ಸಹಕಾರ ಇಲಾಖೆ ಅಧಿಕಾರಿ ಲೋಕಾ ಬಲೆಗೆ

Lokayukta ride
Published on

ಬೆಂಗಳೂರು: ಸಹಕಾರ ಸಂಘಕ್ಕೆ ವ್ಯವಸ್ಥಾಪಕರ ನೇಮಕಕ್ಕಾಗಿ ಲಂಚಕ್ಕೆ ಬೇಡಿಕೆಯೊಡ್ಡಿದ್ದ ರಿಜಿಸ್ಟ್ರಾರ್ ಆ್ ಕೋ-ಆಪರೇಟಿವ್ ಸೊಸೈಟಿ ಸೂಪರಿಟೆಂಡೆಂಟ್‌ನನ್ನು ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಮಾಡಿದ್ದಾರೆ.

ಸೊಸೈಟಿಯ ನಗರ ವಿಭಾಗದ ಸೂಪರಿಟೆಂಡೆಂಟ್ ಶುಭಾ ಆರ್. ವಾಡ್ಕರ್ ಬಂಧಿತ ಅಧಿಕಾರಿ. ಬುಧವಾರ ದೂರುದಾರನಿಂದ 40 ಸಾವಿರ ರೂ. ಲಂಚ ಪಡೆಯುವಾಗ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಡಬ್ಲೂೃಕೆಆರ್‌ಟಿಸಿ ನೌಕರರ ಸಹಕಾರ ಸಂಘಕ್ಕೆ ಸಹಕಾರ ಇಲಾಖೆಯಿಂದ ವ್ಯವಸ್ಥಾಪಕನನ್ನು ನೇಮಕ ಮಾಡಬೇಕಾಗಿರುತ್ತದೆ. ಇದಕ್ಕೆ ದೂರುದಾರ ಅರ್ಜಿ ಸಲ್ಲಿಸಿದ್ದರು. ಪ್ರತಿನಿಧಿಯನ್ನು ನೇಮಕ ಮಾಡಲು ಆರೋಪಿ ಶುಭಾ ಆರ್. ವಾಡ್ಕರ್, 40 ಸಾವಿರ ರೂ. ಬೇಡಿಕೆ ಒಡ್ಡಿದ್ದರು.

ನೊಂದ ದೂರುದಾರ ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು, ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net