ಕಾರು ತಡೆದ ಪೊಲೀಸರಿಗೆ ಸಿಕ್ಕಿದ್ದು ರಾಶಿ ರಾಶಿ ಹಣ: ಒಟ್ಟು ಮೊತ್ತ ಕೇಳಿದ್ರೆ ಶಾಕ್​ ಆಗ್ತೀರಾ!

Money
Published on

ಹೈದರಾಬಾದ್​: ಬಂಜಾರ್​ ಹಿಲ್ಸ್​ನ​ ರಸ್ತೆ ನಂಬರ್​ 12ರಲ್ಲಿ ಕಾರಿನ ಮೂಲಕ ಸಾಗಿಸಲಾಗುತ್ತಿದ್ದ ಬರೋಬ್ಬರಿ 3.75 ಕೋಟಿ ರೂ. ಹಣವನ್ನು ಹೈದರಾಬಾದಿನ ಟಾಸ್ಕ್​ ಫೋರ್ಸ್​ ಪೊಲೀಸರು ಮಂಗಳವಾರ ವಶಪಡಿಸಿಕೊಂಡಿದ್ದಾರೆ.

ನಗರ ಪೊಲೀಸ್​ ಆಯುಕ್ತ ಅಂಜನಿ ಕುಮಾರ್ ಹೇಳಿಕೆ​ ಪ್ರಕಾರ ಮಾಹಿತಿ ಮೇರೆಗೆ ಟಾಸ್ಕ್​ ಫೋರ್ಸ್​ ಪೊಲೀಸರು ಮಂಗಳವಾರ ಕಾರೊಂದರ ಮೇಲೆ ದಾಳಿ ಮಾಡಿದರು. ಈ ವೇಳೆ ಕಾರಿನಲ್ಲಿ ಸಾಗಿಸಲಾಗುತ್ತಿದ್ದ 3.75 ಕೋಟಿ ರೂ. ಹಣದೊಂದಿಗೆ ನಾಲ್ವರನ್ನು ಬಂಧಿಸಲಾಯಿತು ಎಂದಿದ್ದಾರೆ.

ಬಂಧಿತರನ್ನು ಈಶ್ವರ್​, ದಿಲೀಪ್​, ಹರೀಶ್​ ರಾಮ್​ ಭಾಯ್​ ಮತ್ತು ಅಜಿತ್​ ಸಿಂಗ್​ ರಾಥೋಡ್​ ಎಂದು ಗುರುತಿಸಲಾಗಿದೆ. ಹಣ ಎಲ್ಲಿಂದು ಬಂತು ಎಂಬುದರ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಹವಾಲಾ ಹಣ ಎಂದು ತಿಳಿದುಬಂದಿದೆ. ಇದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆಂದು ತಿಳಿಯಲು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

ಇದಲ್ಲದೆ ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೂ ಹಸ್ತಾಂತರ ಮಾಡಲಾಗುವುದು ಎಂದು ಪೊಲೀಸ್​ ಮೂಲಗಳಿಂದ ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net