ಕರೊನಾ ಬುಲೆಟಿನ್​: ಸೋಂಕು-ಗುಣಮುಖ ಹೆಚ್ಚೂಕಮ್ಮಿ ಸಮಸಮ

Corona
Published on

ಬೆಂಗಳೂರು: ರಾಜ್ಯದಲ್ಲಿ ಸೋಮವಾರವೊಂದೇ ದಿನ 1,509 ಕೋವಿಡ್​-19 ಪಾಸಿಟಿವ್ ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ. ಆ ಮೂಲಕ ಇದುವರೆಗಿನ ಕರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ 8,74,555ಕ್ಕೆ ತಲುಪಿದೆ.

ಮತ್ತೊಂದೆಡೆ ಗುಣಮುಖರ ಪೈಕಿ ಒಂದೇ ದಿನದಲ್ಲಿ 1,509 ಮಂದಿ ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದು, ಇದುವರೆಗೂ ಗುಣವಾಗಿರುವವರ ಒಟ್ಟು ಸಂಖ್ಯೆ 8,38,150ಕ್ಕೆ ತಲುಪಿದೆ. ಒಟ್ಟಿನಲ್ಲಿ ಹೊಸ ಪ್ರಕರಣಗಳು ಹಾಗೂ ಗುಣಮುಖರ ಸಂಖ್ಯೆ ಹೆಚ್ಚೂಕಮ್ಮಿ ಸಮನಾಗಿದೆ.

ಅದಾಗ್ಯೂ ರಾಜ್ಯದಲ್ಲಿ 24,708 ಸಕ್ರಿಯ ಪ್ರಕರಣಗಳಿದ್ದು, ಆ ಪೈಕಿ ಗಂಭೀರ ರೋಗಲಕ್ಷಣಗಳಿರುವ 438 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ ಸೋಮವಾರ ಒಂದೇ ದಿನ 24 ಮಂದಿ ಕರೊನಾಗೆ ಬಲಿಯಾಗಿದ್ದು, ಇದುವರೆಗೆ ಕರೊನಾದಿಂದಾಗಿ ಮೃತಪಟ್ಟವರ ಸಂಖ್ಯೆ 11,678ಕ್ಕೆ ತಲುಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net