ಹೈಟೆಕ್ ಚಿತಾಗಾರ ನಿರ್ಮಾಣಕ್ಕೆ ಸಹಕಾರ: ಬಿವೈಆರ್

cloth
ಜವಳಿ ವರ್ತಕರ ಸಂಘದಿಂದ ಬಿ.ವೈ.ರಾಘವೇಂದ್ರ ಅವರನ್ನು ಅಭಿನಂದಿಸಲಾಯಿತು. ಸುರೇಶ್ ಕುಮಾರ್, ಪ್ರಭಾಕರ್, ಜಾನ್ ಭಾಸ್ಕರ್, ಅನಿಲ್‌ಕುಮಾರ್ ಶೆಟ್ಟರ್, ಪ್ರಮೋದ್ ಉತ್ತರಕರ್, ಸಂತೋಷ್ ಸಾಕ್ರೆ, ಡಿ.ಪಿ.ಹರೀಶ್ ಮುಂತಾದವರಿದ್ದರು.
Published on

ಶಿವಮೊಗ್ಗ: ನಗರದ ಪಶ್ಚಿಮ ಭಾಗದಲ್ಲಿ ಜವಳಿ ವರ್ತಕರ ಸಂಘದಿಂದ ನಿರ್ಮಿಸಲು ಉದ್ದೇಶಿಸಿರುವ ಹೈಟೆಕ್ ಚಿತಾಗಾರ ನಿರ್ಮಾಣಕ್ಕೆ ಅವಶ್ಯವಿರುವ ಭೂಮಿಯನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಡಲಾಗುವುದು. ಅಗತ್ಯ ಅನುದಾನವನ್ನು ನೀಡಲಾಗುವುದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.

ಜವಳಿ ವರ್ತಕರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಭೌಗೋಳಿಕವಾಗಿ ಮತ್ತು ಜನಸಂಖ್ಯೆ ಆಧಾರದಲ್ಲಿ ವಿಸ್ತಾರಗೊಂಡಿರುವ ಶಿವಮೊಗ್ಗ ಇನ್ನೂ ಬೆಳೆಯುತ್ತಲೇ ಇದೆ. ಪಶ್ಚಿಮ ಭಾಗದ ಬಡಾವಣೆಗಳಾದ ವಿನೋಬ ನಗರ, ಕಲ್ಲಳ್ಳಿ, ಹುಡ್ಕೋ, ಕಾಶೀಪುರ, ಆಲ್ಕೋಳ, ಗಾಡಿಕೊಪ್ಪ, ಗೋಪಾಳ, ವಿಜಯನಗರ, ಸೋಮಿನಕೊಪ್ಪ, ಬೊಮ್ಮನ ಕಟ್ಟೆ ಮುಂತಾದ ಭಾಗಗಳ ಜನರಿಗಾಗಿ ಜವಳಿ ವರ್ತಕರ ಸಂಘದಿಂದ ಹೈಟೆಕ್ ಚಿತಾಗಾರ ನಿರ್ಮಿಸಲು ಉದ್ದೇಶಿಸಿರುವುದು ಒಳ್ಳೆಯ ಚಿಂತನೆಯಾಗಿದೆ ಎಂದರು.
ಕೇವಲ ಬಟ್ಟೆ ವ್ಯಾಪಾರಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೇ ಜವಳಿ ವರ್ತಕರು ಸಮಾಜಮುಖಿ ಕಾರ್ಯಗಳಿಂದ ಗಮನಸೆಳೆಯುತ್ತಿದ್ದಾರೆ. ಇವರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಅಧ್ಯಕ್ಷ ಸುರೇಶ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜಾನ್ ಬಾಸ್ಕರ್, ಕಾರ್ಯದರ್ಶಿ ಪ್ರಭಾಕರ್, ಸಹಕಾರ್ಯದರ್ಶಿ ಅನಿಲ್‌ಕುಮಾರ್ ಶೆಟ್ಟರ್, ನಿರ್ದೇಶಕ ಸಂತೋಷ್ ಸಾಕ್ರೆ, ಪ್ರಮುಖರಾದ ಪ್ರಮೋದ್ ಉತ್ತರಕರ್, ಡಿ.ಪಿ.ಹರೀಶ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net