ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಸಹಕರಿಸಿ

kr cmc
ಕೋಲಾರ ನಗರಸಭೆಯಿಂದ ನಗರದಲ್ಲಿ ಬುಧವಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀೆ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷ ಲಕ್ಷಿ$್ಮದೇವಮ್ಮ ಚಾಲನೆ ನೀಡಿದರು.
Published on

ಕೋಲಾರ: ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22ರಂದು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಯಲಿದ್ದು, ಪ್ರತಿಯೊಬ್ಬರು ಗಣತಿದಾರರಿಗೆ ಸಮರ್ಪಕ ಮಾಹಿತಿ ನೀಡುವ ಮೂಲಕ ಯಶಸ್ಸಿಗೆ ಸಹಕಾರ ನೀಡಬೇಕು ಎಂದು ನಗರಸಭೆ ಅಧ್ಯಕ್ಷ ಲಕ್ಷ್ಮೀದೇವಮ್ಮ ಹೇಳಿದರು.

ನಗರದ ವಿವಿಧ ಬಡಾವಣೆಗಳಲ್ಲಿ ನಗರಸಭೆಯಿಂದ ಬುಧವಾರ ಹಮ್ಮಿಕೊಂಡಿದ್ದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕುರಿತ ಜಾಗೃತಿ ಕಾರ್ಯಕ್ರಮಕ್ಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಇದು ಒಂದು ಜಾತಿ, ಧರ್ಮದ ಸಮೀಕ್ಷೆಯಲ್ಲ. ಸಾಮಾಜಿಕ, ಶೈಕ್ಷಣಿಕ ಸಮೀೆಯಾಗಿದ್ದು, ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಸಮೀೆ ಕಾರ್ಯವು ರಾಜ್ಯ ಸರ್ಕಾರದ ಮಹತ್ವಕಾಂಯ ಯೋಜನೆಯಾಗಿದೆ. ಇದರಲ್ಲಿ ಯಾವುದೇ ಪಕ್ಷ, ಜಾತಿ, ಧರ್ಮ ಎಂಬ ಬೇಧಬಾವವಿಲ್ಲ. ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರನ್ನು ಸಮೀೆಯಲ್ಲಿ ಗುರುತಿಸಿ ಸೌಲಭ್ಯ ಕಲ್ಪಿಸಲು ನಡೆಯುತ್ತಿದೆ. ಸಮೀಕ್ಷೆ ಕುರಿತು ಯಾರಾದರು ವದಂತಿ ಹಬ್ಬಿಸಿದರೆ ಯಾರೂ ಕಿವಿಗೊಡಬಾರದು ಎಂದರು.

ಪೌರಾಯುಕ್ತ ನವೀನ್​ ಚಂದ್ರ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ 35 ವರ್ಷಗಳಿದ್ದು, ಒಟ್ಟು 34,000 ಮನೆಗಳಿವೆ, ಯಾರು ಸಹ ಸಮೀೆಯಿಂದ ಬಿಟ್ಟು ಹೋಗಬಾರದು, ಪ್ರತಿ ಮೂರು ವಾರ್ಡ್​ಗೆ ಬಿಲ್​ಕಲೆಕ್ಟರ್​, ವಾಟರ್​ ಮಾನ್​ ಒಳಗೊಂಡ 5 ಮಂದಿ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದರು.

ನಗರಸಭೆ ಸದಸ್ಯ ಗುಣಶೇಖರ್​, ಕಂದಾಯ ಅಧಿಕಾರಿ ವೇಣು, ಕಂದಾಯ ನಿರೀಕ್ಷಕ ಕಿರಣ್​, ಸಮುದಾಯಧಿಕಾರಿ ರಾಜೇಶ್ವರಿ, ಎಒ ಕುತೇಜ, ಮುಖಂಡ ರಮೇಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net