

ಬೆಂಗಳೂರು: ಗ್ಯಾರಂಟಿ, ಮುಡಾ ಹಗರಣ, ವಕ್ಫ್, ಉದಯಗಿರಿ ಕೋಮು ಗಲಭೆ, ಮೈಕ್ರೋಫೈನಾನ್ಸ್ ಹಾವಳಿ ವಿರುದ್ಧ ನಿರಂತರ ಹೋರಾಟ ಮಾಡಿಕೊಂಡು ಬಂದಿರುವ ಮೈತ್ರಿ ಪಕ್ಷಗಳು ವಿಧಾನ ಮಂಡಲದಲ್ಲೂ ಸರ್ಕಾರವನ್ನು ಕಟ್ಟಿಹಾಕಲು ತಾಲೀಮು ಆರಂಭಿಸಿವೆ(Coordination meeting for fight against government during session).
ವಿಧಾನ ಮಂಡಲದ ಅಧಿವೇಶನಕ್ಕೆ ದಿನಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ಸರ್ಕಾರದ ವಿರುದ್ಧ ಸದನದ ಒಳಗೆ ತೊಡೆತಟ್ಟಲು ಕಾರ್ಯತಂತ್ರ ರೂಪಿಸುತ್ತಿವೆ. ಅದರ ಮೊದಲ ಭಾಗವಾಗಿ ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಮನ್ವಯ ಸಭೆ ನಡೆಸಿದರು.
ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದ ಈವರೆಗಿನ ಜನವಿರೋಧಿ ನಿಲುಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ಸರ್ಕಾರ ಜನರಿಗೆ ಬಗೆಯುತ್ತಿರುವ ವಿದ್ರೋಹ ಕುರಿತು ಮುಖಂಡರು ಸಮಾಲೋಚನೆ ನಡೆಸಿದರು.
ಪ್ರಶ್ನೋತ್ತರ ಕಲಾಪ, ನಿಳುವಳಿ ಸೂಚನೆ, ಶೂನ್ಯ ವೇಳೆಗಳನ್ನು ಸಮರ್ಥವಾಗಿ ಬಳಸಿಕೊಂಡು ಸರ್ಕಾರವನ್ನು ಮಣಿಸುವ ಕುರಿತು ಚರ್ಚೆ ನಡೆಯಿತು.
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಿಎಂಗಳಾದ ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಬಿಜೆಪಿ ಮುಖಂಡರಾದ ಸಿ.ಟಿ.ರವಿ, ಪಿ.ಸಿ.ಮೋಹನ್, ಅರವಿಂದ ಬೆಲ್ಲದ್, ಡಾ.ಅಶ್ವತ್ಥನಾರಾಯಣ, ಎಚ್.ವಿಶ್ವನಾಥ್, ಜೆಡಿಎಸ್‌ನ ತಿಪ್ಪೇಸ್ವಾಮಿ, ಬೋಜೇಗೌಡ, ಪುಟ್ಟರಾಜು ಮತ್ತಿತರ ನಾಯಕರು ಭಾಗವಹಿಸಿದ್ದರು.
ಸಭೆಯ ಬಳಿಕ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಅಶೋಕ್ ಅವರ ನೇತೃತ್ವದಲ್ಲಿ ಎರಡು ಪಕ್ಷದ ಶಾಸಕ ಮಿತ್ರರು, ವಿಜಯೇಂದ್ರ ಜೊತೆಗೂಡಿ ಸುಧೀರ್ಘ ಮಾತುಕತೆ ನಡೆಸಿದ್ದೇವೆ. ಅಧಿವೇಶನದಲ್ಲಿ ಯಾವೆಲ್ಲ ವಿಚಾರಗಳ ಬಗ್ಗೆ ಹೆಚ್ಚ ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಚರ್ಚಿಸಿದ್ದೇವೆ. ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಸುಗ್ರಿವಾಜ್ಞೆ ಬಳಿಕವೂ ಆತ್ಮಹತ್ಯೆ ಮುಂದುವರಿದೆ.
ರಾಜ್ಯಪಾಲರ ಭಾಷಣ ವಂದನಾ ನಿರ್ಣಯದ ಮೇಲಿನ ಚರ್ಚೆ, ಬಜೆಟ್ ಮಂಡನೆ ನಂತರ ಪ್ರಮುಖ ಹಲವಾರು ವಿಷಯ ಚರ್ಚೆ ಮಾಡಲು ಒಟ್ಟಾಗಿ ಎರಡು ಪಕ್ಷ ಕೆಲಸ ಮಾಡಲು ತೀರ್ಮಾನ ಮಾಡಲಾಗಿದೆ.
ಪ್ರಮುಖವಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ, ಕೆಪಿಎಸ್‌ಸಿ ಅಕ್ರಮಗಳು, ಮೈಕ್ರೋ ೈನಾನ್ಸ್ ಸುಗ್ರೀವಾಜ್ಞೆ ಬಳಿಕವೂ ರಾಜ್ಯದ ಹಲವಾರು ಭಾಗಗಳಲ್ಲಿ ಸಾಲ ಪಡೆದವರು ಆತ್ಮಹತ್ಯೆ ಶರಣಾಗುವುದು ಮುಂದುವರಿದಿದೆ. ಬಾಣಂತಿಯರ ಸಾವು ನಿಂತಿಲ್ಲ. ರೈತರಿಗೆ ಅತೀವೃಷ್ಟಿ, ಅನಾವೃಷ್ಟಿ ಪರಿಹಾರ ದೊರೆಯುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. ಬೆಂಗಳೂರಿನ ಅಭಿವೃದ್ಧಿ ಕುಂಠಿತವಾಗಿದೆ. ಮೆಟ್ರೋ ಪ್ರಯಾಣ ದರ ಏರಿಕೆ...ಹೀಗೆ ಹಲವಾರು ವಿಷಯಗಳ ಗ್ಗೆ ಚರ್ಚೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಗ್ರೇಟರ್ ಬೆಂಗಳೂರು ಬಗ್ಗೆ ಏನು ಬಿಲ್ ಮಂಡನೆ ಮಾಡುತ್ತಾರೋ ನೋಡೋಣ. ಬಿಬಿಎಂಪಿಯನ್ನು 7-8 ಕಾರ್ಪೊರೇಷನ್ ಮಾಡಿ ಪೀಸ್ ಪೀಸ್ ಮಾಡಲು ಸರ್ಕಾರ ಹೊರಟಿದೆ. ಇದಕ್ಕೆ ಜನರೇ ಬುದ್ಧಿ ಕಲಿಸುತ್ತಾರೆ. ಕೆಂಪೇಗೌಡರ ಹೆಸರು ನಾಶ ಮಾಡಲು ಹೊರಟಿರುವ ಈ ಸರ್ಕಾರವನ್ನು ಜನ ಕ್ಷಮಿಸುವುದಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಈ ಸರ್ಕಾರ ಬಂದು ಎರಡು ವರ್ಷ ಆಗಿದೆ. ರಾಜ್ಯದಲ್ಲಿ ಸತತವಾಗಿ ಕೋಮುಗಲಭೆ ನಡೆದರೂ ಯಾವುದೇ ಕ್ರಮ ಆಗುತ್ತಿಲ್ಲ. ಮೈಸೂರು ಘಟನೆ ನಮ್ಮ ಮುಂದಿದೆ. ಪೊಲೀಸ್ ಮೇಲೆ ಎರಡನೇ ಬಾರಿ ಹಲ್ಲೆಯಾಗಿದೆ. ಮೈಕ್ರೋ ೈನಾನ್ಸ್ ಸುಗ್ರೀವಾಜ್ಞೆ ಬಳಿಕವೂ ಮಂಡ್ಯದಲ್ಲಿ ಇಬ್ಬರು ಸಾವು ನಡೆದಿದೆ. ಕೆಪಿಎಸ್‌ಸಿ ಹೆಸರಲ್ಲಿ ಎಸಿ, ತಹಸೀಲ್ದಾರ್, ಪೊಲೀಸ್ ಇಲಾಖೆ ಅಧಿಕಾರಿ ಆಗಬೇಕಾಗಿರುವವರು ಆರಂಭದಲ್ಲೇ ಕೋಟಿ ಕೋಟಿ ಲಂಚ ಕೊಟ್ಟು ಪಾಸಾಗುವ ಸ್ಥಿತಿಗೆ ಬಂದಿದೆ. ಕೆಪಿಎಸ್‌ಸಿ ಕನ್ನಡದ ಕೊಲೆ ಮಾಡಿದೆ. ಕನ್ನಡದಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಈ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಇದು ರೈತ ವಿರೋಧಿ ಸರ್ಕಾರ. ರೈತರ ನಿರಂತರ ಆತ್ಮಹತ್ಯೆ ನಡಯುತ್ತಿವೆ. ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿ ಜೀವ ಕೊಡುವ ಕೆಲಸ ಮಾಡಿದರೆ, ಈ ಸರ್ಕಾರ ರೈತರ ಜೀವ ಹಿಂಡುವ ಕೆಲಸ ಮಾಡುತ್ತಿದೆ. ಈ ಸರ್ಕಾರದ ಮಂತ್ರಿಗಳು ದುಡ್ಡು ಬರುತ್ತದೆ ಎಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ನಾಚಿಕೆಗೇಡಿನ ಹೇಳಿಕೆ ನೀಡುತ್ತಿದ್ದಾರೆ. ಅಭಿವೃದ್ಧಿ ಶೂನ್ಯ ಸರ್ಕಾರ ಇದಾಗಿದೆ. ಬೆಂಗಳೂರಿಗೆ ದೇವರೇ ಗತಿ ಎನ್ನುವ ಮಂತ್ರಿ ಇದ್ದಾರೆ. ಈ ಎಲ್ಲ ಸಮಸ್ಯೆ ಕುರಿತು ಸುದೀರ್ಘ ಒಂದೂವರೆ ಗಂಟೆ ಕಾಲ ಚರ್ಚೆ ಮಾಡಿದ್ದೇವೆ. ಸರ್ಕಾರದ ಮಾಡುವ ಅಕ್ರಮ, ಅವ್ಯವಹಾರ, ಜನದ್ರೋಹಿ ಕೆಲಸಗಳನ್ನು ಎರಡು ಪಾರ್ಟಿಗಳು ಒಟ್ಟಾಗಿ ಅಧಿವೇಶನದಲ್ಲಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಹಲಗೆವಡೇರಹಳ್ಳಿ ಡಿನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ನಮ್ಮ ಅರ್ಜಿ ವಜಾಗೊಳಿಸಿರುವುದು ಗಮನದಲ್ಲಿದೆ. ಅದು ಅಂತಹ ದೊಡ್ಡ ಸಮಸ್ಯೆ ಅಲ್ಲ. ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತೇವೆ. -ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ. ಪಕ್ಷದಲ್ಲಿರುವ ಭಿನ್ನಮತ ತಾತ್ಕಾಲಿಕವಾದುದು. ರಾಜ್ಯಾಧ್ಯಕ್ಷ ೋಷಣೆ ಆದ ಮೇಲೆ ಎಲ್ಲ ನಿಂತು ಹೋಗುತ್ತದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ. ಸ್ವಲ್ಪ ಅತಿರೇಕವಾಗಿರಬಹುದಷ್ಟೆ. ನಾವು, ಜೆಡಿಎಸ್ ಅಣ್ಣ-ತಮ್ಮಂದಿರಂತೆ ಒಟ್ಟಾಗಿ ಟೊಂಕ ಕಟ್ಟಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. -ಆರ್.ಅಶೋಕ್, ವಿಧಾನಸಭೆ ಪ್ರತಿಪಕ್ಷ ನಾಯಕ.