

ಉಡುಪಿ: ಠೇವಣಿದಾರರಿಗೆ ಬಡ್ಡಿ ಮತ್ತು ಅಸಲು ಹಣ ಪಾವತಿಸದೆ ಕೋಟ್ಯಾಂತರರು ವಂಚನೆ ಎಸಗಿರುವ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಬಿ.ವಿ ಲಕ್ಷ್ಮೀನಾರಾಯಣ ವಿರುದ್ದ ಸೆನ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಕಾರ್ಕಳದ ಪ್ರಕಾಶ್ ಕಾಮತ್ (48) ದೂರು ನೀಡಿದ್ದು, ಉಡುಪಿ ಶಾಖೆಯಲ್ಲಿ 2019 ರಲ್ಲಿ ಎಫ್ ಡಿ ಹಣ ಇಟ್ಟಿದ್ದು, ಹಣಕ್ಕೆ ಸಹಕಾರ ಸಂಘ ಪ್ರತಿ ತಿಂಗಳು ಶೇ. 10 ಬಡ್ಡಿಯನ್ನು ಎಸ್ ಬಿ ಖಾತೆಗೆ ಹಾಕುತ್ತಿದ್ದುರು. ಹಾಗೂ 3 ವರ್ಷದ ನಂತರ ರಿನಿವಲ್ ಕೂಡಾ ಮಾಡಿದ್ದರು. ಆದರೆ ಜೂನ್ 2022 ರಿಂದ ಖಾತೆಗೆ ಬಡ್ಡಿ ಹಣವನ್ನು ಹಾಕಿರುವುದಿಲ್ಲ. ಈ ಬಗ್ಗೆ ವಿಚಾರಿಸಿದಾಗ ಸ್ವಲ್ಪ ದಿನದಲ್ಲೆ ಬಡ್ಡಿಯನ್ನು ನೀಡುವುದಾಗಿ ನಂಬಿಸುತ್ತಿದ್ದರು. ಆದರೆ ಈ ತನಕ ನೀಡಿರುವುದಿಲ್ಲ. ಬುಧವಾರ ಸಹಕಾರ ಸಂಘದ ಕಚೇರಿಗೆ ಬಂದು ನೋಡಿದಲ್ಲಿ ಮುಚ್ಚಿರುತ್ತದೆ. ಸಂಘದಲ್ಲಿ ಕೆ. ಸತ್ಯಮೂರ್ತಿ ರಾವ್, ಲೀಲಾವತಿ, ಡಿ ಭಾಸ್ಕರ್ ಕೋಟ್ಯಾನ್, ಟಿ ಕೃಷ್ಣ ಗಾಣಿಗ, ಸುರೇಶ್ ಭಟ್ ಒಟ್ಟು 40,59,000 ರೂ. ಹೂಡಿಕೆ ಮಾಡಿದ್ದಾರೆ. ಆದರೆ ಸಂಘದ ಅಧ್ಯಕ್ಷ ಬಿ ವಿ ಲಕ್ಷ್ಮೀನಾರಾಯಣ, ಮ್ಯಾನೇಜರ್ ಆಶಾ ಹಾಗೂ ಆಡಳಿತ ಮಂಡಳಿಯ ಸದಸ್ಯರು ಬಡ್ಡಿಯನ್ನು ಸರಿಯಾಗಿ ನೀಡಿರುವುದಿಲ್ಲ.
ಪ್ರಸ್ತುತ ಸಹಕಾರ ಸಂಘವನ್ನು ಮುಚ್ಚಿಕೊಂಡು ಹೋಗಿ ಮೋಸ, ನಂಬಿಕೆ ದ್ರೋಹ ಮಾಡಿರುವುದಾಗಿ ದೂರು ನೀಡಿದ್ದಾರೆ.