

indigo :ಇಂಡಿಗೋದ ಮುಂಬೈ-ಕೋಲ್ಕತ್ತಾ ವಿಮಾನದಲ್ಲಿ ಸಹ ಪ್ರಯಾಣಿಕನ ಮೇಲೆ ದಾಳಿ ಮಾಡಿದ್ದ ವ್ಯಕ್ತಿಯನ್ನು ವಿಮಾನಯಾನ ಸಂಸ್ಥೆ ಹಾರಾಟದಿಂದ ಅಮಾನತುಗೊಳಿಸಿದೆ.
ಸಹ ಪ್ರಯಾಣಿಕನೊಬ್ಬನ ಕಪಾಳಮೋಕ್ಷ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ವಿಮಾನಯಾನ ಸಂಸ್ಥೆಯು ಆ ವ್ಯಕ್ತಿಯನ್ನು ವಿಮಾನ ಹಾರಾಟದಿಂದ ಅಮಾನತುಗೊಳಿಸುವ ನಿರ್ಧಾರ ಪ್ರಕಟಿಸಿದೆ.
ಇನ್ನೂ ಈ ಬಗ್ಗೆ ವಿಮಾನಯಾನ ಸಂಸ್ಥೆ ಪ್ರತಿಕ್ರಿಯಿಸಿದ್ದು, ಸಂಸ್ಥೆ ಸಿಬ್ಬಂದಿ ಮತ್ತು ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುತ್ತದೆ ಮತ್ತು ವಿಮಾನದಲ್ಲಿರುವ ಎಲ್ಲರಿಗೂ ಸುರಕ್ಷಿತ, ಗೌರವಾನ್ವಿತ ಮತ್ತು ಆರಾಮದಾಯಕ ವಾತಾವರಣವನ್ನು ಬೆಳೆಸಲು ಬದ್ಧವಾಗಿದೆ ಎಂದು ಹೇಳಿದೆ.
ಮುಂಬೈನಿಂದ ಕೋಲ್ಕತ್ತಾಗೆ ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಭಯಗೊಂಡು ವಿಮಾನದಿಂದ ಇಳಿಸುವಂತೆ ಆಗ್ರಹಿಸಿದ ವ್ಯಕ್ತಿಯೋರ್ವೊನಿಗೆ ಸಹಪ್ರಯಾಣಿಕನೋರ್ವ ಕಪಾಳ ಮೋಕ್ಷ ಮಾಡಿದ್ದ. ಅಸ್ಸಾಂನ ಉಸೈನ್ ಅಹ್ಮದ್ ಮಝುಂದಾರ್ ಎಂಬವರ ಮೇಲೆ ಸಹಪ್ರಯಾಣಿಕ ಹಲ್ಲೆ ನಡೆಸಿದ್ದ. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಸಹಪ್ರಯಾಣಿಕ ಹಲ್ಲೆ ನಡೆಸುವ ವೀಡಿಯೊ ವೈರಲ್ ಆಗಿತ್ತು. ಆತ ಯಾವುದೇ ಪ್ರಚೋದನೆಯಿಲ್ಲದೆ ಪ್ರಯಾಣಿಕ ಮತ್ತೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದಾನೆ ಎಂದು ವರದಿಯಾಗಿದೆ.
(ಏಜೆನ್ಸೀಸ್)
ಮುಂಬೈನಿಂದ ಕೋಲ್ಕತ್ತಾಗೆ ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಉಸೈನ್ ಅಹ್ಮದ್ ಮಝುಂದಾರ್ ಪ್ರಯಾಣಿಸುತ್ತಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಉಸೈನ್ ಅಹ್ಮದ್ ಮಝುಂದಾರ್ ತಮ್ಮ ಆಸನದಿಂದ ಹೊರಬರಲು ಪ್ರಯತ್ನಿಸುತ್ತಿರುವುದು, ಇಳಿಸುವಂತೆ ವಿನಂತಿಸುತ್ತಿರುವುದು ಕಾಣಬಹುದು. ವಿಮಾನದ ಸಿಬ್ಬಂದಿ ಅವರಿಗೆ ಸಮಾಧಾನ ಪಡಿಸಲು ಪಡಿಸಲು ಪ್ರಯತ್ನಿಸುತ್ತಿರುವುದು, ಮತ್ತೋರ್ವ ಪ್ರಯಾಣಿಕ ಇದ್ದಕ್ಕಿದ್ದಂತೆ ಅವರಿಗೆ ಕಪಾಳಮೋಕ್ಷ ಮಾಡಿದ್ದಾನೆ.