ಕರೊನಾ- ಹಸಿರಾಗಿಯೇ ಉಳಿದಿದೆ ರಾಮನಗರ, ಚಾಮರಾಜನಗರ: 10 ಜಿಲ್ಲೆ ದಿನದ ಮಟ್ಟಿಗೆ ಶಾಂತ!

COVID-19
Published on

ಬೆಂಗಳೂರು: ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ 143 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 992 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 571 ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 9 ಮಂದಿ ಐಸಿಯುನಲ್ಲಿ ಇದ್ದಾರೆ. ಸೋಂಕಿಗೆ ಇಲ್ಲಿಯವರೆಗೆ ಮೃತಪಟ್ಟವರು 41 ಮಂದಿ.

ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳು ಈ ರೀತಿ ಇದೆ:

ಮಂಡ್ಯ-33, ಉಡುಪಿ-26, ಹಾಸನ-13, ಬಳ್ಳಾರಿ-11, ಬೆಳಗಾವಿ-9, ಉತ್ತರ ಕನ್ನಡ-7, ದಕ್ಷಿಣ ಕನ್ನಡ-5, ಬೆಂಗಳೂರು ನಗರ- 6, ಶಿವಮೊಗ್ಗ-6, ರಾಯಚೂರು-5, ದಾವಣಗೆರೆ-3, ಚಿಕ್ಕಬಳ್ಳಾಪುರ-2, ಗದಗ-2, ಕೋಲಾರ-2, ಮೈಸೂರು-1, ವಿಜಯಪುರ-1, ತುಮಕೂರು-1.

ಕಲಬುರಗಿ, ಬಾಗಲಕೋಟೆ, ಬೀದರ್​, ಯಾದಗಿರಿ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾವೇರಿ, ಕೊಡಗು, ಕೊಪ್ಪಳದಲ್ಲಿ ಕಳೆದ 24 ಗಂಟೆಗಳಲ್ಲಿ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ.

ನಿಜಾಮುದ್ದೀನ್‌ ಮರ್ಕಜ್‌ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಉಚಿತ ಆರೋಗ್ಯ ಸಹಾಯವಾಣಿ 080-29711171 ಸಂಪರ್ಕಿಸುವಂತೆ ಸರ್ಕಾರ ಸೂಚಿಸಿದೆ.

ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ  ಸಂಖ್ಯೆ: 104/ 9745697456.

ಸಂಪೂರ್ಣ ವಿವರ ಇಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net