

ಬೆಂಗಳೂರು: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಜೂನ್ 14ರಂದು ನಗರದ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ 10 ಮತ್ತು 11ನೇ ದೀಕ್ಷಾಂತ ಘಟಿಕೋತ್ಸವ ಹಮ್ಮಿಕೊಂಡಿದ್ದು,ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ವಿದ್ವಾಂಸ ಡಾ.ಹೆಚ್.ವಿ.ನಾಗರಾಜ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಘಟಿಕೋತ್ಸವದ ನಿಮಿತ್ತ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಡಾ.ಗೌರೀ ಮಾಹುಲೀಕರ್ ,ಶುತ್ರಿಸಾಗರ ಘನಪಾಠಿ ಶಂಕರ ನಾರಾಯಣ ಭಟ್, ಪ್ರೋ.ಹಿತ್ಲಳ್ಳಿ ಸೂರ್ಯನಾರಾಯಣ ಭಟ್, ಸದ್ಗುರು ದುಂಡೇಶ್ವರ ಸ್ವಾಮೀಜಿ ಹಾಗೂ ಪ್ರೊ.ಎ.ಹರಿದಾಸ ಭಟ್ ಸೇರಿ ಹಲವರಿಗೆ ವಿದ್ಯಾವಾಚಸ್ಪತಿ ( ಗೌರವ ಡಿ.ಲಿಟ್) 4 ವಿದ್ವಾಂಸರಿಗೆ ವಿದ್ಯಾವಾರಿಧಿ ಪದವಿ ಜತೆಗೆ 44 ಸಂಶೋಧನಾ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಡಾ.ಅಹಲ್ಯಾ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಸಂಸ್ಕೃತವು ಕೇವಲ ಭಾಷೆಯಷ್ಟೇ ಅಲ್ಲದೆ, ಕಲೆ, ವಿಜ್ಞಾನ, ಸಂಸ್ಕೃತಿ,ಯೋಗ ಆಯುರ್ವೇದ, ಅರ್ಥಶಾಸ ಮುಂತಾದವುಗಳ ಆಗರವಾಗಿದೆ. ಇಂತಹ ವೇದ ಶಾಸಗಳ ಮಾಧ್ಯಮವಾದ ಸಂಸ್ಕೃತದ ಪೋಷಣೆ ಸಂವರ್ಧನೆ ವಿಶ್ವವಿದ್ಯಾಲಯದ ಧ್ಯೇಯವಾಗಿದೆ. ವಿಶ್ವವಿದ್ಯಾಲಯದಲ್ಲಿ ಕಲಿತ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿದ್ದು, ಅಯೋಧ್ಯೆಯಲ್ಲಿ ನಡೆದ 61ನೇ ರಾಷ್ಟ್ರೀಯ ಶಾಸೀಯ ಸ್ಪರ್ಧೆಗಳಲ್ಲಿ 15 ಚಿನ್ನ, 6ಬೆಳ್ಳಿ, 6ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿರುವುದು ವಿಶ್ವವಿದ್ಯಾಲಯದ ಹೆಗ್ಗಳಿಕೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಅಡಿಯಲ್ಲಿ 30 ಕಾಲೇಜುಗಳು, 650 ಪಾಠಶಾಲೆಗಳು ಸಂಸ್ಕೃತ ರಕ್ಷಣೆ ಮತ್ತು ಸಂವರ್ಧನೆಯ ಕಾರ್ಯದಲ್ಲಿ ತೊಡಗಿವೆ. ಸದ್ಯ 80 ಸಾವಿರ ವಿದ್ಯಾರ್ಥಿಗಳು ಸಂಸ್ಕೃತ ಅಧ್ಯಯನ ಮಾಡುವ ಮೂಲಕ ಸಂಸ್ಕೃತ ಬೆಳವಣಿಗಗೆ ಬುನಾದಿಯಾಗಿದ್ದಾರೆ. ಪ್ರಸ್ತುತ ವಿಶ್ವವಿದ್ಯಾಲಯದ 27 ಸಂಶೋಧನಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ 19 ಸರ್ಟಿಫಿಕೇಟ್ ಕೋರ್ಸ್‌ಗಳು ,3 ಪಿ.ಜಿ. ಡಿಪ್ಲೋಮಾ ಕೋರ್ಸ್‌ಗಳು ಹಾಗೂ 3 ಡಿಪ್ಲೋಮಾ ಕೋರ್ಸ್‌ಗಳು ಪ್ರಾರಂಭವಾಗಿದ್ದು, 4 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ ಎಂದು ಹೇಳಿದರು.
ಇನ್ಫೋಸಿಸ್ ೌಂಡೇಶನ್, ಶ್ರೀಮತಿ ಶರಾವತಿ ಭಟ್ಟ ದತ್ತಿನಿಧಿ, ಶ್ರೀಮತಿ ಸಾವಿತ್ರಿ ಎಚ್.ಎನ್ ಮತ್ತು ಸುಬ್ಬಾರಾವ್ ದತ್ತಿನಿಧಿ, ನಮ್ಮ ನಮ್ಮ ಬಳಗ ಸೇರಿ ಹಲವು ಸಂಘ ಸಂಸ್ಥೆಗಳ ಸಹಕಾರದಲ್ಲಿ ಘಟಿಕೋತ್ಸವಕ್ಕೆ ನಡೆಯುತ್ತಿದೆ ಎಂದರು.