

coolie: ಎಲ್ಲರೂ ಕಾತುರದಿಂದ ಕಾಯುತ್ತಿದ್ದ ದಕ್ಷಿಣದ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ 'ಕೂಲಿ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಆಕ್ಷನ್ ಡ್ರಾಮಾ ಚಿತ್ರದ 3 ನಿಮಿಷ ಮತ್ತು 22 ಸೆಕೆಂಡುಗಳ ಟ್ರೇಲರ್ ಇಂದು ತೆರೆಕಂಡಿದ್ದು, ಅಭಿಮಾನಿಗಳ ಸಿನಿಮಾ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಕೂಲಿ' ಚಿತ್ರದ ಟ್ರೇಲರ್ ಸಂಪೂರ್ಣವಾಗಿ ರಜನಿಕಾಂತ್ ಅವರ ಮಾಸ್ ಮತ್ತು ವಿಂಟೇಜ್ ಶೈಲಿಯನ್ನು ಒಳಗೊಂಡಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಟ್ರೇಲರ್ ನಲ್ಲಿ ರಜನಿ ಅವರ ಸ್ಟೈಲಿಶ್ ಲುಕ್, ಪಂಚ್ ಡೈಲಾಗ್ಗಳು, ಆ್ಯಕ್ಷನ್ ದೃಶ್ಯಗಳು ಮತ್ತು ಮಾಸ್ ಶೈಲಿಯ ದೃಶ್ಯಗಳು ಅಭಿಮಾನಿಗಳನ್ನು ರೋಮಾಂಚನಗೊಳಿಸುತ್ತವೆ. ಕೆಂಪು ಸೂಟ್ ನಲ್ಲಿ ಉತ್ಸಾಹ ತುಂಬಿರುವ ರಜನಿ ಅವರ ಲುಕ್, 80 ರ ದಶಕದ ರಜನಿ ಅಭಿಮಾನಿಗಳನ್ನು ನೆನಪಿಸುತ್ತವೆ.
ಲೋಕೇಶ್ ಕನಕರಾಜ್ ನಿರ್ದೇಶನದ ಮತ್ತು ಸನ್ ಪಿಕ್ಚರ್ಸ್ ನಿರ್ಮಾಣದ ಕೂಲಿ ಚಿತ್ರವು ಈ ವರ್ಷದ ಭಾರತೀಯ ಸಿನಿಮಾದ ಅತಿದೊಡ್ಡ ಬಿಡುಗಡೆಗಳಲ್ಲಿ ಒಂದಾಗಿದೆ. ಅನಿರುದ್ಧ್ ರವಿಚಂದರ್ ಸಂಗೀತ ನೀಡಿರುವ ಈ ಸಿನಿಮಾ ರಜನಿಕಾಂತ್, ಅಮೀರ್ ಖಾನ್, ಉಪೇಂದ್ರ ಮತ್ತು ನಾಗಾರ್ಜುನ ಸೇರಿದಂತೆ ಬಹುದೊಡ್ಡ ನಟರ ತಾರಾಗಣವನ್ನು ಈ ಚಿತ್ರ ಒಳಗೊಂಡಿದೆ.
(ಏಜೆನ್ಸೀಸ್)
ಕೂಲಿ' ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಎ' ಪ್ರಮಾಣಪತ್ರ ನೀಡಿದೆ ಮತ್ತು ಈ ಆ್ಯಕ್ಷನ್ ಎಂಟರ್‌ಟೈನರ್ ಎರಡು ಗಂಟೆ 48 ನಿಮಿಷಗಳ ಕಾಲ ಇರಲಿದೆ. ಚಿತ್ರತಂಡವು ತನ್ನ ಹೋರಾಟದ ದೃಶ್ಯಗಳು, ಹಿಂಸೆ ಮತ್ತು ಭಾವನಾತ್ಮಕ ದೃಶ್ಯಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ವಾಸ್ತವಿಕವಾಗಿ ಚಿತ್ರಿಸುವ ಗುರಿಯನ್ನು ಹೊಂದಿರುವುದರಿಂದ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಇನ್ನೂ ಈ ಪ್ಯಾನ್-ಇಂಡಿಯಾ ಚಿತ್ರ ಇದೇ ಆಗಸ್ಟ್ 14 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು, ಚಿತ್ರವು ಎಲ್ಲಾ ಸ್ಥಳಗಳಲ್ಲಿ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುನಃ ಬರೆಯಲು ಸಜ್ಜಾಗಿದೆ.