ಆಜಾದಿ ಬೂಸ್ಟರ್​: 75 ದಿನಗಳ ಕೋವಿಡ್​ ಲಸಿಕೆ ಅಭಿಯಾನ, ನಾಡಿದ್ದೇ ಶುರು..

Front Vaccine
Published on

ನವದೆಹಲಿ: ದೇಶಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವ (ಆಜಾದಿ ಕಾ ಅಮೃತ ಮಹೋತ್ಸವ್) ನಡೆಯುತ್ತಿದೆ. ಸ್ವಾತಂತ್ರ್ಯ ಪಡೆದು 75 ವರ್ಷ ಸಂದಿದ್ದನ್ನು ಉತ್ಸವವಾಗಿ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕೋವಿಡ್​ ಬೂಸ್ಟರ್ ಡೋಸ್​ಗೂ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಅದು ಕೂಡ 75 ದಿನಗಳ ನಡೆಯಲಿದೆ.

ಜುಲೈ 15ರಿಂದಲೇ ಬೂಸ್ಟರ್ ಡೋಸ್ ಅಭಿಯಾನ 75 ದಿನ ನಡೆಯಲಿದ್ದು, ಅಂದಿನಿಂದ ಎಲ್ಲ ಸರ್ಕಾರಿ ಲಸಿಕೀಕರಣ ಕೇಂದ್ರಗಳಲ್ಲಿ 18ರಿಂದ 59 ವರ್ಷದವರೆಗಿನ ಎಲ್ಲರೂ ಉಚಿತವಾಗಿ ಬೂಸ್ಟರ್ ಡೋಸ್ ಪಡೆಯಬಹುದು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ಮತ್ತೊಂದೆಡೆ ಬೂಸ್ಟರ್ ಡೋಸ್ ಪಡೆಯಲು ವಿಧಿಸಲಾಗಿದ್ದ ಅಂತರವನ್ನು ಕೂಡ ಕೇಂದ್ರ ಆರೋಗ್ಯ ಸಚಿವಾಲಯ ತಗ್ಗಿಸಿದೆ. ಎರಡನೇ ಡೋಸ್ ತೆಗೆದುಕೊಂಡ 9 ತಿಂಗಳ ನಂತರ ಬೂಸ್ಟರ್ ಡೋಸ್ ತೆಗೆದುಕೊಳ್ಳಬಹುದು ಎಂದು ಮೊದಲು ಹೇಳಲಾಗಿತ್ತು. ಆದರೆ ಇದೀಗ ಎರಡನೇ ಡೋಸ್ ಪಡೆದು ಆರು ತಿಂಗಳಾಗಿದ್ದರೆ ಸಾಕು, ಬೂಸ್ಟರ್​ ಡೋಸ್ ಪಡೆಯಬಹುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net