ ಗುಣಮುಖರ ಪೈಕಿ ಒಂದೇ ದಿನದಲ್ಲಿ 8,500 ಮಂದಿ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್ಗಳಿಂದ ಬಿಡುಗಡೆ ಆಗಿದ್ದು, ಇದುವರೆಗೆ ಗುಣವಾಗಿರುವವರ ಸಂಖ್ಯೆ 6,62,328ಕ್ಕೆ ಏರಿಕೆಯಾಗಿದೆ.
ಅದಾಗ್ಯೂ ರಾಜ್ಯದಲ್ಲಿ 1,03,945 ಸಕ್ರಿಯ ಪ್ರಕರಣಗಳಿದ್ದು, ಆ ಪೈಕಿ ಗಂಭೀರ ರೋಗ ಲಕ್ಷಣಗಳಿರುವ 941 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದೆಡೆ ಒಂದೇ ದಿನದಲ್ಲಿ 66 ಮಂದಿ ಕರೊನಾಗೆ ಬಲಿಯಾಗಿದ್ದು, ಇದುವರೆಗೆ ಕೋವಿಡ್-19 ಸೋಂಕಿನಿಂದಾಗಿ 10,608 ಮಂದಿ ಮೃತಪಟ್ಟಿದ್ದಾರೆ.