

ಜಾರ್ಖಂಡ್: ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ಇಬ್ಬರು ಮಹಿಳಾ ಪೊಲೀಸರು ಸೆರೆಹಿಡಿದು ಆಕೆಯ ಕೈ-ಕಾಲು ಕಟ್ಟಿ ರಸ್ತೆಯ ಮಧ್ಯೆ ಎಳೆದುಕೊಂಡು ಬಂದ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಮೊಬೈಲ್ ಕಳ್ಳತನ ಮಾಡಿದ್ದ ಆರೋಪದಡಿ ಪೊಲೀಸರು ಮಹಿಳೆ ಮತ್ತು ಆಕೆಯ ಪತಿಯನ್ನು ಬಂಧಿಸಿದ್ದರು. ಕಸ್ಟಡಿಯಲ್ಲಿದ್ದ ಮಹಿಳಾ ಆರೋಪಿ ಕಸ್ಟಡಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಇದನ್ನು ಅರಿತ ಬೆನ್ನಲ್ಲೇ ಬೊಕಾರೊ ಪೊಲೀಸ್ ಠಾಣೆಯ ಲೇಡಿ ಪೊಲೀಸರು ಆಕೆಯನ್ನು ಚೇಸ್ ಮಾಡಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯ ಕೈ ಮತ್ತು ಕಾಲನ್ನು ಕಟ್ಟಿದ ಪೊಲೀಸರು, ಆಕೆಯನ್ನು ರಸ್ತೆಯ ಮಧ್ಯೆ ಎಳೆದೊಯ್ದ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್).