ಹಲವು ಶಾಲೆಗಳಿಗೆ ಹೊಸ ಕಟ್ಟಡ ನಿರ್ಮಾಣ

nayana mottama
ಹಾಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡವನ್ನು ಶಾಸಕಿ ನಯನಾ ಮೋಟಮ್ಮ ಪರಿಶೀಲಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಮಾಹಿತಿ ಪಡೆದರು. ದಯಾವತಿ, ಪಂಚಾಕ್ಷರಿ, ಮಯೂರ, ಸಮೀವುಲ್ಲಾ ಶರೀಫ್ ಇತರರಿದ್ದರು.
Published on

ಮೂಡಿಗೆರೆ: ಮಳೆಯಿಂದ ಹಾನಿಯಾಗಿದ್ದ ತಾಲೂಕಿನ ಹಾಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ಶಾಸಕಿ ನಯನಾ ಮೋಟಮ್ಮ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿಥಿಲಾವಸ್ಥೆಗೆ ತಲುಪಿರುವ ತಾಲೂಕಿನ ಎಲ್ಲ ಶಾಲಾ ಕಟ್ಟಡಗಳನ್ನು ಗುರುತಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು. ಕಾಮಗಾರಿ ಪೂರ್ಣಗೊಂಡ ಶಾಲೆಗಳನ್ನು ವಿದ್ಯಾರ್ಥಿಗಳ ಬಳಕೆಗೆ ಮುಕ್ತಗೊಳಿಸಲಾಗಿದೆ. ಕೆಲವು ಶಾಲೆಗಳಲ್ಲಿ ಶೌಚಗೃಹ ಸಮರ್ಪಕವಾಗಿಲ್ಲವೆಂಬ ಮಾಹಿತಿ ಬಂದಿದ್ದು ಅವುಗಳನ್ನು ದುರಸ್ತಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಶಿಥಿಲಾವಸ್ಥೆ ತಲುಪಿರುವ ಶಾಲೆ ಕಟ್ಟಡಗಳ ಪಟ್ಟಿ ನೀಡಲು ಬಿಇಒ ಹೇಮಂತ್ ಚಂದ್ರ, ತಾಪಂ ಇಒ ದಯಾವತಿ ಅವರಿಗೆ ಸೂಚಿಸಲಾಗಿದೆ. ಅವರಿಂದ ವರದಿ ಬಂದ ಬಳಿಕ ಶಿಕ್ಷಣ ಸಚಿವರಿಗೆ ಕಳುಹಿಸಿ ಶಾಲೆಗಳ ದುರಸ್ತಿಗೆ ಬೇಕಾದ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಪಂ ಇಒ ದಯಾವತಿ, ದಾರದಹಳ್ಳಿ ಗ್ರಾಪಂ ಸದಸ್ಯರಾದ ಪಂಚಾಕ್ಷರಿ, ಮಯೂರ, ಪಿಡಿಒ ಸಮೀವುಲ್ಲಾ ಶರೀಫ್, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಸಿ.ಬಿ.ಶಂಕರ್, ಸುಧೀರ್ ಚಕ್ರಮಣಿ, ಸುರೇಂದ್ರ ಉಗ್ಗಿಹಳ್ಳಿ, ಹರೀಶ್, ರವಿ, ಕೋಮರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net