

ನವದೆಹಲಿ: ಭಾರತ ಮತ್ತು ಫ್ರಾನ್ಸ್ ನಡುವೆ ಕಳೆದ 60 ವರ್ಷಗಳಿಂದ ಜಾರಿಯಲ್ಲಿರುವ ತಾಂತ್ರಿಕ ಮತ್ತು ವೈಜ್ಞಾನಿಕ ಬಾಹ್ಯಾಕಾಶ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಒಪ್ಪಂದವೊಂದಕ್ಕೆ ಉಭಯ ದೇಶಗಳು ಬುಧವಾರ ಸಹಿ ಹಾಕಿವೆ.
ಬಾಹ್ಯಾಕಾಶ, ಅದರಲ್ಲೂ ವಿಶೇಷವಾಗಿ ಸುರತ ಲಭ್ಯತೆಗೆ ಸಂಬಂಧಿಸಿದ ಸಮಕಾಲೀನ ಸವಾಲುಗಳನ್ನು ಎದುರಿಸುವ ಉದ್ದೇಶದಿಂದ ದ್ವಿಪಯ ವ್ಯೂಹಾತ್ಮಕ ಮಾತುಕತೆ ಆರಂಭಿಸಲು ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ವೇಳೆ ನಿರ್ಧಾರ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ತಿಳಿಸಿದೆ. ಈ ಮಾತುಕತೆಗಳು ಬಾಹ್ಯಾಕಾಶ ಮತ್ತು ರಕ್ಷಣಾ ಸಂಸ್ಥೆಗಳ ವಿವಿಧ ತಜ್ಞರ ನಡುವೆ ಸಹಕಾರವನ್ನು ಸಾಧ್ಯಗೊಳಿಸುತ್ತದೆ. ಪ್ರಪ್ರಥಮ ಭಾರತ ಮತ್ತು ಫ್ರಾನ್ಸ್ ವ್ಯೂಹಾತ್ಮಕ ಮಾತುಕತೆ ಇದೇ ವರ್ಷ ಆದಷ್ಟು ಬೇಗ ನಡೆಯಲಿದೆ. ಈ ಬಗ್ಗೆ ಉಭಯ ದೇಶಗಳು ಸಮ್ಮತಿಸಿವೆ ಎಂದು ಸಚಿವಾಲಯ ವಿವರಿಸಿದೆ.
ಭಯೋತ್ಪಾದನೆಗೆ ವಿರೋಧ: ಅ್ಘಾನಿಸ್ತಾನವನ್ನು ಜಗತ್ತಿನ ಇತರ ಭಾಗಗಳಲ್ಲಿ ಭಯೋತ್ಪಾದನೆ ಹರಡಲು ಬಳಸುವುದಕ್ಕೆ ಭಾರತ ಮತ್ತು ಫ್ರಾನ್ಸ್ ವಿರೋಧ ವ್ಯಕ್ತಪಡಿಸಿವೆ. ತಾಲಿಬಾನ್ ಆಡಳಿತದ ಹದಗೆಡುತ್ತಿರುವ ಮಾನವೀಯ ಸನ್ನಿವೇಶ ಹಾಗೂ ಮಾನವ ಹಕ್ಕುಗಳ ಉಲ್ಲಂನೆ ಬಗ್ಗೆ ಪ್ರಧಾನಿ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರನ್ ಕಳವಳ ಸೂಚಿಸಿದ್ದಾರೆ.
ದ್ವಿಪಯ ಬಾಂಧವ್ಯ ವೃದ್ಧಿ
ದ್ವಿಪಯ ಬಾಂಧವ್ಯವನ್ನು ಬಲಪಡಿಸಿ ವಿಸ್ತರಿಸುವ ಬಗ್ಗೆ ಮೋದಿ, ಮ್ಯಾಕ್ರನ್ ವಿಸತ ಸಮಾಲೋಚನೆ ನಡೆಸಿದರು. ಮಹತ್ವಾಕಾಂಕ್ಷೆಯ ಭಾರತ ಮತ್ತು ಫ್ರಾನ್ಸ್ ವ್ಯೂಹಾತ್ಮಕ ಪಾಲುದಾರಿಕೆಯ ಮುಂದಿನ ಹಂತದ ಬಗ್ಗೆಯೂ ಅವರು ಚರ್ಚಿಸಿದರು.